2026ರ ಸೂರ್ಯ ಸಂಚಾರ; ನವೆಂಬರ್ 16ರಿಂದ 12ರಲ್ಲಿ 6 ರಾಶಿಗೆ ಸಂಪತ್ತು ಪ್ರತಿಷ್ಠೆ!

Published : Nov 15, 2026, 11:36 AM IST

ನವೆಂಬರ್ 16, 2026 ರಂದು ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಬದಲಾವಣೆಯು 6 ರಾಶಿಗಳ ವೃತ್ತಿ, ಆರ್ಥಿಕ ಹಾಗೂ ವೈಯಕ್ತಿಕ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.

PREV
17
ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ

ಇದೇ 16ನೇ ನವೆಂಬರ್ 2026ರಂದು ಸೂರ್ಯ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ಚಲನೆಯು ಹಣಕಾಸು, ವೃತ್ತಿ ಮತ್ತು ಖಾಸಗಿ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯದೇವನನ್ನು ಅಧಿಕಾರ, ಮಾರ್ಗದರ್ಶನ, ವೃತ್ತಿಪರ ಸ್ಥಾನಮಾನದ ಸಂಕೇತ ಎಂದು ಪರಿಗಣಿಸಲಾಗುತ್ತದೆ.

27
ಮಕರ ರಾಶಿ: 11ನೇ ಮನೆಯಲ್ಲಿ ಸೂರ್ಯ
  • ಆದಾಯ, ಲಾಭ ಸೇರಿದಂತೆ ಆರ್ಥಿಕವಾಗಿ ಸದೃಢತೆ, ಹಣಕಾಸಿನ ಅವಕಾಶಗಳು ಲಭ್ಯತೆ ಸಾಧ್ಯತೆ
  • ಪ್ರಭಾವಿ ವ್ಯಕ್ತಿ ಅಥವಾ ಮೇಲಾಧಿಕಾರಿಗಳಿಂದ ಬೆಂಬಲ ಮತ್ತು ಮಾರ್ಗದರ್ಶನ
  • ಹೊಸ ಆದಾಯ ಮೂಲಗಳ ಶೋಧನೆಗೆ ಇದು ಉತ್ತಮ ಸಮಯ
  • ಹೊಸಬರ ಪರಿಚಯದಲ್ಲಿ ಎಚ್ಚರಿಕೆ, ಹಣದ ವಿಷಯಲ್ಲಿ ಆತುರದ ನಿರ್ಧಾರ ಬೇಡ
37
ಕುಂಭ ರಾಶಿ: 10ನೇ ಮನೆ ಮೂಲಕ ಸೂರ್ಯನ ಚಲನೆ
  • ಕೆಲಸ ಮಾಡುವ ಸ್ಥಳದಲ್ಲಿ ಗೌರವ, ಮೇಲಾಧಿಕಾರಿಗಳಿಂದ ಬೆಂಬಲ
  • ಹೊಸ ಯೋಚನೆಗಳಿಗೆ ಮನ್ನಣೆ, ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ
  • ವ್ಯವಹಾರ ವಿಸ್ತರಣೆ ಮತ್ತು ಷೇರುಗಳಲ್ಲಿ ಹೂಡಿಕೆಗೆ ಉತ್ತಮ ಅವಕಾಶ
  • ಕೆಲಸದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಎಚ್ಚರವಿರಿಲಿ. ಜವಾಬ್ದಾರಿ ನಿರ್ವಹಿಸುವ ಆತುರ ಬೇಡ
47
ವೃಷಭ ರಾಶಿ: 7ನೇ ಮನೆಯಲ್ಲಿ ಸೂರ್ಯ
  • ಪಾಲುದಾರಿಕೆ ವ್ಯಾಪಾರ, ವೃತ್ತಿಪರ ಸಂಬಂಧಗಳಲ್ಲಿ ಸಕಾರಾತ್ಮಕ ಬೆಳವಣಿಗೆಯಿಂದ ಲಾಭ
  • ಹೊಸ ಸಂಪರ್ಕಗಳಿಂದ ಆದಾಯ ಏರಿಕೆ
  • ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಿ
57
ತುಲಾ ರಾಶಿ: 2ನೇ ಮನೆಯಲ್ಲಿ ಸೂರ್ಯ
  • ಹಣ, ಉಳಿತಾಯ, ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒಳ್ಳೆಯ ಬೆಳವಣಿಗೆ
  • ಹಣಕಾಸಿನ ವಿಷಯದಲ್ಲಿ ಉಳಿತಾಯ ಹೆಚ್ಚಿಸುವತ್ತ ಗಮನ ನೀಡಿ. ಖರ್ಚುಗಳ ಮೇಲೆ ನಿಗಾ ಇರಲಿ
  • ಖಾಸಗಿ ವಿಷಯಗಳನ್ನು ಚರ್ಚೆ ಮಾಡುವಾಗ ತಾಳ್ಮೆ ಕಾಪಾಡಿಕೊಳ್ಳಿ.
  • ಅನಗತ್ಯ ವಾದ ಮತ್ತು ದುಡುಕಿನ ನಿರ್ಧಾರಗಳು ಬೇಡ

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

67
ಮಿಥುನ ರಾಶಿ: 6ನೇ ಮನೆಯಲ್ಲಿ ಸೂರ್ಯ
  • ವೃತ್ತಿಜೀವನದ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವೃತ್ತಿಪರ ಸವಾಲುಗಳನ್ನು ಎದುರಿಸೋ ಸಾಮರ್ಥ್ಯ
  • ಹಳೆಯ ವಿವಾದಗಳಿಂದ ಮುಕ್ತಿ
  • ದೀರ್ಘ ಸಮಯದಿಂದ ತಡೆಹಿಡಿದಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ
  • ಆದಾಯ ಏರಿಕೆಯಿಂದ ಆತ್ಮವಿಶ್ವಾಸ ಹೆಚ್ಚಳ
77
ಕನ್ಯಾ ರಾಶಿ: 3ನೇ ಮನೆಯಲ್ಲಿ ಸೂರ್ಯ
  • ಮಾಧ್ಯಮ, ಬರವಣಿಗೆ, ಮಾರ್ಕೆಟಿಂಗ್, ಮಾರಾಟ ಮತ್ತು ಸಂವಹನದಲ್ಲಿ ಕೆಲಸ ಮಾಡುವವರಿಗೆ ಲಾಭ
  • ಹೊಸ ಯೋಜನೆಯನ್ನು ಪ್ರಾರಂಭಿಸಲು ಸೂಕ್ತ ಸಮಯ
  • ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಯಾಣ
  • ಸೂರ್ಯನ ಚಲನೆಯು ಧೈರ್ಯ, ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ಹೆಚ್ಚಿಸುತ್ತದೆ.
Read more Photos on
click me!

Recommended Stories