ಈ ವಸ್ತುಗಳನ್ನು ದಾನ ಮಾಡುವುದು ಮಹಾಪಾಪ..!

First Published | Jul 29, 2021, 7:14 PM IST

ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆಯಾದರೂ, ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಯಾವ ವಸ್ತುಗಳನ್ನು ದಾನ ಮಾಡಬೇಕು..? ಯಾವ ವಸ್ತುಗಳನ್ನು ದಾನ ಮಾಡಬಾರದು..? ಯಾವ ವಸ್ತುಗಳನ್ನು ದಾನ ಮಾಡುವುದು ಪಾಪದ ಕೆಲಸ..? ಸಂಪೂರ್ಣ ಮಾಹಿತಿ ಇಲ್ಲಿದೆ.. 

ಹಿಂದೂ ಧರ್ಮಗ್ರಂಥಗಳಲ್ಲಿ, ದಾನವನ್ನು ಶ್ರೇಷ್ಠ ಹಾಗೂ ಪುಣ್ಯದ ಕೆಲಸವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ದಾನ ಮಾಡುವುದರಿಂದ, ವ್ಯಕ್ತಿಯ ಅನೇಕ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಇದೆ. ಅಲ್ಲದೆ, ದೇವರ ಆಶೀರ್ವಾದವನ್ನೂ ಸಹ ಪಡೆಯಲಾಗುತ್ತದೆ, ಆದರೆ ಒಬ್ಬ ವ್ಯಕ್ತಿಯು ಆಕಸ್ಮಿಕವಾಗಿ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಅದು ಅವನಿಗೆ ಹಾನಿ ಮಾಡುತ್ತದೆ. ದಾನವನ್ನು ದೊಡ್ಡ ಪಾಪವೆಂದು ಪರಿಗಣಿಸುವಂತಹ ಕೆಲವು ವಿಷಯಗಳು ನಮ್ಮ ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ಯಾವ ದಾನ ಮಹಾಪಾಪ..?
ಇದು ನಿಮ್ಮ ಶಾಂತಿ, ನೆಮ್ಮದಿಯನ್ನು ನಾಶ ಮಾಡುವುದುಯಾವುದೇ ಓರ್ವ ವ್ಯಕ್ತಿಯು ಒಂದು ರೀತಿಯ ತೀಕ್ಷ್ಣವಾದ ಮತ್ತು ಹರಿತವಾದ ವಸ್ತುಗಳನ್ನು ಇತರ ವ್ಯಕ್ತಿಗೆ ಮರೆತೂ ಕೂಡ ದಾನ ಮಾಡಲು ಹೋಗಬೇಡಿ. ಇದನ್ನು ದಾನ ಮಾಡುವುದರಿಂದ ಶಾಂತಿ ಮತ್ತು ಸುಖ ಭಂಗವಾಗುತ್ತದೆ. ಆದ್ದರಿಂದ ಈ ವಸ್ತುಗಳನ್ನು ದಾನ ಮಾಡಲು ಹೋಗದಿರಿ.
Tap to resize

ಶನಿ ದೋಷ ಹೆಚ್ಚಾಗುವುದುಹಿಂದೂ ಧರ್ಮಗ್ರಂಥಗಳ ಪ್ರಕಾರ, ತನ್ನ ಜಾತಕದಲ್ಲಿ ಶನಿ ದೋಷವಿರುವ ವ್ಯಕ್ತಿಗಳು ಇತರರಿಗೆ ತೈಲವನ್ನು ದಾನ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಇದರಿಂದ ಅವರ ಶನಿ ದೋಷವು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
ದಾನ ಮಾಡುವಾಗ ತೈಲ ಎಂದಿಗೂ ಹಾಳಾಗಿರಬಾರದು. ಕೆಟ್ಟ ಎಣ್ಣೆಯನ್ನು ದಾನ ಮಾಡುವುದು ಅಸಹ್ಯವೆಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗಿದ್ದ ಶನಿ ದೋಷ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗದು.
ವ್ಯವಹಾರದಲ್ಲಿ ನಷ್ಟಪ್ಲಾಸ್ಟಿಕ್ ಮತ್ತು ಉಕ್ಕಿನ ಅಥವಾ ಕಬ್ಬಿಣದಿಂದ ತಯಾರಿಸಿದ ಪಾತ್ರೆಗಳನ್ನು ಎಂದಿಗೂ ದಾನ ಮಾಡಬಾರದು ಎಂದು ಧರ್ಮಗ್ರಂಥಗಳು ಹೇಳುತ್ತವೆ.
ಉಕ್ಕಿನ ಪಾತ್ರೆಗಳನ್ನು ದಾನ ಮಾಡುವುದರಿಂದ ಓರ್ವ ವ್ಯಕ್ತಿಯ ಶಾಂತಿ ಮತ್ತು ಸಂತೋಷ ಹಾಳಾಗುತ್ತದೆ, ಒಂದು ವೇಳೆ ಪ್ಲಾಸ್ಟಿಕ್ ಪಾತ್ರೆಗಳನ್ನು ದಾನ ಮಾಡುವುದರಿಂದ ಆ ವ್ಯಕ್ತಿಯ ವ್ಯವಹಾರವು ಕುಸಿಯಲು ಪ್ರಾರಂಭಿಸುತ್ತದೆ.
ಇದು ಅನಾರೋಗ್ಯಕ್ಕೆ ಕಾರಣಹಳೆಯ ಆಹಾರವನ್ನು ಎಂದಿಗೂ ದಾನ ಮಾಡಬಾರದು, ಅಂದರೆ ಹಿಂದಿನ ದಿನ ಮಾಡಿದ ಆಹಾರವನ್ನು ಅಥವಾ ಹಾಳಾದ ಆಹಾರವನ್ನು ದಾನ ಮಾಡಬಾರದು.
ಹಸು ಮತ್ತು ನಾಯಿ ಇತ್ಯಾದಿಗಳಿಗೆ ಹಳೆಯ ರೊಟ್ಟಿಯನ್ನು ನೀಡಬಾರದು. ಹಳೆಯ ಆಹಾರವನ್ನು ಯಾರಿಗಾದರೂ ದಾನ ಮಾಡುವ ಮೂಲಕ, ಮನೆಯ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ.
ನಷ್ಟಕ್ಕೆ ಕಾರಣವಾಗುವುದುಹಿಂದೂ ಧರ್ಮಗ್ರಂಥಗಳಲ್ಲಿ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಒಬ್ಬರು ಎಂದಿಗೂ ಪೊರಕೆಯನ್ನು ದಾನ ಮಾಡಬಾರದು.
ಪೊರಕೆ ದಾನ ಮಾಡುವುದರಿಂದ, ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಇದರಿಂದಾಗಿ ಯಾವಾಗಲೂ ಹಣದ ನಷ್ಟವನ್ನು ಅನುಭವಿಸುವಿರಿ ಮತ್ತು ಆರ್ಥಿಕ ಸಮಸ್ಯೆ ಬೆಂಬಿಡದೆ ಕಾಡುವುದು.

Latest Videos

click me!