ವರಮಹಾಲಕ್ಷ್ಮಿ ಹಬ್ಬದ ಜೊತೆ 3 ರಾಶಿಗಳಿಗೆ ಶುಕ್ರನ ಕೃಪೆ; ಡಬಲ್ ಸ್ಪೀಡ್‌ನಲ್ಲಿ ಅದೃಷ್ಟ

Published : Aug 20, 2026, 09:35 AM IST

2026ರ ಆಗಸ್ಟ್ ತಿಂಗಳಲ್ಲಿ ಶುಕ್ರನು ಕನ್ಯಾ ರಾಶಿಯಲ್ಲಿ ಸಂಚರಿಸುವುದರಿಂದ, ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ವಿಶೇಷ ಫಲಗಳು ದೊರೆಯಲಿವೆ. ಈ ಸಂಚಾರವು 3 ರಾಶಿಯವರಿಗೆ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಕೌಟುಂಬಿಕ ಜೀವನದಲ್ಲಿ ಅನಿರೀಕ್ಷಿತ ಧನಾತ್ಮಕ ಬದಲಾವಣೆಗಳನ್ನು ತರಲಿದೆ.

PREV
14
ಶುಕ್ರನ ಸಂಚಾರ

ಜ್ಯೋತಿಷ್ಯದಲ್ಲಿ ಸಂಪತ್ತು, ಐಷಾರಾಮಿ, ಪ್ರೀತಿ, ಕಲೆ ಮತ್ತು ಆರ್ಥಿಕ ಸಮೃದ್ಧಿಯ ಗ್ರಹವಾದ ಶುಕ್ರನ ಸಂಚಾರವು ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. 2026ರ ಆಗಸ್ಟ್ ತಿಂಗಳಲ್ಲಿ ಶುಕ್ರನು ಕನ್ಯಾ ರಾಶಿಯಲ್ಲಿ ಇರುತ್ತಾನೆ ಎಂದು ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳು ಹೇಳುತ್ತವೆ. ಲಕ್ಷ್ಮಿ ಪೂಜೆ ನಡೆಯುವ ಸಮಯದಲ್ಲಿ ಶುಕ್ರನ ಸ್ಥಾನವು ಅನುಕೂಲಕರವಾಗಿದ್ದರೆ, ಕೆಲವು ರಾಶಿಯವರಿಗೆ ಹಣಕಾಸಿನ ಅವಕಾಶಗಳು ಹೆಚ್ಚಾಗಬಹುದು

24
ತುಲಾ ರಾಶಿ

ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ಇದರಿಂದಾಗಿ ಶುಕ್ರನಿಗೆ ಸಂಬಂಧಿಸಿದ ಸಮಯವು ಈ ರಾಶಿಯವರಿಗೆ ಸಾಮಾನ್ಯವಾಗಿ ಮಹತ್ವದ್ದಾಗಿರುತ್ತದೆ.

  • ವೃತ್ತಿ ಅಥವಾ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ
  • ಹೊಸ ಜವಾಬ್ದಾರಿ ಅಥವಾ ಪ್ರಮುಖ ಅವಕಾಶ ನಿಮ್ಮದಾಗಲಿದೆ.
  • ವ್ಯಾಪಾರದಲ್ಲಿ ಹೊಸ ಸಂಪರ್ಕದಿಂದ ಲಾಭ
  • ಸೌಂದರ್ಯ, ಉಡುಪು, ಕಲೆ, ವಿನ್ಯಾಸ, ಮಾಧ್ಯಮ, ಆಹಾರ, ಐಷಾರಾಮಿ ವಸ್ತುಗಳಂತಹ ಕ್ಷೇತ್ರಗಳಲ್ಲಿರೋರಿಗೆ ಹೊಸ ಅವಕಾಶ
  • ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಸಂಬಂಧಿಸಿದ ಮಾತುಕತೆ ಆರಂಭವಾಗುವ ಸಾಧ್ಯತೆ
  • ಅನಿರೀಕ್ಷಿತ ಒಳ್ಳೆಯ ಸುದ್ದಿ ನಿಮ್ಮ ಮನಸ್ಥಿತಿಯನ್ನೇ ಬದಲಾಯಿಸಬಹುದು.
34
ಮಕರ ರಾಶಿ
  • ಹಲವು ಬಾರಿ ಪ್ರಯತ್ನಿಸಿದರೂ ಆಗದಿದ್ದ ಒಂದು ಕೆಲಸ ಈಗ ಸಕಾರಾತ್ಮಕವಾಗಿ ಸಾಗಲು ಆರಂಭಿಸುತ್ತದೆ
  • ಉದ್ಯೋಗ ಬದಲಾವಣೆ, ಹೊಸ ವ್ಯಾಪಾರ ಪ್ರಯತ್ನ ಅಥವಾ ಹೆಚ್ಚುವರಿ ಆದಾಯದ ಯೋಜನೆಯ ಅವಕಾಶ
  • ಸಾಲ ಅಥವಾ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಹಣವನ್ನು ಯೋಜನಾಬದ್ಧವಾಗಿ ನಿಭಾಯಿಸಿ
  • ನಿರೀಕ್ಷಿಸುತ್ತಿದ್ದ ಹಣ ಸಿಗುವ ಸಾಧ್ಯತೆ
  • ಕುಟುಂಬದಲ್ಲಿ ಶಾಂತಿ, ಸಂಗಾತಿಯ ಬೆಂಬಲ
  • ನಿರಂತರ ಸಣ್ಣ ಅವಕಾಶಗಳ ಮೂಲಕ ಆರ್ಥಿಕ ಸ್ಥಿತಿ ನಿಧಾನವಾಗಿ ಬಲಗೊಳ್ಳುತ್ತದೆ.
44
ವೃಷಭ ರಾಶಿ

ವೃಷಭ ರಾಶಿಯ ಅಧಿಪತಿಯೇ ಶುಕ್ರ. ಹಾಗಾಗಿ, ಶುಕ್ರನ ಚಲನೆಯು ಈ ರಾಶಿಯವರಿಗೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ.

  • ತಡವಾಗುತ್ತಿದ್ದ ಹಣ ಕೈಗೆ ಬರುವ ಸಾಧ್ಯತೆ
  • ವ್ಯಾಪಾರ ಮಾಡುವವರಿಗೆ ಹೊಸ ಗ್ರಾಹಕರು, ಹೊಸ ಒಪ್ಪಂದಗಳು ಅಥವಾ ಅನಿರೀಕ್ಷಿತ ಆದಾಯದ ಅವಕಾಶ
  • ಉದ್ಯೋಗದಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ, ಸಂಬಳ ಹೆಚ್ಚಳ ಅಥವಾ ಬಡ್ತಿ
  • ಕುಟುಂಬದಲ್ಲಿ ಬಹಳ ದಿನಗಳಿಂದ ಕೊಳ್ಳಬೇಕೆಂದಿದ್ದ ವಸ್ತು ಅಥವಾ ಮನೆಗೆ ಸಂಬಂಧಿಸಿದ ಆಸೆ ಈಡೇರಬಹುದು.
  • ಆದಾಯ ಹೆಚ್ಚಳದ ಜೊತೆ ಹಣ ಉಳಿಸಬೇಕು ಎಂಬ ಆಲೋಚನೆ ಬರಲಿದೆ

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories