2026ರ ಶನಿ ವಕ್ರಿ: ಹಿಮ್ಮುಖ ಚಲನೆಯಿಂದ 12 ರಾಶಿಚಕ್ರಗಳಲ್ಲಿ ಯಾರಿಗೆ ಲಾಭ? ಸಾಡೇಸಾತಿ?

Published : Jul 19, 2026, 05:20 PM IST

2026ರ ಜುಲೈ 27 ರಂದು ಶನಿಯು ಮೀನ ರಾಶಿಯಲ್ಲಿ ಹಿಮ್ಮುಖನಾಗಲಿದ್ದಾನೆ, ಈ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಯಾವ ರಾಶಿಗಳಿಗೆ ಈ ಅವಧಿಯು ಲಾಭದಾಯಕವಾಗಿರುತ್ತದೆ ಮತ್ತು ಇತರ ರಾಶಿಗಳು ಯಾವ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಎಂಬುದನ್ನು ವಿವರಿಸುತ್ತದೆ.

PREV
112
ಶನಿ ವಕ್ರಿ 2026-ಭಾಗ್ಯಶಾಲಿ ರಾಶಿಗಳು

ಜುಲೈ 27ರ ರಾತ್ರಿ 10 ಗಂಟೆ 21 ನಿಮಿಷಕ್ಕೆ ಮೀನ ರಾಶಿಯಲ್ಲಿ ನ್ಯಾಯದ ದೇವರು ಶನಿ ಹಿಮ್ಮೆಟ್ಟುತ್ತಾನೆ. ನಂತರ 11ನೇ ಡಿಸೆಂಬರ್ 2026ರಂದು ಬೆಳಗಿನ ಜಾವ 3 ಗಂಟೆ 51 ನಿಮಿಷಕ್ಕೆ ನೇರ ಸ್ಥಾನಕ್ಕೆ ಮರಳುತ್ತಾನೆ. ಈ ಚಲನೆಯನ್ನು ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಮುಖ ಘಟನಾವಳಿ ಎಂದು ಪರಿಗಣಿಸಲಾಗುತ್ತದೆ. ಈ ಚಲನೆ ಎಲ್ಲಾ 12 ರಾಶಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವೆಲ್ಲಾ ರಾಶಿಗಳಿಗೆ ಲಾಭ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

212
ಮೇಷ ರಾಶಿ

ಮೇಷ ರಾಶಿಗೆ ಶನಿ 10 ಮತ್ತು 11ನೇ ಮನೆ ಆಳಲಿದ್ದು, 12ನೇ ಮನೆಯಲ್ಲಿ ಹಿಮ್ಮುಖನಾಗುತ್ತಾನೆ. ಈ ರಾಶಿಯವರ ಖರ್ಚುಗಳು ಹೆಚ್ಚಾಗೋದರ ಜೊತೆ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿನ ಜವಾಬ್ದಾರಿಗಳು ಅಧಿಕವಾಗುತ್ತವೆ. ಅನುಕೂಲಕರವಾದ ಸಮಯದಲ್ಲಿ ಮಾತ್ರ ಪ್ರವಾಸ ಮಾಡಿ.

312
ವೃಷಭ ರಾಶಿ

ವೃಷಭ ರಾಶಿಯವರಿಗೆ, ಶನಿಯು ಒಂಬತ್ತನೇ ಮತ್ತು ಹತ್ತನೇ ಮನೆಗಳನ್ನು ಆಳುತ್ತಾನೆ. ನಿಮ್ಮ ಹನ್ನೊಂದನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಈ ಚಲನೆ ಈ ರಾಶಿಯವರಿಗೆ ಹಲವು ಲಾಭಗಳನ್ನು ತಂದುಕೊಡಲಿದ್ದಾನೆ. ಬಾಕಿ ಉಳಿದುಕೊಂಡಿರುವ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯವಾಗಲಿದೆ.

412
ಮಿಥುನ ರಾಶಿ

ಶನಿಯು ಎಂಟನೇ ಮತ್ತು ಒಂಬತ್ತನೇ ಮನೆಗಳನ್ನು ಆಳುತ್ತಾನೆ. ನಿಮ್ಮ ಹತ್ತನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಎದುರಾಗುತ್ತವೆ. ನ್ಯಾಯಾಲಯ ಪ್ರಕರಣಗಳಲ್ಲಿ ಹಿನ್ನಡೆ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಎಲ್ಲಾ ಸಮಯದಲ್ಲಿಯೂ ತಾಳ್ಮೆಯನ್ನು ಕಾಪಾಡಿಕೊಳ್ಳಿ.

512
ಕಟಕ ರಾಶಿ

ಶನಿಯು ಏಳನೇ ಮತ್ತು ಎಂಟನೇ ಮನೆಗಳನ್ನು ಆಳುತ್ತಾನೆ. ನಿಮ್ಮ ಒಂಬತ್ತನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ನಿರೀಕ್ಷೆಯಷ್ಟು ಶುಭಸಮಯ ನಿಮ್ಮದಾಗಿರಲ್ಲ. ಹಾಗಾಗಿ ಅತಿಯಾದ ನಿರೀಕ್ಷೆಗಳು ಬೇಡ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸರಿಯಾದ ಸಮಯದಲ್ಲಿ ಖಂಡಿತ ಲಭ್ಯವಾಗಲಿದೆ. ಎದುರಾಗುವ ಸಮಸ್ಯೆಗಳು ಮಿಂಚಿನಂತೆ ಮಾಯವಾಗಲಿದ್ದು, ಆತಂಕ ಮತ್ತು ಭಯ ಬೇಡ.

