ಪತ್ನಿಯನ್ನು ಅರ್ಧಾಂಗಿ ಎನ್ನಲಾಗುತ್ತೆ?: ಹಿಂದೂ ಧರ್ಮದಲ್ಲಿ ಹೆಂಡತಿಯನ್ನು ಅರ್ಧಾಂಗಿ ಎಂದು ಕರೆಯಲಾಗುತ್ತದೆ. ಇದರ ಅರ್ಥ ಶರೀರದ ಅರ್ಧ ಭಾಗ ಎಂದು. ವಿವಾಹದ ನಂತರ ಕೆಲವು ಕೆಲಸಗಳನ್ನು ಪತಿ ಪತ್ನಿ ಇಬ್ಬರೂ ಜೊತೆಯಾಗಿ ಸೇರಿ ಮಾಡಬೇಕು ಎಂದು ಹೇಳಲಾಗುತ್ತದ್ದೆ.
ಈ ನಾಲ್ಕು ಕೆಲಸಗಳನ್ನು ಪತ್ನಿ ಇಲ್ಲದೆ ಮಾಡಲೇಬಾರದು: ಮದುವೆಯ ಸಂದರ್ಭದಲ್ಲಿ ಕೆಲವು ವಚನಗಳನ್ನು ಗಂಡ -ಹೆಂಡತಿ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಯಾವ ನಾಲ್ಕು ಕೆಲಸಗಳನ್ನು ಪತಿ ಪತ್ನಿ ಜೊತೆಯಾಗಿ ಮಾಡಬೇಕು ಎಂದು ಹೇಳುತ್ತಾರೆ. ಅವುಗಳ ಬಗ್ಗೆ ತಿಳಿಯೋಣ.
ಪತ್ನಿ ಇಲ್ಲದೇ ದಾನ ಮಾಡಲೇಬಾರದು; ಪತಿ ಯಾವಗಲಾದರೂ ಯಾರಿಗಾದರು ದಾನ ನೀಡುವಾಗ ಅಲ್ಲಿ ಪತ್ನಿ ಇರಲೇಬೇಕು ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ಪತ್ನಿ ಇಲ್ಲದೇ ದಾನ ಮಾಡಿದರೆ ಅದರ ಸಂಪೂರ್ಣ ಫಲ ಸಿಗೋದಿಲ್ಲ.
ಜೊತೆಯಾಗಿ ತೀರ್ಥ ಯಾತ್ರೆ ಮಾಡಿ: ಪತಿ ಏಕಾಂಗಿಯಾಗಿ ತೀರ್ಥ ಯಾತ್ರೆ ಮಾಡಿದರೆ ಅದರ ಫಲ ಅವರಿಗೆ ಸಿಗೋದಿಲ್ಲ. ಧರ್ಮಗ್ರಂಥಗಳಲ್ಲಿ ಪತಿ ಪತ್ನಿ ಜೊತೆಯಾಗಿ ತೀರ್ಥಯಾತ್ರೆ ಮಾಡಬೇಕೆಂದು ಹೇಳಿದ್ದಾರೆ. ಇದರಿಂದಲೇ ವೈವಾಹಿಕ ಜೀವನದಲ್ಲಿ (married life) ಸಂತೋಷ ತುಂಬಿರುತ್ತೆ.
ಹವನ ಯಜ್ಞ ಜೊತೆಯಾಗಿ ಮಾಡಬೇಕು: ಶುಭ ಕಾರ್ಯದಲ್ಲಿ ಹವನ ಮತ್ತು ಯಜ್ಞ ಎರಡನ್ನೂ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪತಿ ಪತ್ನಿ ಜೊತೆಯಾಗಿ ಪೂಜೆ ಮಾಡಬೇಕೆಂದು ಹೇಳಲಾಗುತ್ತದೆ. ವಿವಾಹಿತರು ಪತ್ನಿ ಇಲ್ಲದೇ ಯಜ್ಞಕ್ಕೆ ಕುಳಿತುಕೊಳ್ಳಬಾರದು.
ಪೂಜೆ ಮಾಡುವ ಸಂದರ್ಭದಲ್ಲಿ: ಮನೆಯಲ್ಲಿ ಯಾವುದೇ ಪೂಜೆ ಇದ್ದರೆ, ಆ ಸಂದರ್ಭದಲ್ಲಿ ಕೂಡ ಪತಿ ಪತ್ನಿ ಇಬ್ಬರೂ ಜೊತೆಯಾಗಿ ಕುಳಿತು ಪೂಜೆ ಮಾಡಬೇಕು. ಪೂಜೆಯ ಸಂದರ್ಭದಲ್ಲಿ ಪತ್ನಿ ಪತಿಯ ಕೈಯನ್ನು ಸ್ಪರ್ಶಿಸಿದರೂ ಸಾಕು, ಪೂಜೆಯ ಫಲ ಸಿಗುತ್ತದೆ.