ವಾರದ ಈ ದಿನ ಪೊರಕೆ ಖರೀದಿಸಿದ್ರೆ ಧನಲಕ್ಷ್ಮೀ ನಿಮ್ಮನ್ನು ಹುಡುಕಿಕೊಂಡು ಬರ್ತಾಳೆ!

First Published | Apr 27, 2024, 5:29 PM IST

ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಪೊರಕೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನೀವು ಅನುಸರಿಸಿದರೆ, ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ತುಂಬಿರುವುದು ಮತ್ತು ಜೀವನದಲ್ಲಿ ಎಂದಿಗೂ ಹಣದ ಕೊರತೆಯಿಲ್ಲ ಎಂದು ನಂಬಲಾಗಿದೆ. 
 

ಪೊರಕೆ (broomstick) ಆರ್ಥಿಕ ಸಮೃದ್ಧಿ ಮತ್ತು ಲಕ್ಷ್ಮಿಗೆ ಸಂಬಂಧಿಸಿದೆ. ನಿಮ್ಮ ಅದೃಷ್ಟವು ಪೊರಕೆಯೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಸಂಜೆ ಮನೆಯನ್ನು ಗುಡಿಸುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಹೀಗೆ ಮಾಡಿದರೆ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಎನ್ನುವ ನಂಬಿಕೆ ಇದೆ. ಜ್ಯೋತಿಷ್ಯದ ಜೊತೆಗೆ, ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಸಂಬಂಧಿಸಿದ ಅನೇಕ ನಿಯಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆ ಖರೀದಿಸಲು ಉತ್ತಮವಲ್ಲದ ಕೆಲವು ದಿನಗಳನ್ನು ವಿವರಿಸಲಾಗಿದೆ. ಪೊರಕೆ ಖರೀದಿಸಲು ವಾಸ್ತು ಶಾಸ್ತ್ರದಲ್ಲಿ ಯಾವ ನಿಯಮಗಳನ್ನು ಹೇಳಲಾಗಿದೆ ಎಂದು ತಿಳಿಯೋಣ.
 

Vastu tips of broom

ಸೋಮವಾರ ಪೊರಕೆ ಖರೀದಿಸಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಸೋಮವಾರ (Monday) ಪೊರಕೆಗಳನ್ನು ಖರೀದಿಸಬಾರದು. ನೀವು ಸೋಮವಾರ ಪೊರಕೆ ಖರೀದಿಸಿದರೆ, ಅದು ಹಣ ಕಳೆದುಕೊಳ್ಳಬಹುದು. ಅಲ್ಲದೆ, ನಿಮ್ಮ ಮೇಲೆ ಸಾಲ ಹೆಚ್ಚಾಗಬಹುದು, ಆದ್ದರಿಂದ ನೀವು ಧನಲಕ್ಷ್ಮಿಯನ್ನು ಸಂತೋಷವಾಗಿಡಲು ಬಯಸಿದರೆ, ಸೋಮವಾರ ಪೊರಕೆ ಖರೀದಿಸುವುದನ್ನು ತಪ್ಪಿಸಿ.

Tap to resize

ಶನಿವಾರದಂದು ಪೊರಕೆ ಖರೀದಿಸಬೇಡಿ
ಶನಿವಾರ (Saturday) ಎಣ್ಣೆ ಮತ್ತು ಕಬ್ಬಿಣದ ವಸ್ತುಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ ಎಂದು ನೀವು ಕೇಳಿರಬಹುದು, ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಶನಿವಾರ ಪೊರಕೆ ಖರೀದಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವು ನಿಮ್ಮ ಮೇಲೆ ಇರೋದಿಲ್ಲ.ಶನಿವಾರ ಪೊರಕೆ ಖರೀದಿಸುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ನೀವು ಜೀವನದಲ್ಲಿ ಲಕ್ಷ್ಮಿಯ ಆಶೀರ್ವಾದವನ್ನು ಬಯಸಿದರೆ, ಶನಿವಾರ ಪೊರಕೆಗಳನ್ನು ಖರೀದಿಸಬೇಡಿ. ಅಲ್ಲದೆ, ನೀವು ಶನಿಯ ಕೋಪಕ್ಕೆ ತುತ್ತಾಗಬಹುದು.

ಪೊರಕೆಯನ್ನು ಯಾವಾಗ ಖರೀದಿಸಬೇಕು?
ಮನೆಗೆ ಪೊರಕೆ ಖರೀದಿಸಲು ಬಯಸಿದರೆ, ಶುಕ್ರವಾರ, ಮಂಗಳವಾರ ಪೊರಕೆ ಖರೀದಿಸಬೇಕು. ಇದು ಲಕ್ಷ್ಮಿ ದೇವಿಯ (Goddess Lakshmi) ಆಶೀರ್ವಾದವನ್ನು ನಿಮ್ಮ ಜೀವನದಲ್ಲಿ ಇಟ್ಟುಕೊಳ್ಳುವುದಲ್ಲದೆ, ನಿಮ್ಮ ಅದೃಷ್ಟವನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಶುಕ್ರವಾರ ಮತ್ತು ಮಂಗಳವಾರ ಪೊರಕೆ ಖರೀದಿಸುವುದು ಮತ್ತು ಧಂತೇರಸ್ ಮತ್ತು ದೀಪಾವಳಿಯಂದು ಪೊರಕೆ ಖರೀದಿಸೋದು ಆರ್ಥಿಕ ಸಮೃದ್ಧಿಗೆ ಒಳ್ಳೆಯದು.

ಪಂಚಕ್ ನಲ್ಲಿಯೂ ಪೊರಕೆ ಖರೀದಿಸಬೇಡಿ
ಧಾರ್ಮಿಕ ನಂಬಿಕೆ ಪ್ರಕಾರ, ಪಂಚಕ್ ಅಂದರೆ ಕೆಲವು ತಿಂಗಳಲ್ಲಿ ಐದು ನಕ್ಷತ್ರಗಳು ಸಂಯೋಗವಾಗುತ್ತವೆ. ಆ ದಿನವನ್ನು ಪಂಚಕ್ ಎನ್ನಲಾಗುತ್ತದೆ. ಈ ದಿನ ಅಶುಭವಾಗಿದೆ. ಹಾಗಾಗಿ ಪೊರಕೆಗಳನ್ನು ಆ ದಿನ ಖರೀದಿಸಬಾರದು.

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಎಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ (Vastu)ಪ್ರಕಾರ, ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು (Prosperity) ಬಯಸಿದರೆ, ಪೊರಕೆಯನ್ನು ಮನೆಯ ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿಡಬೇಕು. ಇದು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು (Positive Energy) ಹೆಚ್ಚಿಸುತ್ತೆ. ಇದಲ್ಲದೆ, ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಪೊರಕೆಯನ್ನು ಎಂದಿಗೂ ಇಡಬೇಡಿ.

Latest Videos

click me!