612
ಸಿಂಹ ರಾಶಿ

ಶನಿಯು ಆರನೇ ಮತ್ತು ಏಳನೇ ಮನೆಗಳನ್ನು ಆಳುತ್ತಾನೆ. ನಿಮ್ಮ ಎಂಟನೇ ಮನೆಯಲ್ಲಿ ಶನಿ ಹಿಮ್ಮುಖವಾಗಿರುತ್ತಾನೆ. ಈ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹಣಕಾಸಿನ ವಿಷಯಗಳಲ್ಲಿ ಯೋಚಿಸಿ, ತಜ್ಞರ ಸಲಹೆ ಪಡೆದುಕೊಂಡು ನಿರ್ಧಾರ ತೆಗೆದುಕೊಳ್ಳಿ. ಹೊಸ ಜವಾಬ್ದಾರಿಗಳು ನಿಮ್ಮ ವೃತ್ತಿ ಪ್ರಗತಿಗೆ ಸಹಕಾರಿಯಾಗಲಿದೆ.

712
ಕನ್ಯಾ ರಾಶಿ

ಶನಿಯು ಐದನೇ ಮತ್ತು ಆರನೇ ಮನೆಗಳನ್ನು ಆಳುತ್ತಾನೆ. ನಿಮ್ಮ ಏಳನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಮದುವೆಯಂತಹ ಕೆಲಸಗಳನ್ನು ಸಣ್ಣ ವಿಘ್ನಗಳು ಎದುರಾಗುವ ಸಾಧ್ಯತೆಗಳಿವೆ. ತಪ್ಪು ತಿಳುವಳಿಕೆಯುಂಟಾಗಿ ತೊಂದರೆ ಸಾಧ್ಯತೆ. ಭವಿಷ್ಯದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಿ.

812
ತುಲಾ ರಾಶಿ

ಶನಿಯು ನಾಲ್ಕನೇ ಮತ್ತು ಐದನೇ ಮನೆಗಳನ್ನು ಆಳುತ್ತಾನೆ. ನಿಮ್ಮ ಆರನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಈ ಸಮಯದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಶ್ರಮಕ್ಕೆ ಲಾಭ ಸಿಗಲಿದ್ದು, ಐಷಾರಾಮಿ ಸೌಲಭ್ಯಗಳು ಸಿಗಲಿವೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ.

912
ವೃಶ್ಚಿಕ ರಾಶಿ

ಶನಿಯು ಮೂರನೇ ಮತ್ತು ನಾಲ್ಕನೇ ಮನೆಗಳನ್ನು ಆಳುತ್ತಾನೆ. ನಿಮ್ಮ ಐದನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಮಕ್ಕಳಿಂದ ಶುಭ ಸುದ್ದಿ ಲಭಿಸಲಿದೆ. ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಯಾವುದೇ ಅಡೆತಡೆಗಳಿಲ್ಲದೇ ಜೀವನ ಸರಳವಾಗಿ ಸಾಗಲಿದೆ.

1012
ಧನು ರಾಶಿ

ಧನು ರಾಶಿಯವರಿಗೆ, ಶನಿಯು ಎರಡನೇ ಮತ್ತು ಮೂರನೇ ಮನೆಗಳನ್ನು ಆಳುತ್ತಾನೆ. ನಿಮ್ಮ ನಾಲ್ಕನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಕ್ಕೆ ಶುಭಫಲಗಳು ಲಭಿಸಲಿವೆ. ವೃತ್ತಿ ಜೀವನದಲ್ಲಿ ಗಮನಾರ್ಹ ಬದಲಾವಣೆ ಕಾಣಲಿದೆ. ಶನಿ ಕೃಪೆಯಿಂದ ನಿಮ್ಮಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ.

1112
ಮಕರ ರಾಶಿ

ಶನಿಯು ಲಗ್ನ ಮತ್ತು ಎರಡನೇ ಮನೆಯನ್ನು ಆಳುತ್ತಾನೆ. ನಿಮ್ಮ ಮೂರನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಸೋದರ/ರಿಯರ ಜೊತೆಗಿನ ಒಡನಾಟ ಹೆಚ್ಚಳವಾಗುತ್ತದೆ. ಈ ಸಮಯದಲ್ಲಿ ಸೌಹಾರ್ದಯತೆಯನ್ನು ಕಾಪಾಡಿಕೊಳ್ಳಿ. ವೃತ್ತಿ ಜೀವನದ ಬೆಳವಣಿಗೆಗೆ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

1212
ಕುಂಭ ರಾಶಿ

ಶನಿಯು ಲಗ್ನ ಮತ್ತು ಹನ್ನೆರಡನೇ ಮನೆಯನ್ನು ಆಳುತ್ತಾನೆ. ನಿಮ್ಮ ಎರಡನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿರುತ್ತಾನೆ. ಈ ಸಮಯದಲ್ಲಿ ಮಿಶ್ರ ಫಲಿತಾಂಶಗಳು ಲಭ್ಯವಾಗಲಿವೆ. ಕುಟುಂಬದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದು, ಅನಗತ್ಯ ಖರ್ಚುಗಳು ಕಡಿಮೆಯಾಗಲಿವೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories