ಕಾಲಸರ್ಪ ದೋಷದಿಂದ ಭಯಾನಕ ಸಂಕಷ್ಟ; ಇಲ್ಲಿವೆ ಕೆಲವು ಪರಿಹಾರ ಕ್ರಮಗಳು..!

Published : Aug 08, 2023, 03:44 PM ISTUpdated : Aug 11, 2023, 11:04 AM IST

ಜಾತಕದಲ್ಲಿ ಕಾಲ ಸರ್ಪ ದೋಷವಿದ್ದರೆ, ಅದು ಮನುಷ್ಯನ ಜೀವನದಲ್ಲಿ ಅನೇಕ ದುಃಖಗಳು ಮತ್ತು ಅಡೆತಡೆಗಳಿಗೆ ಕಾರಣವಾಗುತ್ತದೆ. ಈ ದೋಷದಿಂದ ಬಳಲುತ್ತಿರುವ ವ್ಯಕ್ತಿಯು ಹಣಕಾಸಿನ ತೊಂದರೆ, ವೃತ್ತಿ ವೈಫಲ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವು ಕ್ರಮಗಳಿಂದ ಕಾಲ ಸರ್ಪ ದೋಷದ ಅಶುಭ ಫಲಿತಾಂಶಗಳನ್ನು ಕಡಿಮೆ ಮಾಡಬಹುದು.

PREV
16
ಕಾಲಸರ್ಪ ದೋಷದಿಂದ ಭಯಾನಕ ಸಂಕಷ್ಟ; ಇಲ್ಲಿವೆ ಕೆಲವು ಪರಿಹಾರ ಕ್ರಮಗಳು..!
ಕಾಲಸರ್ಪ ದೋಷ.

ಜಾತಕದಲ್ಲಿ ಅತ್ಯಂತ ಭಯಪಡುವ ದೋಷ ಎಂದರೆ ಅದು ಕಾಲಸರ್ಪ ದೋಷ. ಇದು ಎರಡು ದೋಷಪೂರಿತ ಗ್ರಹಗಳಿಂದ ಉಂಟಾಗುತ್ತದೆ. ರಾಹು ಮತ್ತು ಕೇತು ಈ ದೋಷದ ಪ್ರಮುಖ ಅಂಶಗಳಾಗಿವೆ. ರಾಹು ಮತ್ತು ಕೇತುಗಳು ಏಳನೇ ರಾಶಿಯಲ್ಲಿ ಪರಸ್ಪರ ಸಾಗುತ್ತವೆ. ಅಂದರೆ, ರಾಹು ಮೊದಲ ರಾಶಿಯಲ್ಲಿದ್ದಾಗ, ಕೇತುವು ಏಳನೇ ರಾಶಿಯಲ್ಲಿ ಸಾಗುತ್ತದೆ. ಈ ಎರಡು ದುಷ್ಟ ಗ್ರಹಗಳ ನಡುವೆ ಉಳಿದ ಏಳು ಗ್ರಹಗಳು ಬಂದಾಗ ಕಾಸರ್ಪ ದೋಷ ಎಂಬ ಒಂದು ಗ್ರಹದೋಷ ಬರುತ್ತದೆ. ಇದಕ್ಕೆ ಪರಿಹಾರ ಏನು ಎಂಬ ಮಾಹಿತಿ ಇಲ್ಲಿದೆ.

26
ಭೋಲೆನಾಥನ ಆರಾಧನೆ

ಜಾತಕದಲ್ಲಿ ಕಾಲ ಸರ್ಪದೋಷದ ಕೋಪವನ್ನು ಕಡಿಮೆ ಮಾಡಲು, ದೇವರ ದೇವರಾದ ಮಹಾದೇವನನ್ನು ಪೂಜಿಸುವುದು ಮಂಗಳಕರ ಮತ್ತು ಫಲಪ್ರದವೆಂದು ನಂಬಲಾಗಿದೆ. ಅವರ ನಿತ್ಯದ ಪೂಜೆಯು ಜಾತಕದಲ್ಲಿರುವ ಎಲ್ಲಾ ದೋಷಗಳಿಂದ ಮುಕ್ತಿಯನ್ನು ನೀಡುತ್ತದೆ ಮತ್ತು ಜೀವನವು ಸಂತೋಷವಾಗಿರುತ್ತದೆ. 

36
ಶಿವಲಿಂಗದ ಮೇಲೆ ಹಾಲನ್ನು ಅರ್ಪಿಸಿ

ಕಾಲ ಸರ್ಪ ದೋಷವನ್ನು ತೊಡೆದು ಹಾಕಲು, ಪ್ರತಿದಿನ ಶಿವಲಿಂಗ ಮೇಲೆ ಹಸಿ ಹಾಲನ್ನು ಅರ್ಪಿಸಿ, ಪ್ರತಿ ಸೋಮವಾರ ಶಿವಲಿಂಗಕ್ಕೆ ವಿಧಿವಿಧಾನಗಳೊಂದಿಗೆ ಅಭಿಷೇಕ ಮಾಡಿ. ಇದನ್ನು ಮಾಡುವುದರಿಂದ ಜಾತಕದಲ್ಲಿನ ಕಾಲ ಸರ್ಪ ದೋಷದ ಅಶುಭ ಪರಿನಾಮಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.

46
ಕಾಲ ಸರ್ಪ ಪೂಜೆ

ಈ ದೋಷವನ್ನು ಹೋಗಲಾಡಿಸಲು ಅನೇಕ ದೇವಸ್ಥಾನಗಳಲ್ಲಿ ಕಾಲ ಸರ್ಪ ಪೂಜೆಯನ್ನು ಮಾಡಲಾಗುತ್ತದೆ. ಕಾಲ ಸರ್ಪ ದೋಷ ಪೂಜೆಯು ವ್ಯಕ್ತಿಯ ಜೀವನದ ಮೇಲೆ ಅಶುಭ ಪರಿಣಾಮವನ್ನು ಕಡಿಮೆ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಎಲ್ಲಾ ತೊದರೆ ಮತ್ತು ಅಡೆತಡೆಗಳು ದೂರವಾಗುತ್ತದೆ.

56
ನದಿಯಲ್ಲಿ ಸ್ನಾನ ಮಾಡಿ

ಜಾತಕದಲ್ಲಿ ಕಾಲ ಸರ್ಪ ದೋಷವಿದ್ದರೆ  ಗಂಗಾ ಯಮುನಾ ಮುಂತಾದ ಪುಣ್ಯ ನದಿಗಳಲ್ಲಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕಾಲ ಸರ್ಪ ದೋಷ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

66
ಮಂತ್ರಗಳ ಪಠಣ

ಕಾಲ ಸರ್ಪ ದೋಷವನ್ನು ತೊಡೆದುಹಾಕಲು ನೀವು ಕೆಲವು ವಿಶೇಷ ಮಂತ್ರಗಳನ್ನು ಪಠಿಸಬಹುದು. ಈ ಶಕ್ತಿಯುತ ಮಂತ್ರವು ಸಮಸ್ಯೆಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಕಾಲ ಸರ್ಪ ದೋಷವನ್ನು ತೆಗೆದುಹಾಕಲು ನೀವು ಮಹಾಮೃತ್ಯಂಜಯ ಮಂತ್ರ ಅಥವಾ ಓಂ ಸರ್ಪೇಭ್ಯೋ ನಮಃ ಎಂದು ಜಪಿಸಬಹುದು.

Read more Photos on
click me!

Recommended Stories