Jaggery & Life: ಜೀವನದ ಎಲ್ಲಾ ಕಷ್ಟ ದೂರ ಮಾಡುತ್ತದೆ ಬೆಲ್ಲ

Suvarna News   | Asianet News
Published : Nov 21, 2021, 11:18 AM IST

ಬೆಲ್ಲ ಆರೋಗ್ಯಕ್ಕೆ (jaggery for health) ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಆಯುರ್ವೇದವು ಬೆಲ್ಲದ ಅನೇಕ ಪ್ರಯೋಜನಗಳನ್ನು ಸಹ ಉಲ್ಲೇಖಿಸುತ್ತದೆ. ಬೆಲ್ಲವನ್ನು ಔಷಧವಾಗಿಯೂ ಬಳಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಬೆಲ್ಲ ಸಹ ಸಾಕಷ್ಟು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.ಬೆಲ್ಲ ಸೂರ್ಯನ ಅಂಶವೆಂದು ಪರಿಗಣಿಸಲಾಗಿದೆ. ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬೆಲ್ಲ ಹೇಗೆ ಸಹಾಯ ಮಾಡುತ್ತದೆ ನೋಡೋಣ.

PREV
15
Jaggery & Life: ಜೀವನದ ಎಲ್ಲಾ ಕಷ್ಟ ದೂರ ಮಾಡುತ್ತದೆ ಬೆಲ್ಲ

ಬೆಲ್ಲದ ಉತ್ತಮ ಪರಿಹಾರಗಳು  : ಸೂರ್ಯನನ್ನು ಬಲಪಡಿಸಲು - ವ್ಯಕ್ತಿಯ ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ, ಅಂತವರು ಬೆಲ್ಲವನ್ನು ತಿನ್ನುವ ಮೂಲಕ ತನ್ನ ಕೆಲಸವನ್ನು ಪ್ರಾರಂಭಿಸಬೇಕು. ಇದರಿಂದ ಕೈಗೊಂಡ ಕೆಲಸಗಳೆಲ್ಲಾ ಶುಭಪ್ರದವಾಗಿ ಸಾಗುತ್ತದೆ. ಜೀವನದಲ್ಲಿ ಕೆಲಸಗಳೆಲ್ಲಾ ಉತ್ತಮವಾಗುತ್ತದೆ. 

25

ಸೂರ್ಯನ ದೋಷಗಳು - ಬೆಲ್ಲವು ಸೂರ್ಯನ ದೋಷಗಳನ್ನು ತೆಗೆದುಹಾಕುತ್ತದೆ, ಹರಿಯುತ್ತಿರುವ ನೀರಿನಲ್ಲಿ ಒಂದು ತುಂಡು ಬೆಲ್ಲವನ್ನು ಹರಿಯಬಿಟ್ಟರೆ ಸಮಸ್ಯೆ ದೂರವಾಗುತ್ತದೆ. ಇದೇ ವೇಳೆ ಭಾನುವಾರದಿಂದ 8 ದಿನಗಳ ಕಾಲ 800 ಗ್ರಾಂ ಗೋಧಿ ಮತ್ತು 800 ಗ್ರಾಂ ಬೆಲ್ಲವನ್ನು ದೇವಾಲಯಕ್ಕೆ ಅರ್ಪಿಸುವುದರಿಂದ ಸೂರ್ಯನಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಗುತ್ತವೆ.

35

ಸ್ಥಗಿತಗೊಂಡ ಕೆಲಸಗಳಿಗೆ -  ಬಹಳ ಸಮಯದಿಂದ ಕೆಲಸಗಳು ಸ್ಥಗಿತಗೊಂಡಿದ್ದರೆ, ಆದಷ್ಟು ಬೇಗ ಅದನ್ನು ಮಾಡಲು ದೇಸಿ ಬೆಲ್ಲವನ್ನು ಮನೆಯಲ್ಲಿಯೇ ಇರಿಸಿ ಮತ್ತು ಕಾಲಕಾಲಕ್ಕೆ ಸ್ವಲ್ಪ ತಿನ್ನಿ, ಇದರಿಂದ ಉತ್ತಮ ಸೂರ್ಯನಿಗೆ ಸಂಬಂಧಿಸಿದ ಸಮಸ್ಯೆಗಳು (problems)ದೂರವಾಗಿ,  ಫಲ ನೀಡಲು ಪ್ರಾರಂಭಿಸುತ್ತವೆ.

45

ಹೊಸ ಉದ್ಯೋಗ ಪಡೆಯಲು (get new job) - ನೀವು ಸಂದರ್ಶನಕ್ಕೆ ಹೋದರೆ ಅಥವಾ ನೀವು ಉದ್ಯೋಗವನ್ನು ಹುಡುಕಿಕೊಂಡು ಮನೆಯಿಂದ ಹೊರಗೆ ಹೋದಾಗ, ದಾರಿಯಲ್ಲಿ ಒಂದು ಹಸುಗೆ ರೊಟ್ಟಿ ಮತ್ತು ಬೆಲ್ಲವನ್ನು ತಿನ್ನಿಸಿ.  ಇದರಿಂದ ನೀವು ಯಶಸ್ಸನ್ನು ಪಡೆಯುತ್ತೀರಿ. ಕೈಗೊಂಡ ಕೆಲಸಗಳು ಪೂರ್ಣವಾಗುತ್ತದೆ. 

55

ಭಜರಂಗಬಲಿಯ(hanuman) ಅನುಗ್ರಹವನ್ನು ಪಡೆಯಲು - ನಿಮ್ಮ ಮೇಲೆ ಹನುಮಂತನ ಅನುಗ್ರಹ ಉಳಿಯಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ನೀವು ಹನುಮಾನ್ ಜಿಗೆ ಬೆಲ್ಲ ಮತ್ತು ಕಡಲೆ ಪ್ರಸಾದವನ್ನು ನೀಡಿದರೆ,  ನಿಮ್ಮನ್ನು ಹನುಮಂತ ಆಶೀರ್ವದಿಸುತ್ತಾನೆ, ಜೊತೆಗೆ ನಿಮ್ಮ ಎಲ್ಲಾ ಕೆಲಸಗಳ ಮೇಲೆ ದೇವರ ಆಶೀರ್ವಾದ ಸದಾ ಇರುತ್ತದೆ.

Read more Photos on
click me!

Recommended Stories