ಇಂತಹ ಮನೆಯಲ್ಲಿರುವ ಜನರು ಯಾವತ್ತೂ ಸಂತೋಷವಾಗಿರೋದೆ ಇಲ್ಲ!

First Published | Dec 30, 2023, 4:18 PM IST

ಚಾಣಕ್ಯ ನೀತಿಯಲ್ಲಿ ನೀವು ಏನು ಮಾಡಬೇಕು? ಏನು ಮಾಡಬಾರದು ಅನ್ನೋದನ್ನು, ಜೊತೆಗೆ ಯಾವ ಮನೆಯಲ್ಲಿರೋದು ನಿಮ್ಮ ಜೀವನಕ್ಕೆ ಉತ್ತಮವಾಗಿರುತ್ತೆ, ಯಾವ ಸ್ಥಳದಲ್ಲಿ ಇರಬಾರದು ಅನ್ನೋದನ್ನು ಹೇಳುತ್ತಾರೆ. ಅವುಗಳ ಬಗ್ಗೆ ತಿಳಿಯೋಣ. 

ಆಚಾರ್ಯ ಚಾಣಕ್ಯನ (Acharya Chanakya) ಪ್ರಕಾರ, ಕೆಲವು ಮನೆಗಳಲ್ಲಿ ಎಂದಿಗೂ ಸಂತೋಷವಿರೋದಿಲ್ಲ ಮತ್ತು ಇದಕ್ಕೆ ಕಾರಣ ಅದರಲ್ಲಿ ವಾಸಿಸುವ ಜನರ ಕಾರ್ಯಗಳು. ಅವರ ಕೆಲವು ಅಭ್ಯಾಸಗಳು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ. 

ಯಾವ ಮನೆಯಲ್ಲಿನ ಜನರ ಜೇಬು ಯಾವಾಗಲೂ ಖಾಲಿಯಾಗಿರುತ್ತದೆ (empty pocket) ಅಂತವರ ಮನೆಯಲ್ಲಿ ಯಾವಾಗಲೂ ಜನರು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ. 

Tap to resize

ಚಾಣಕ್ಯನ ಅನುಸಾರ, ಯಾವ ಮನೆಯಲ್ಲಿ ಜನರು ತುಂಬಾ ಆಲಸಿಗಳಾಗಿರುತ್ತಾರೋ, ಅಂತಹ ಮನೆಯಲ್ಲಿ ಸಹ ಜನರು ಇರಬಾರದು ಎಂದು ಹೇಳುತ್ತಾರೆ. ಇಂತಹ ಜನರು ತಮ್ಮ ಆಲಸ್ಯದಿಂದಾಗಿ ಒಳ್ಳೆಯ ಅವಕಾಶವನ್ನು ಸಹ ಕಳೆದುಕೊಳ್ಳುತ್ತಾರೆ. 

ಚಾಣಕ್ಯ ಹೇಳುವಂತೆ ಈ ಸೋಮಾರಿ (lazy people)ಜನರು ತಮ್ಮ ಈ ಸ್ವಭಾವದಿಂದಾಗಿ ಯಾವಾಗಲೂ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದ ಅವರು ಹೆಚ್ಚು ಸಾಲಗಾರರಾಗಿ ಉಳಿಯುವ ಸಾಧ್ಯತೆ ಇದೆ. 

ಯಾವ ಮನುಷ್ಯನು ಕೂಡ ಸೋಮಾರಿಯಾಗಿರಬಾರದು. ಸೋಮಾರಿಯಾದ ಮನುಷ್ಯನು ಯಶಸ್ಸು ಗಳಿಸೋಕೆ ಸಾಧ್ಯವಾಗೋದಿಲ್ಲ. ಯಾರು ಕಠಿಣ ಪರಿಶ್ರಮ (hardwork) ಪಡುತ್ತಾರೋ ಅವರು ಮಾತ್ರ ಯಶಸ್ಸು ಪಡೆಯೋಕೆ ಸಾಧ್ಯವಾಗುತ್ತೆ. 

ಇನ್ನು ಯಾವ ಮನೆಯಲ್ಲಿ ಜನರು ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ ಹೊಂದಿದ್ದಾರೋ, ಅಂತಹ ಮನೆಯಲ್ಲಿ ಯಾವಾಗಲೂ ಸಮಸ್ಯೆಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಯಾವ ಮನೆಯಲ್ಲಿ ಜನರು ಸೂರ್ಯ ಉದಯಿಸಿದ ಎಷ್ಟೊ ಹೊತ್ತಿನ ನಂತರ ಎದ್ದೇಳುತ್ತಾರೆ, ಅಲ್ಲಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ. 

ಇನ್ನು ಯಾವ ಮನೆಯಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗುತ್ತದೆಯೋ? ಅಂತಹ ಮನೆಯಲ್ಲೂ ಸಹ ಜನರು ಸಂತೋಷದಿಂದ ಇರೋದಕ್ಕೆ ಸಾಧ್ಯವಿಲ್ಲ. ಹೆಣ್ಣು ಮಕ್ಕಳಿಗೆ ಅಗೌರವ, ಅವಮಾನ ಮಾಡುವ ಮನೆಯಲ್ಲಿ ಯಾವತ್ತೂ ಹಣ ಉಳಿಯೋದಿಲ್ಲ ಎನ್ನಲಾಗುವುದು. 
 

Latest Videos

click me!