ಈ 4 ರಾಶಿಯವರು ಜಗತ್ತಿನಲ್ಲೇ 'ಬೆಸ್ಟ್ ಅಪ್ಪ' ಅಂತೆ; ನಿಮ್ಮ ರಾಶಿ ಇದರಲ್ಲಿ ಇದೆಯಾ?

Published : Jun 20, 2026, 10:51 PM IST

ವಿಶ್ವ ಅಪ್ಪಂದಿರ ದಿನ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಪುರುಷರು ತಮ್ಮ ಮಕ್ಕಳಿಗೆ ಅತ್ಯುತ್ತಮ ತಂದೆಯಾಗಿರುತ್ತಾರಂತೆ. ಈ 4 ರಾಶಿಯವರು ತಮ್ಮ ಮಕ್ಕಳ ಮೇಲೆ ಹೆಚ್ಚು ಪ್ರೀತಿ, ತಾಳ್ಮೆ ತೋರಿಸಿ ಅವರನ್ನು ಉತ್ತಮವಾಗಿ ಬೆಳೆಸುತ್ತಾರೆ ಎಂದು ಹೇಳಲಾಗುತ್ತದೆ.

PREV
15
ಅದೃಷ್ಟಶಾಲಿ ರಾಶಿಗಳು ಯಾವುವು?
ಪ್ರತಿ ವರ್ಷ ಜೂನ್ 21 ರಂದು ತಂದೆಯರ ದಿನವನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, 12 ರಾಶಿಗಳ ಪುರುಷರು ತಮ್ಮ ಮಕ್ಕಳನ್ನು ವಿಭಿನ್ನವಾಗಿ ಬೆಳೆಸುತ್ತಾರೆ. ಆದರೆ, ನಿರ್ದಿಷ್ಟ 4 ರಾಶಿಯ ಪುರುಷರು ತಮ್ಮ ಮಕ್ಕಳಿಗೆ 'ಬೆಸ್ಟ್ ಅಪ್ಪ' (Best Father) ಆಗಿರುತ್ತಾರೆ ಎನ್ನಲಾಗಿದೆ. ಮಕ್ಕಳ ಮೇಲೆ ಅಪಾರ ಪ್ರೀತಿ, ಅವರ ರಕ್ಷಣೆ, ಶಿಸ್ತು ಮತ್ತು ಯಶಸ್ಸಿಗೆ ಮಾರ್ಗದರ್ಶಕರಾಗುವ ಆ 4 ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ನೋಡೋಣ.
25
ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ. ಮಕ್ಕಳನ್ನು ಬೆಳೆಸಲು ಅತ್ಯಂತ ಮುಖ್ಯವಾಗಿ ಬೇಕಾದ 'ತಾಳ್ಮೆ' ಈ ರಾಶಿಯ ತಂದೆಯರಲ್ಲಿ ಸಹಜವಾಗಿಯೇ ಇರುತ್ತದೆ. ಇವರು ಮಕ್ಕಳ ಭವಿಷ್ಯಕ್ಕೆ ಸರಿಯಾದ ಸಲಹೆ ನೀಡಿ, ಅವರನ್ನು ಒಳ್ಳೆಯ ದಾರಿಯಲ್ಲಿ ನಡೆಸುತ್ತಾರೆ. ಇದರಿಂದ, ಈ ರಾಶಿಯ ತಂದೆಯರ ಮೇಲೆ ಮಕ್ಕಳಿಗೆ ಯಾವಾಗಲೂ ವಿಶೇಷ ಪ್ರೀತಿ ಮತ್ತು ಅಪಾರ ನಂಬಿಕೆ ಇರುತ್ತದೆ. ಮಕ್ಕಳು ತಪ್ಪು ಮಾಡಿದರೂ ಅನಗತ್ಯವಾಗಿ ಕೋಪಗೊಳ್ಳದೆ, ಅವರಿಗೆ ಅರ್ಥವಾಗುವಂತೆ ತಾಳ್ಮೆಯಿಂದ ವಿವರಿಸುತ್ತಾರೆ.
35
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಅಧಿಪತಿ ಮನೋಕಾರಕನಾದ ಚಂದ್ರ. ಹೀಗಾಗಿ ಇವರು ತುಂಬಾ ಭಾವನಾತ್ಮಕ ಮತ್ತು ಪ್ರೀತಿಯುಳ್ಳವರಾಗಿರುತ್ತಾರೆ. ಇವರು ಮಕ್ಕಳೊಂದಿಗೆ ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಕೋಪಗೊಂಡರೂ, ಮರುಕ್ಷಣವೇ ದುಪ್ಪಟ್ಟು ಪ್ರೀತಿ ಮತ್ತು ಕಾಳಜಿ ತೋರಿಸಿ ಮಕ್ಕಳನ್ನು ಅಪ್ಪಿಕೊಳ್ಳುತ್ತಾರೆ. ಇವರು ಕುಟುಂಬದೊಂದಿಗೆ ಸಮಯ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ. ತಮ್ಮ ಮಕ್ಕಳು ಬಾಯಿಬಿಟ್ಟು ಕೇಳುವ ಮೊದಲೇ ಅವರ ಅಗತ್ಯಗಳನ್ನು ಮತ್ತು ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಂಡು ಪೂರೈಸುತ್ತಾರೆ.
45
ಮಕರ ರಾಶಿ

