
ಜ್ಯೋತಿಷ್ಯದಲ್ಲಿ ಪ್ರೀತಿ, ಮದುವೆ, ಐಷಾರಾಮಿ ಜೀವನ, ಸೌಂದರ್ಯ ಮತ್ತು ಸಂಪತ್ತಿಗೆ ಶುಕ್ರನನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಒಬ್ಬರ ಜೀವನದಲ್ಲಿ ಸಂಬಂಧಗಳು ಎಷ್ಟು ಖುಷಿ ಕೊಡುತ್ತವೆ, ಆರ್ಥಿಕ ಸ್ಥಿತಿ ಹೇಗಿರುತ್ತದೆ ಅನ್ನೋದನ್ನು ತಿಳಿಯಲು ಶುಕ್ರನ ಸ್ಥಾನ ನೋಡಲಾಗುತ್ತದೆ.
ಅಕ್ಟೋಬರ್ 3ರಿಂದ ವಕ್ರ ಚಲನೆಯಲ್ಲಿದ್ದ ಶುಕ್ರ, ನವೆಂಬರ್ 14ರ ಮುಂಜಾನೆ ನೇರ ಚಲನೆಗೆ ಮರಳಲಿದ್ದಾನೆ. ಸುಮಾರು 42 ದಿನಗಳ ಕಾಲ ನಡೆದ ಈ ವಕ್ರ ಸಂಚಾರ ಅಂತ್ಯವಾಗುತ್ತಿರುವುದು ಜ್ಯೋತಿಷ್ಯದ ಪ್ರಕಾರ ಬಹುದೊಡ್ಡ ಬದಲಾವಣೆಯಾಗಿದೆ.
ಪ್ರೇಮ ಸಂಬಂಧಗಳಲ್ಲಿದ್ದ ಗೊಂದಲಗಳು ದೂರವಾಗಿ, ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶ ಸಿಗಲಿದೆ. ಮದುವೆಗಾಗಿ ಕಾಯುತ್ತಿರುವವರಿಗೆ ಹೊಸ ಸಂಬಂಧಗಳ ಮಾತುಕತೆ ಮುಂದವರಿಯಬಹುದು. ಹಣಕಾಸಿನ ವಿಚಾರದಲ್ಲಿ ಹೊಸ ಐಡಿಯಾಗಳು ಬರಬಹುದು. ಕಲೆ, ಸೌಂದರ್ಯ, ಡಿಸೈನಿಂಗ್, ಮನರಂಜನೆ ಕ್ಷೇತ್ರದಲ್ಲಿರುವವರಿಗೆ ತಮ್ಮ ಪ್ರತಿಭೆ ತೋರಿಸಲು ಒಳ್ಳೆ ಅವಕಾಶ ಸಿಗಲಿದೆ.
ಬಹಳ ದಿನಗಳಿಂದ ಕಾಯುತ್ತಿದ್ದ ಹಣಕಾಸಿನ ವಿಚಾರಗಳಲ್ಲಿ ಪಾಸಿಟಿವ್ ಬೆಳವಣಿಗೆ ಆಗಬಹುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಸಂಪರ್ಕಗಳು ಬೆಳೆಯುವ ಸಾಧ್ಯತೆ ಇದೆ. ಲವ್ ಲೈಫ್ನಲ್ಲೂ ಸ್ನೇಹಿತರ ಮೂಲಕ ಹೊಸ ಪರಿಚಯಗಳು ಸಿಗಬಹುದು. ಈಗಾಗಲೇ ಪ್ರೀತಿಯಲ್ಲಿರುವವರು ತಮ್ಮ ಭವಿಷ್ಯದ ಪ್ಲಾನ್ಗಳ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯ. ಹೊಸ ಅವಕಾಶಗಳು ಸಿಕ್ಕರೂ ಅವುಗಳನ್ನು ಸರಿಯಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ.
ಮಕರ ರಾಶಿಯವರಿಗೆ ಶುಕ್ರನು ಒಂಬತ್ತನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯದಲ್ಲಿ ಒಂಬತ್ತನೇ ಮನೆ ಅದೃಷ್ಟ, ತಂದೆ, ಗುರು, ಉನ್ನತ ಶಿಕ್ಷಣ ಮತ್ತು ದೂರದ ಪ್ರಯಾಣವನ್ನು ಸೂಚಿಸುತ್ತದೆ. ಹೀಗಾಗಿ ಬಹಳ ದಿನಗಳಿಂದ ಮುಂದೂಡುತ್ತಿದ್ದ ಕೆಲವು ಪ್ಲಾನ್ಗಳನ್ನು ಮತ್ತೆ ಶುರು ಮಾಡುವ ಯೋಚನೆ ಬರಬಹುದು. ಉನ್ನತ ಶಿಕ್ಷಣ, ಹೊಸ ಸ್ಕಿಲ್ ಕಲಿಯುವುದು ಹಾಗೂ ವಿದೇಶಕ್ಕೆ ಸಂಬಂಧಿಸಿದ ಪ್ರಯತ್ನಗಳತ್ತ ಫೋಕಸ್ ಮಾಡಬಹುದು.
