ಶ್ರಾವಣ ತಿಂಗಳನ್ನು (Savan Month) ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಇಡೀ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಅದೇ ಸಮಯದಲ್ಲಿ, ನಾಗರ ಪಂಚಮಿ ಕೂಡ ಈ ತಿಂಗಳ ಪ್ರಮುಖ ಹಬ್ಬವಾಗಿದೆ. ನಾಗರ ಪಂಚಮಿಯ ದಿನದಂದು, ಶಿವ ಮತ್ತು ನಾಗ ದೇವತೆಯನ್ನು ಪೂಜೆ ಮಾಡಲಾಗುತ್ತೆ. ಈ ಹಬ್ಬ ಮಾಡೋದರಿಂದ ಎಲ್ಲಾ ಪಾಪಗಳನ್ನು ತೊಡೆದುಹಾಕಬಹುದು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಇದರೊಂದಿಗೆ, ನೀವು ರಾಹು, ಕೇತು ಮತ್ತು ಕಾಲಸರ್ಪ ದೋಷದ ಕೆಟ್ಟ ಪರಿಣಾಮಗಳನ್ನು ತೊಡೆದುಹಾಕಬಹುದು.