ನಾಲ್ಕು ರಾಶಿಯ ಪುರುಷರು ಪತ್ನಿಗೆ ನಿಷ್ಠಾವಂತ ಪತಿ ಆಗಿರ್ತಾರೆ; ಹೆಂಡ್ತಿಯನ್ನು ಆರಾಧಿಸೋ ಗಂಡ

Published : Jul 04, 2026, 11:50 AM IST

ಜ್ಯೋತಿಷ್ಯದ ಪ್ರಕಾರ, ಕೆಲವು ನಿರ್ದಿಷ್ಟ ರಾಶಿಯ ಪುರುಷರು ತಮ್ಮ ಪತ್ನಿಗೆ ಅತ್ಯುತ್ತಮ ಹಾಗೂ ನಂಬಿಕಸ್ಥ ಪತಿಯಾಗಿರುತ್ತಾರೆ. ನಾಲ್ಕು ರಾಶಿಯ ಪುರುಷರು ನಿಷ್ಠೆ, ಕಾಳಜಿ, ಜವಾಬ್ದಾರಿ ಮತ್ತು ರಕ್ಷಣೆಯಂತಹ ಗುಣಗಳಿಂದಾಗಿ ಆದರ್ಶ ಸಂಗಾತಿಗಳಾಗುತ್ತಾರೆ.

PREV
15
ಅತ್ಯುತ್ತಮ ಹಾಗೂ ನಂಬಿಕಸ್ಥ ಗಂಡ

ಕೆಲವು ನಿರ್ದಿಷ್ಟ ರಾಶಿಯ ಪುರುಷರು ತಮ್ಮ ಪತ್ನಿಗೆ ಅತ್ಯುತ್ತಮ ಹಾಗೂ ನಂಬಿಕಸ್ಥ ಗಂಡನಾಗಿರುತ್ತಾರೆ ಎಂದು ಜ್ಯೋತಿಷ್ಯ ಹೇಳುತ್ತದೆ. ನಿಷ್ಠೆ, ಕಾಳಜಿ ಮತ್ತು ರಕ್ಷಣೆಯಂತಹ ಉತ್ತಮ ಗುಣಗಳು ಹೆಚ್ಚಾಗಿರುವ ಆ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

25
ರ್ಕಾಟಕ ರಾಶಿ

ಚಂದ್ರನನ್ನು ಅಧಿಪತಿಯಾಗಿ ಹೊಂದಿರುವ ಕರ್ಕಾಟಕ ರಾಶಿಯ ಪುರುಷರು, ಸಹಜವಾಗಿಯೇ ಇತರರ ಮೇಲೆ ಹೆಚ್ಚು ಪ್ರೀತಿ ಮತ್ತು ಕಾಳಜಿ ತೋರುತ್ತಾರೆ. ತಮ್ಮ ಸಂಗಾತಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದರಲ್ಲಿ ಇವರಿಗೆ ಇವರೇ ಸಾಟಿ. ಕುಟುಂಬದ ಹಿತಾಸಕ್ತಿಗೆ ಇವರು ಯಾವಾಗಲೂ ಮೊದಲ ಆದ್ಯತೆ ನೀಡುತ್ತಾರೆ. 

ನಿಮ್ಮನ್ನು ಭಾವನಾತ್ಮಕವಾಗಿ ಅರ್ಥಮಾಡಿಕೊಳ್ಳುವ ಗುಣ ಇವರಲ್ಲಿದೆ. ಕುಟುಂಬದ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳದೆ, ನಗುಮೊಗದಿಂದ ಸ್ವೀಕರಿಸುತ್ತಾರೆ. ಶಾಂತಿಯುತ, ಪ್ರೀತಿಯ ದಾಂಪತ್ಯ ಜೀವನವನ್ನು ನೀಡುವುದರಲ್ಲಿ ಇವರು ನಿಪುಣರು.

35
ಮಕರ ರಾಶಿ

ಮಕರ ರಾಶಿಯ ಪುರುಷರು ಕಠಿಣ ಪರಿಶ್ರಮಿಗಳು ಮತ್ತು ಉನ್ನತ ಗುರಿಗಳನ್ನು ಹೊಂದಿದವರಾಗಿರುತ್ತಾರೆ. ಒಮ್ಮೆ ಯಾರಿಗಾದರೂ ಮಾತು ಕೊಟ್ಟರೆ, ಎಷ್ಟೇ ಕಷ್ಟವಾದರೂ ಅದನ್ನು ಉಳಿಸಿಕೊಳ್ಳಬೇಕು ಎಂದು ಭಾವಿಸುವವರು. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತು, ಪತ್ನಿ ಮತ್ತು ಮಕ್ಕಳನ್ನು ರಕ್ಷಣಾ ಕವಚದಂತೆ ಕಾಪಾಡುತ್ತಾರೆ. 

