ವೈದಿಕ ಜ್ಯೋತಿಷ್ಯದಲ್ಲಿ ಗುರುವನ್ನು 'ದೇವಗುರು', 'ಶುಭ ಗ್ರಹ', 'ಜ್ಞಾನಕಾರಕ', 'ಧನಕಾರಕ' ಮತ್ತು 'ಪುತ್ರಕಾರಕ' ಎಂದು ಕರೆಯುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಗುರುವಿನ ದೃಷ್ಟಿ ಬಿದ್ದಾಗ ಆ ಜಾಗದಲ್ಲಿ ಅಭಿವೃದ್ಧಿ, ಸಂಪತ್ತು, ಖ್ಯಾತಿ, ಶಿಕ್ಷಣ, ವಿವಾಹ ಯೋಗ, ಸಂತಾನ ಭಾಗ್ಯ, ವೃತ್ತಿ ಪ್ರಗತಿ ಮತ್ತು ಆಧ್ಯಾತ್ಮಿಕ ಉನ್ನತಿಯಂತಹ ಶುಭ ಫಲಗಳು ಸಿಗುತ್ತವೆ. ಅದರಲ್ಲೂ ಗುರು ತನ್ನ 5, 7 ಮತ್ತು 9ನೇ ದೃಷ್ಟಿಯಿಂದ ಜಾತಕದಲ್ಲಿನ ದೋಷಗಳನ್ನು ಕಡಿಮೆ ಮಾಡಿ, ಯೋಗದ ಫಲಗಳನ್ನು ಹೆಚ್ಚಿಸುವ ಶಕ್ತಿ ಹೊಂದಿದ್ದಾನೆ.
ಗುರು ಕೃಪೆ ಇದ್ದಾಗ ಅನಿರೀಕ್ಷಿತ ಆದಾಯ, ಹೊಸ ಆಸ್ತಿ ಖರೀದಿ, ಬಡ್ತಿ, ವ್ಯವಹಾರ ವಿಸ್ತರಣೆ ಮತ್ತು ಕುಟುಂಬದಲ್ಲಿ ಸಂತೋಷದಂತಹ ಬದಲಾವಣೆಗಳು ಆಗಬಹುದು ಎಂಬ ನಂಬಿಕೆ ಇದೆ.