ಕಾಳ ಸರ್ಪದೋಷಕ್ಕೆ ಪರಿಹಾರ ಮಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
First Published | Jul 25, 2020, 2:20 PM ISTಪ್ರಕೃತಿ ಹಾಗೂ ಮನುಷ್ಯನ ಕಾಮನೆಯ ಸಂಕೇತವಾದ ನಾಗರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ಹಾವನ್ನೇ ದೇವರೆಂದು ಪೂಜಿಸುವ ಹಿಂದೂಗಳು, ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯನ್ನು ಆಚರಿಸುತ್ತಾರೆ. ನಾಗರ ಹಾವು ಹಾಗೂ ಕಾಳ ಸರ್ಪಕ್ಕೆ ಜ್ಯೋತಿಷ್ಯದಲ್ಲಿಯೂ ವಿಶೇಷ ಸ್ಥಾನಮಾನವಿದ್ದು, ಹಾವನ್ನು ಸಾಯಿಸುವುದಾಗಲಿ, ಹಿಂಸಿಸುವುದಾಗಲಿ ಮಾಡಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಭಯವಿದೆ. ಹಾವಿನ ದ್ವೇಷ 12 ವರ್ಷವೆನ್ನುತ್ತಾರೆ. ಅಲ್ಲದೇ ಜನ್ಮ ಕುಂಡಲಿಯಲ್ಲಿ ರಾಹು-ಕೇತುವಿನ ಸ್ಥಾನದಿಂದ ಕಾಣಿಸಿಕೊಳ್ಳವ ದೋಷವೇ ಕಾಳ ಸರ್ಪ ದೋಷ. ಅನಂತ, ವಾಸುಕಿ, ಪದ್ಮನಾಭ, ಕುಳಿಕ, ಶಂಕಪಾಲ, ಮಹಾ ಪದ್ಮ, ತಕ್ಷಕ, ಶೇಷ, ಘಟಕ ಎನ್ನುವ 9 ಬಗೆಯ ಸರ್ಪಗಳಿವೆ. ರಾಹು ಕೇತುಗಳು ಇರುವ ಮನೆಗಳಿಗೆ ಅನುಗುಣವಾಗಿ ಯಾವ ಸರ್ಪ ದೋಷ ಎಂದು ಗುರುತಿಸಲಾಗುವುದು. ಇವುಗಳಲ್ಲಿ ಹಲವು ವಿಧವಿದ್ದು, ದೋಷಕ್ಕೆ ಪರಿಹಾರವೇನು?