ಕೊಟ್ಟ ಮಾತನ್ನು ಮುರಿಯದ ನಂಬಿಕಸ್ಥರು ಇವರು. ಕುಟುಂಬದ ಭವಿಷ್ಯದ ಭದ್ರತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಗಂಭೀರ, ಸ್ಥಿರ ಮತ್ತು ಪ್ರಬುದ್ಧ ಸಂಬಂಧವನ್ನು ಬಯಸುವ ಮಹಿಳೆಯರಿಗೆ ಇವರು ಉತ್ತಮ ಜೋಡಿ.

45
ವೃಷಭ ರಾಶಿ

ಶುಕ್ರನ ಆಧಿಪತ್ಯವಿರುವ ವೃಷಭ ರಾಶಿಯ ಪುರುಷರು ಪ್ರೀತಿ ಮತ್ತು ದಾಂಪತ್ಯ ಎರಡರಲ್ಲೂ ಹೆಚ್ಚು ಸಮರ್ಪಣಾ ಭಾವದಿಂದ ಇರುತ್ತಾರೆ. ಇವರಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಸಹಜವಾಗಿಯೇ ಇರುತ್ತದೆ. ಅಲ್ಪಾವಧಿಯ ಸಂಬಂಧಗಳನ್ನು ಬದಿಗಿಟ್ಟು, ದೀರ್ಘಕಾಲದ ಬಾಂಧವ್ಯ ಮತ್ತು ಕುಟುಂಬಕ್ಕೆ ಇವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆ, ಐಷಾರಾಮಿ ಸೌಲಭ್ಯಗಳು ಮತ್ತು ಪ್ರೀತಿ ನೀಡುವ ಗಂಡ ಬೇಕು ಎಂದು ನೀವು ಬಯಸಿದರೆ, ವೃಷಭ ರಾಶಿಯ ಪುರುಷರು ನಿಮಗೆ ಅತ್ಯುತ್ತಮ ಆಯ್ಕೆ.

55
ಕನ್ಯಾ ರಾಶಿ

ಕನ್ಯಾ ರಾಶಿಯ ಪುರುಷರು ಜೀವನದ ಪ್ರತಿಯೊಂದು ವಿಷಯವನ್ನು ಅಚ್ಚುಕಟ್ಟಾಗಿ ಮತ್ತು ಯೋಜನಾಬದ್ಧವಾಗಿ ಮಾಡಲು ಇಷ್ಟಪಡುತ್ತಾರೆ. ಇವರಲ್ಲಿ ಜ್ಞಾನ, ಹಾಸ್ಯ ಪ್ರಜ್ಞೆ ಮತ್ತು ಇತರರ ಅಗತ್ಯಗಳನ್ನು ತಕ್ಷಣವೇ ಪೂರೈಸುವ ಗುಣ ಹೆಚ್ಚಾಗಿರುತ್ತದೆ. ತಮ್ಮ ಪತ್ನಿಯ ಕಷ್ಟಗಳನ್ನು ಕಡಿಮೆ ಮಾಡಿ, ಅವರ ಜೀವನವನ್ನು ಹೇಗೆ ಸುಲಭಗೊಳಿಸಬಹುದು ಎಂದು ಇವರು ಯಾವಾಗಲೂ ಯೋಚಿಸುತ್ತಿರುತ್ತಾರೆ. ಶಿಸ್ತುಬದ್ಧ, ಯೋಜಿತ ಜೀವನ ಮತ್ತು ಪ್ರತಿಯೊಂದು ಸಣ್ಣ ವಿಷಯದಲ್ಲೂ ನಿಜವಾದ ಕಾಳಜಿ ತೋರುವ ಸಂಗಾತಿ ಬೇಕೆಂದು ಬಯಸುವ ಮಹಿಳೆಯರಿಗೆ ಕನ್ಯಾ ರಾಶಿಯ ಪುರುಷರು ಸೂಕ್ತ ಆಯ್ಕೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories