ಶ್ರಾವಣ ಮಾಸದಲ್ಲಿಯೇ 2026ರ ಮತ್ತೊಂದು ಸೂರ್ಯಗ್ರಹಣ ಗೋಚರ; ಭಾರತದಲ್ಲಿ ಕಾಣಿಸುತ್ತಾ?

Published : May 03, 2026, 06:27 PM IST

ಶ್ರಾವಣ ಅಮಾವಾಸ್ಯೆಯ ದಿನದಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ದಶಕಗಳಿಗೊಮ್ಮೆ ಬರುವ ಈ ಅಪರೂಪದ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ, ಭಾರತದಲ್ಲಿ ಯಾವುದೇ ಸೂತಕದ ಅವಧಿ ಅನ್ವಯವಾಗುವುದಿಲ್ಲ.

PREV
14
ಸೂರ್ಯಗ್ರಹಣ

Surya Grahan 2026 Date: ಸೂರ್ಯಗ್ರಹಣ ಅಂದ್ರೆ ಜನರಿಗೆ ಸಾವಿರಾರು ವರ್ಷಗಳಿಂದ ಒಂದು ರೀತಿ ಕುತೂಹಲ ಮತ್ತು ಆಶ್ಚರ್ಯ. ಇದೊಂದು ಆಕಾಶದಲ್ಲಿ ನಡೆಯುವ ಸಾಮಾನ್ಯ ಘಟನೆಯಾದ್ರೂ, ಭಾರತದಲ್ಲಿ ಇದಕ್ಕೆ ಧಾರ್ಮಿಕ ಮತ್ತು ಜ್ಯೋತಿಷ್ಯದ ನಂಬಿಕೆಗಳೂ ಇವೆ. ಅದಕ್ಕೇ ಇಲ್ಲಿ ಗ್ರಹಣಕ್ಕೆ ವಿಶೇಷ ಮಹತ್ವ ಇದೆ. 2026ರಲ್ಲಿ ಎರಡು ಸೂರ್ಯಗ್ರಹಣಗಳ ಯೋಗವಿದೆ. ಇದರಲ್ಲಿ ಒಂದು ಫೆಬ್ರವರಿಯಲ್ಲಿ ನಡೆದಿದೆ. ಆದರೆ ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸಿರಲಿಲ್ಲ. ಹಾಗಾದ್ರೆ ಮುಂದಿನ ಸೂರ್ಯಗ್ರಹಣ ಯಾವಾಗ? ಇಲ್ಲಿದೆ ಪೂರ್ತಿ ಡೀಟೇಲ್ಸ್.

24
2026ರ ಸೂರ್ಯಗ್ರಹಣ ಯಾವಾಗ?

ಜ್ಯೋತಿಷಿಗಳ ಪ್ರಕಾರ, 2026ರ ಎರಡನೇ ಸೂರ್ಯಗ್ರಹಣ ಆಗಸ್ಟ್ 12, ಬುಧವಾರದಂದು ಸಂಭವಿಸಲಿದೆ. ಅಂದು ಶ್ರಾವಣ ಮಾಸದ ಅಮಾವಾಸ್ಯೆ. ಇದನ್ನೇ 'ಹರಿಯಾಲಿ ಅಮಾವಾಸ್ಯೆ' ಅಂತಾನೂ ಕರೆಯುತ್ತಾರೆ. ಶ್ರಾವಣ ಮಾಸದಲ್ಲಿ ಸೂರ್ಯಗ್ರಹಣ ಬರೋದು ತುಂಬಾನೇ ಅಪರೂಪ. ದಶಕಗಳಿಗೊಮ್ಮೆ ಇಂಥಾ ಯೋಗ ಕೂಡಿಬರುತ್ತೆ. ಇದು ಸಂಪೂರ್ಣ ಸೂರ್ಯಗ್ರಹಣ ಆಗಿರಲಿದ್ದು, ಜಗತ್ತಿನ ಕೆಲವು ಭಾಗಗಳಲ್ಲಿ ಇದನ್ನು ನೋಡಬಹುದು.

34
ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸುತ್ತಾ?

ಆಗಸ್ಟ್ 12ರಂದು ಸಂಭವಿಸಲಿರುವ ಈ ಸೂರ್ಯಗ್ರಹಣ ಭಾರತದ ಯಾವ ಭಾಗದಲ್ಲೂ ಕಾಣಿಸುವುದಿಲ್ಲ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣ ರಾತ್ರಿ ಸುಮಾರು 9 ಗಂಟೆ 4 ನಿಮಿಷಕ್ಕೆ ಶುರುವಾಗಿ, ಮಧ್ಯರಾತ್ರಿ ಸುಮಾರು 1 ಗಂಟೆ 27 ನಿಮಿಷದವರೆಗೆ ಇರಲಿದೆ. ಈ ಸಂಪೂರ್ಣ ಸೂರ್ಯಗ್ರಹಣ ಮುಖ್ಯವಾಗಿ ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಸ್ಪೇನ್ ಮತ್ತು ಪೋರ್ಚುಗಲ್‌ನ ಕೆಲವು ಭಾಗಗಳಲ್ಲಿ ಸ್ಪಷ್ಟವಾಗಿ ಕಾಣಿಸಲಿದೆ. ಇನ್ನು ಯುರೋಪ್, ಉತ್ತರ ಅಮೆರಿಕ ಮತ್ತು ಪಶ್ಚಿಮ ಆಫ್ರಿಕಾದ ಹಲವು ಕಡೆ ಭಾಗಶಃ ಗ್ರಹಣ ಗೋಚರಿಸಲಿದೆ

44
ಭಾರತದಲ್ಲಿ ಸೂತಕದ ಅವಧಿ ಇರುತ್ತಾ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣ ಎಲ್ಲೆಲ್ಲಿ ಕಾಣಿಸುತ್ತೋ ಅಲ್ಲಷ್ಟೇ ಸೂತಕ ಆಚರಿಸಬೇಕು. ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸದೇ ಇರೋದ್ರಿಂದ, ಇಲ್ಲಿ ಸೂತಕದ ಅವಧಿ ಅನ್ವಯ ಆಗಲ್ಲ. ಹಾಗಾಗಿ, ದೇವಸ್ಥಾನಗಳನ್ನು ಮುಚ್ಚುವುದು ಅಥವಾ ಪೂಜೆ-ಪುನಸ್ಕಾರಗಳನ್ನು ನಿಲ್ಲಿಸುವಂತಹ ಸಂಪ್ರದಾಯಗಳು ಇಲ್ಲಿ ಅನ್ವಯಿಸುವುದಿಲ್ಲ.

ಗಮನಿಸಿ:

ಈ ಲೇಖನದಲ್ಲಿರುವ ಮಾಹಿತಿಯನ್ನು ಧರ್ಮಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ಈ ಮಾಹಿತಿಯನ್ನು ಓದುಗರಿಗೆ ತಲುಪಿಸುವುದು ಮಾತ್ರ ನಮ್ಮ ಉದ್ದೇಶ. ಓದುಗರು ಇದನ್ನು ಕೇವಲ ಮಾಹಿತಿಗಾಗಿ ಪರಿಗಣಿಸಬೇಕು.

Read more Photos on
click me!

Recommended Stories