ಪ್ರೀತಿಯ ವಿಚಾರದಲ್ಲಿ ಭವಿಷ್ಯದ ಬಗೆಗಿನ ಮಾತುಕತೆಗಳು ಪ್ರಾಮುಖ್ಯತೆ ಪಡೆಯಲಿವೆ. ಮದುವೆಗೆ ಟ್ರೈ ಮಾಡುತ್ತಿರುವವರಿಗೆ ಮನೆಯವರ ಮೂಲಕ ಹೊಸ ಮಾತುಕತೆಗಳು ಶುರುವಾಗಬಹುದು. ಆರ್ಥಿಕ ವಿಚಾರಗಳಲ್ಲಿ ಹೊಸ ಪ್ಲಾನ್ ಮಾಡಲು ಮತ್ತು ಉಳಿತಾಯ ಹೆಚ್ಚಿಸಲು ಇದು ಬೆಸ್ಟ್ ಟೈಮ್.
ಆಫೀಸ್ನಲ್ಲಿ ಹೊಸ ಜವಾಬ್ದಾರಿಗಳು ಅಥವಾ ತಮ್ಮ ಸ್ಕಿಲ್ ಪ್ರೂವ್ ಮಾಡಲು ಅವಕಾಶಗಳು ಸಿಗಬಹುದು. ಕೆಲಸ ಹುಡುಕುತ್ತಿರುವವರು ಹೊಸ ಉದ್ಯೋಗಾವಕಾಶಗಳತ್ತ ಗಮನ ಹರಿಸಬಹುದು. ವ್ಯಾಪಾರ ಮಾಡುವವರಿಗೆ ಗ್ರಾಹಕರೊಂದಿಗೆ ಒಳ್ಳೆ ಕನೆಕ್ಷನ್ ಬೆಳೆಸುವ ಅವಕಾಶ ಸಿಗಲಿದೆ. ಅದರಲ್ಲೂ ಬ್ಯೂಟಿ, ಬಟ್ಟೆ, ಡೆಕೋರೇಷನ್, ಕಲೆ ಮತ್ತು ಐಷಾರಾಮಿ ವಸ್ತುಗಳ ಬ್ಯುಸಿನೆಸ್ನಲ್ಲಿರುವವರು ಹೊಸ ಪ್ರಯತ್ನಗಳಿಗೆ ಕೈಹಾಕಬಹುದು. ಕೌಟುಂಬಿಕ ಜೀವನದಲ್ಲಿ ಕೆಲಸ ಮತ್ತು ಪರ್ಸನಲ್ ಲೈಫ್ ನಡುವೆ ಬ್ಯಾಲೆನ್ಸ್ ಮಾಡುವುದು ತುಂಬಾ ಮುಖ್ಯ.
ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಕೂತು ಬಗೆಹರಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಲಿದೆ. ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದಾಯವನ್ನು ಉಳಿತಾಯವಾಗಿ ಬದಲಾಯಿಸುವತ್ತ ಗಮನ ಹರಿಸಬೇಕಾದ ಸಮಯ ಇದು. ಬಾಕಿ ಉಳಿದಿರುವ ಹಣಕಾಸಿನ ವಿಚಾರಗಳಲ್ಲಿ ಪ್ರಗತಿ ಕಾಣಬಹುದು. ವಿವಾಹಿತ ದಂಪತಿಗಳಿಗೆ ಕೌಟುಂಬಿಕ ಜವಾಬ್ದಾರಿಗಳನ್ನು ಹಂಚಿಕೊಳ್ಳುವಲ್ಲಿ ಒಳ್ಳೆ ಅಂಡರ್ಸ್ಟ್ಯಾಂಡಿಂಗ್ ಬರಲಿದೆ.
ಶುಕ್ರನು ನೇರ ಚಲನೆಗೆ ಮರಳುವುದರಿಂದ ಎಲ್ಲರ ಜೀವನದಲ್ಲೂ ಒಂದೇ ರೀತಿಯ ಬದಲಾವಣೆಗಳು ಆಗುತ್ತವೆ ಅಂತ ಹೇಳೋಕಾಗಲ್ಲ. ಅದರಲ್ಲೂ ವೇದ ಜ್ಯೋತಿಷ್ಯದಲ್ಲಿ ಕನ್ಯಾ ರಾಶಿಯನ್ನು ಶುಕ್ರನ ನೀಚ ರಾಶಿ ಅಂತ ಪರಿಗಣಿಸಲಾಗುತ್ತದೆ.
ಹಾಗಾಗಿ, ವಕ್ರ ನಿವೃತ್ತಿ ಆಗುತ್ತಿದ್ದಾನೆ ಅನ್ನೋ ಒಂದೇ ಕಾರಣಕ್ಕೆ ಶುಕ್ರನಿಗೆ ಸಂಬಂಧಿಸಿದ ಎಲ್ಲಾ ಫಲಿತಾಂಶಗಳು ತಕ್ಷಣವೇ ಪಾಸಿಟಿವ್ ಆಗಿಬಿಡುತ್ತವೆ ಅಂತ ಅಂದುಕೊಳ್ಳಬಾರದು. ಒಬ್ಬರ ಜಾತಕದಲ್ಲಿ ಶುಕ್ರನಿರುವ ಸ್ಥಾನ, ಅವರ ದಶಾ ಭುಕ್ತಿ, ಲಗ್ನ, ಬೇರೆ ಗ್ರಹಗಳ ದೃಷ್ಟಿ ಮತ್ತು ಸಂಯೋಜನೆಯನ್ನು ಆಧರಿಸಿ ಫಲಿತಾಂಶಗಳು ಬದಲಾಗಬಹುದು.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.