Shaligram ಮನೆಯಲ್ಲಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

First Published | Nov 30, 2021, 5:46 PM IST

ನೀವು 'ಸಾಲಿಗ್ರಾಮ'ವನ್ನು ಮನೆಯಲ್ಲಿಟ್ಟುಕೊಂಡರೆ, ಅದಕ್ಕೆ ಸಂಬಂಧಿಸಿದ ವಿಶೇಷ ನಿಯಮಗಳನ್ನು ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಅದರಿಂದ ಸಮಸ್ಯೆಗಳು (problems) ಉಂಟಾಗುತ್ತವೆ. ಆದುದರಿಂದ ಅದರ ಬಗ್ಗೆ ತಿಳಿದುಕೊಂಡು ಸರಿಯಾಗಿ ಪೂಜೆ ಮಾಡಿ. 

ಸಾಲಿಗ್ರಾಮವನ್ನು ಭಗವಾನ್ ವಿಷ್ಣುವಿನ (God Vishnu)  ರೂಪವೆಂದು ಪರಿಗಣಿಸಲಾಗಿದೆ. ಅದರ ಪೂಜೆಯಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕಪ್ಪು ದುಂಡಗಿನ ಮತ್ತು ನಯವಾಗಿ ಕಾಣುವ ಕಲ್ಲನ್ನು ಸಾಲಿಗ್ರಾಮ ಎಂದು ಕರೆಯಲಾಗುತ್ತದೆ. ವಿಷ್ಣು ಇರುವ ಮನೆಯಲ್ಲಿ ವಿಶೇಷ ಅನುಗ್ರಹವಿದೆ ಎಂದು ನಂಬಲಾಗಿದೆ. ಇದೇ ವೇಳೆ ಮನೆಯಲ್ಲಿ ಸಂತಸದ ವಾತಾವರಣ ವೂ ಇರುತ್ತದೆ. 

ಸಾಲಿಗ್ರಾಮದ ಪೂಜೆಯಲ್ಲಿ ವಿಶೇಷ ಜಾಗರೂಕತೆಯನ್ನು ವಹಿಸಬೇಕು , ಇಲ್ಲದಿದ್ದರೆ ದೋಷ ಉಂಟಾಗುತ್ತದೆ. ಅಷ್ಟೇ ಅಲ್ಲ, ಈ ದೋಷವು ಸಂತೋಷದ ಜೀವನವನ್ನು ಸಹ ಹಾಳುಮಾಡುತ್ತದೆ.  ಮನೆಯಲ್ಲಿ ಸಾಲಿಗ್ರಾಮ ಇದ್ದರೆ ಈ ಕೆಳಗಿನ ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಮರೆಯದಿರಿ. 

Tap to resize

 ನೆನಪಿನಲ್ಲಿಡಿ 
- ಸಾಲಿಗ್ರಾಮವನ್ನು  ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಮಾತ್ರ ಖರೀದಿಸಿ ಮನೆಯಲ್ಲಿ ಇಡಬೇಕು. ಅದನ್ನು ವಿವಾಹಿತ ವ್ಯಕ್ತಿಯಿಂದ(married man) ತೆಗೆದುಕೊಳ್ಳಬಾರದು ಅಥವಾ ಗೃಹಸ್ಥನಿಗೆ ನೀಡಬಾರದು. ಸಂತ ಅಥವಾ ಪಂಡಿತ ಕೊಟ್ಟರೆ ಅದನ್ನು ತೆಗೆದುಕೊಂಡು ಮನೆಯಲ್ಲಿ ಇಡಬಹುದು.  

-ಮನೆಯಲ್ಲಿ ಸಾಲಿಗ್ರಾಮವಿದ್ದರೆ ಮತ್ತು ಅದನ್ನು ಪವಿತ್ರವಾಗಿ ಇಡಲು ಸಾಧ್ಯವಾಗದಿದ್ದರೆ, ಅದನ್ನು ದೇವಾಲಯಕ್ಕೆ (temple) ಅಥವಾ ನದಿಯಲ್ಲಿ ಬಿಡಬೇಕು. ಇಲ್ಲದಿದ್ದರೆ ಮನೆಯಿಂದ ಸಂತೋಷವು ಶಾಶ್ವತವಾಗಿ ಹೋಗುತ್ತದೆ. ಆದುದರಿಂದ ಈ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಮುಖ್ಯ. 

- ಸಾಲಿಗ್ರಾಮದ ಮೇಲೆ ಅಕ್ಷತೆ ಅರ್ಪಿಸುವುದನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಅದರ ಮೇಲೆ ಅಕ್ಷತೆ  ಅರ್ಪಿಸಬೇಡಿ. ವಿಶೇಷ ಸನ್ನಿವೇಶದಲ್ಲಿ ಅಕ್ಷತೆಗೆ ಹಳದಿ ಬಣ್ಣ ಹಚ್ಚಿ ನಂತರ ಅರ್ಪಿಸಿ. ಹಾಗೆ ಅಕ್ಷತೆ ಬಳಸಿದರೆ ಸಮಸ್ಯೆ ಉಂಟಾಗಬಹುದು. 

- ಸಾಲಿಗ್ರಾಮವನ್ನು ನಿಯಮಿತವಾಗಿ ಪೂಜಿಸಬೇಕು. ಸಾಲಿಗ್ರಾಮ ದೇವರ ಪೂಜೆಯ ಕ್ರಮದ ಸ್ಥಗಿತದಿಂದ ಅಂದರೆ ಪೂಜೆ ಮಾಡುವುದನ್ನು ಅರ್ಧಕ್ಕೆ ಬಿಟ್ಟರೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಲಿಗ್ರಾಮದ ಪೂಜೆಯಲ್ಲಿ ತುಳಸಿ ಎಲೆಗಳನ್ನು(tulsi leaves)  ಬಳಸಬೇಕು. 

- ಧಾರ್ಮಿಕ ನಂಬಿಕೆಗಳ ಪ್ರಕಾರ ಮೂರ್ತಿಗಳನ್ನು ಪೂಜಿಸುವ ಸಂಪ್ರದಾಯ ಬಹಳ ಹಳೆಯದು. ವಿಗ್ರಹ ಪೂಜೆಗಿಂತ ಮೊದಲು ಶಿವಲಿಂಗ, ಶಂಖ, ಸಾಲಿಗ್ರಾಮವನ್ನು ಸಂಕೇತಗಳಾಗಿ ಪೂಜಿಸಲಾಯಿತು. ಸಾಲಿಗ್ರಾಮವೂ ಶಿವಲಿಂಗದಷ್ಟೇ ಅಪರೂಪ. ಇದು ಹೆಚ್ಚಿನವು ನೇಪಾಳದಲ್ಲಿ ಪಡೆಯುಬಹುದು. ನೇಪಾಳದ ಮುಕ್ತಿನಾಥ ಪ್ರದೇಶ, ಕಾಳಿ ಗಂಡಕಿ ನದಿ ಪ್ರದೇಶವು ಇದಕ್ಕೆ ಪ್ರಸಿದ್ಧವಾಗಿದೆ. ನೇಪಾಳದ ಮುಕ್ತಿನಾಥದಲ್ಲಿ ಶಾಲಿಗ್ರಾಮ ದೇವಾಲಯವೂ ಇದೆ.

Latest Videos

click me!