ಮಕರ ರಾಶಿಯ ಅಧಿಪತಿ ಕರ್ಮಕಾರಕನಾದ ಶನಿ. ಇವರು ಬಹಳ ಜವಾಬ್ದಾರಿಯುತ ಮತ್ತು ವಾಸ್ತವಿಕವಾಗಿ ಯೋಚಿಸುವವರಾಗಿರುತ್ತಾರೆ. ಜೀವನದಲ್ಲಿ ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಇವರು, ಅದನ್ನೇ ತಮ್ಮ ಮಕ್ಕಳಿಗೂ ಕಲಿಸುತ್ತಾರೆ. ಕಠಿಣ ಪರಿಶ್ರಮ, ಹೋರಾಟ ಮತ್ತು ಸ್ವಂತ ಅನುಭವಗಳ ಮೂಲಕ ಮಕ್ಕಳು ಜೀವನವನ್ನು ಕಲಿಯಲು ಇವರು ಪ್ರೋತ್ಸಾಹಿಸುತ್ತಾರೆ. 

ಕೆಲವೊಮ್ಮೆ ಇವರು ಕಟ್ಟುನಿಟ್ಟಿನ ತಂದೆಯಂತೆ ಕಂಡರೂ, ಮನಸ್ಸಿನಲ್ಲಿ ಮಕ್ಕಳ ಮೇಲೆ ಅಪಾರ ಪ್ರೀತಿ ಇಟ್ಟಿರುತ್ತಾರೆ. ತಮ್ಮ ಮಕ್ಕಳನ್ನು ಸ್ವಾವಲಂಬಿಗಳಾಗಿ ಮತ್ತು ಆತ್ಮವಿಶ್ವಾಸವುಳ್ಳ ಯಶಸ್ವಿ ವ್ಯಕ್ತಿಗಳಾಗಿ ಬೆಳೆಸುವ ಇವರೇ ಮಕ್ಕಳ ನಿಜವಾದ 'ರೋಲ್ ಮಾಡೆಲ್'.

ಇದನ್ನೂ ಓದಿ: ತಪ್ಪು ತಿದ್ದುವಾಗ 'ಗುರು', ಆಸೆ ಈಡೇರಿಸುವಾಗ 'ಅರಸ' ಅಪ್ಪನಿಗೆ Father's Day ವಿಶೇಷ ಕನ್ನಡ ಸಂದೇಶಗಳು ಇಲ್ಲಿವೆ

55
ಸಿಂಹ ರಾಶಿ

ಸಿಂಹ ರಾಶಿಯ ಅಧಿಪತಿ ಗ್ರಹಗಳ ರಾಜನಾದ ಸೂರ್ಯ. ಈ ರಾಶಿಯ ತಂದೆಯರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನಿಪುಣರು. ಇವರು ಮಕ್ಕಳೊಂದಿಗೆ ಸ್ನೇಹಿತನಂತೆ ಬೆರೆಯುತ್ತಾರೆ. ಇದರಿಂದ ಮಕ್ಕಳು ಯಾವುದೇ ಭಯವಿಲ್ಲದೆ ತಮ್ಮ ಮನಸ್ಸಿನ ಮಾತುಗಳನ್ನು ಇವರೊಂದಿಗೆ ಹಂಚಿಕೊಳ್ಳುತ್ತಾರೆ.

ತಮ್ಮ ಮಕ್ಕಳು ಸಮಾಜದಲ್ಲಿ ತಮಗಾಗಿಯೇ ಒಂದು ಪ್ರತ್ಯೇಕ ಗುರುತನ್ನು ಸೃಷ್ಟಿಸಿಕೊಂಡು, ಜೀವನದಲ್ಲಿ ಆನಂದವಾಗಿರಬೇಕು ಎಂಬ ಬಗ್ಗೆ ಇವರು ದೃಢವಾಗಿರುತ್ತಾರೆ. ಯಾವುದೇ ಪರಿಸ್ಥಿತಿಯಲ್ಲೂ ಮಕ್ಕಳಿಗೆ ಬಲವಾದ 'ರಕ್ಷಣಾ ಕವಚ'ವಾಗಿ ಈ ತಂದೆಯರು ನಿಲ್ಲುತ್ತಾರೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories