ನಿಮ್ಮ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದರೆ ಹೀಗ್ ನಿವಾರಿಸಿ

First Published | Mar 13, 2024, 6:05 PM IST

ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳೋದನ್ನು ನಕಾರಾತ್ಮಕ ಶಕ್ತಿ ಎಂದೂ ಕರೆಯಬಹುದು. ನೀವು ಜೀವನದಲ್ಲಿ ಯಾವುದೇ ಯಶಸ್ಸನ್ನು ಸಾಧಿಸಿದಾಗ ಅಥವಾ ಹೊಸ ವಸ್ತುವನ್ನು ಖರೀದಿಸಿದಾಗ, ಕೆಟ್ಟ ದೃಷ್ಟಿಯನ್ನು ತಪ್ಪಿಸಲು ನೀವು ಕೆಲವೊಂದು ಕ್ರಮ ಕೈಗೊಳ್ಳಬೇಕು. ಅವುಗಳ ಬಗ್ಗೆ ತಿಳಿಯೋಣ. 
 

ಧನಾತ್ಮಕ ಮತ್ತು ಋಣಾತ್ಮಕ (positive and negative power) ಎಂಬ ಎರಡು ರೀತಿಯ ಶಕ್ತಿಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಕ್ರಿಯವಾಗಿರುತ್ತದೆ, ಕೆಲವರಿಗೆ ಹೆಚ್ಚು ಸಕಾರಾತ್ಮಕ ಶಕ್ತಿ ಇದ್ದರೆ ಮತ್ತು ಇನ್ನೂ ಕೆಲವರಿಗೆ ಹೆಚ್ಚು ನಕಾರಾತ್ಮಕ ಶಕ್ತಿ ಇರುತ್ತದೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ವಿಶೇಷ ಯಶಸ್ಸನ್ನು ಸಾಧಿಸಿದಾಗ ಅಥವಾ ಹೊಸ ಮನೆ, ಅಂಗಡಿ, ವಾಹನವನ್ನು ಖರೀದಿಸಿದಾಗ, ಅದನ್ನು ಸಹಿಸದ ಜನರ, ಏಳಿಗೆ ಬಯಸದ ಜನರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಮೂಡುತ್ತದೆ, ಇದನ್ನೆ ಕೆಟ್ಟ ದೃಷ್ಟಿ ಎನ್ನಲಾಗುವುದು. ಒಬ್ಬರ ದುಷ್ಟ ಕಣ್ಣು ಯಾವುದರ ಮೇಲಾದರೂ ಇದ್ದಾಗ, ಆ ವ್ಯಕ್ತಿಗೆ ಕೆಟ್ಟದಾಗುತ್ತಾ ಹೋಗುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಕೆಲವೊಂದು ಮಾರ್ಗಗಳನ್ನು ಅನುಸರಿಸುವ ಮೂಲಕ ಕೆಟ್ಟ ದೃಷ್ಟಿ ನಿವಾರಿಸಬೇಕು. 

ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯ ಅರ್ಥ
ನಾವು ಪಡೆಯುತ್ತಿರುವ ಹಿತವಾದ ಸಕಾರಾತ್ಮಕ ಶಕ್ತಿಯು ಕೆಟ್ಟ ದೃಷ್ಟಿಯ ಕಾರಣದಿಂದಾಗಿ ನೋವಿನ ನಕಾರಾತ್ಮಕ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ನೀವು ಹೆಚ್ಚಾಗಿ ತುಂಡಾ ಬೂಟುಗಳು ಅಥವಾ ಚಪ್ಪಲಿಗಳನ್ನು ಮನೆಗಳು, ಬಸ್ಸುಗಳು ಮತ್ತು ಟ್ರಕ್ ಗಳ ಮುಂದೆ ಅಥವಾ ಹಿಂಭಾಗದಲ್ಲಿ ನೇತಾಡುವುದನ್ನು ಕಾಣಬಹುದು. ಇವುಗಳನ್ನು ಯಾರ ದೃಷ್ಟಿಯೂ (evil eye) ಬೀಳಬಾರದು ಎನ್ನುವ ಕಾರಣಕ್ಕೆ ಕಟ್ಟಲಾಗುವುದು. 

Tap to resize

ಹೊಸದಾಗಿ ನಿರ್ಮಿಸಲಾದ ಮನೆಗಳ ಮುಂದೆ ಭಯಾನಕ ದೊಡ್ಡ ಕೊಂಬಿನ ರಾಕ್ಷಸ ಮುಖವಾಡವನ್ನು ಇರಿಸಲಾಗುತ್ತದೆ. ಅಂಗಡಿಗಳ ಮುಂದೆ, ದೃಷ್ಟಿಯಾಗೋದನ್ನು ತಡೆಗಟ್ಟಲು ನಿಂಬೆ ಮತ್ತು ಹಸಿರು ಮೆಣಸಿನಕಾಯಿ ಮಾಲೆ ನೇತಾಡುತ್ತಿರುವುದನ್ನು ಕಾಣಬಹುದು. ದುಷ್ಟ ಕಣ್ಣು, ಕೆಟ್ಟ ದೃಷ್ಟಿಯ ದೋಷದಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಇವೆಲ್ಲವೂ ಮಾರ್ಗಗಳಾಗಿವೆ.
 

ಕೆಟ್ಟ ದೃಷ್ಟಿಯನ್ನು ತಡೆಗಟ್ಟುವ ಕ್ರಮಗಳು ಯಾರಿಗೂ ಕೆಟ್ಟದ್ದನ್ನು ಮಾಡೋದಿಲ್ಲ. ಈ ಕ್ರಮಗಳನ್ನು ಅಳವಡಿಸುವ ಮೂಲಕ ನಿಮ್ಮ ಮೇಲೆ ಆಗಿರುವ ದೃಷ್ಟಿಯನ್ನು ತೆಗೆದು ಹಾಕಬಹುದು. ಅಂತಹ ಕೆಟ್ಟ ದೃಷ್ಟಿಯನ್ನು ತಪ್ಪಿಸಲು ಹೆಚ್ಚಿನ ವ್ಯಕ್ತಿಗಳು ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಬಹುತೇಕ ಪ್ರತಿಯೊಂದು ಮನೆಯಲ್ಲೂ ಕಾಣಬಹುದು.

ಯಾರ ಮೇಲೆ ಕೆಟ್ಟ ದೃಷ್ಟಿ ಬೇಗ ಬೀಳುತ್ತೆ?
ಜ್ಯೋತಿಷ್ಯದ ಪ್ರಕಾರ,  ಜನ್ಮ ಜಾತಕದಲ್ಲಿ ಲಗ್ನವು ದುರ್ಬಲ ರಾಶಿಯ, ದುರ್ಬಲ ಅಥವಾ ಪಾಪದ ಗ್ರಹಗಳು ಅಥವಾ ಅಂಶದೊಂದಿಗೆ ಶತ್ರು ರಾಶಿಚಕ್ರದಲ್ಲಿ ನೆಲೆಗೊಂಡಿರುವ ವ್ಯಕ್ತಿಯು ಅಶುಭ ಗ್ರಹಗಳ ದಶ-ಅಂತರ್ದಶದಲ್ಲಿ ಕೆಟ್ಟ ದೃಷ್ಟಿಯನ್ನು ಎದುರಿಸಬೇಕಾಗುತ್ತದೆ. ಗ್ರಹಣ (eclpise) ಅವಧಿಯಲ್ಲಿ ಜನಿಸಿದ ಅಥವಾ ಜಾತಕದಲ್ಲಿ ಗ್ರಹಣ ಯೋಗವನ್ನು ಹೊಂದಿರುವ ಜನರು, ಬೇಗ ಕೆಟ್ಟ ದೃಷ್ಟಿಗೆ ಒಳಗಾಗುತ್ತಾರೆ. ದುರ್ಬಲ ಚಂದ್ರನು ಜಾತಕದಲ್ಲಿ ನಾಲ್ಕನೇ, ಎಂಟನೇ, ಹನ್ನೆರಡನೇ ಮನೆಯಲ್ಲಿದ್ದಾಗ ಸಹ ಇದು ಉಂಟಾಗುತ್ತೆ. 

ಕೆಟ್ಟ ದೃಷ್ಟಿ ತಪ್ಪಿಸಲು ಪರಿಹಾರ :
ಕೆಟ್ಟ ದೃಷ್ಟಿಯ ಸಣ್ಣ ಪರಿಣಾಮ ಅನುಭವಿಸಿದ ನಂತರ, ವ್ಯಕ್ತಿಯು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದು ಸಣ್ಣ ನಷ್ಟಗಳ ನಂತರ ದೊಡ್ಡ ನಷ್ಟಗಳನ್ನು ತಪ್ಪಿಸಬಹುದು.

ಕೆಟ್ಟ ದೃಷ್ಟಿಯಿಂದ ಬಾಧಿತನಾದ ವ್ಯಕ್ತಿಯನ್ನು ರಕ್ಷಿಸಲು, ವೀಳ್ಯದೆಲೆಯಲ್ಲಿ ಏಳು ಗುಲಾಬಿ ದಳಗಳನ್ನು (rose petals) ಇರಿಸಿ ಮತ್ತು ಇಷ್ಟ ದೇವರನ್ನು ಸ್ಮರಿಸುವ ಮೂಲಕ ಅದನ್ನು ತಿನ್ನಿಸಿ, ಶೀಘ್ರದಲ್ಲೇ ಕೆಟ್ಟ ದೃಷ್ಟಿಯನ್ನು ತೊಡೆದು ಹಾಕಬಹುದು.

ಶನಿವಾರ ಹನುಮಾನ್ (Hanuman Mandir) ದೇವಸ್ಥಾನದಲ್ಲಿ ಹನುಮಂತನನ್ನು ಪೂಜಿಸಿದ ನಂತರ, ಅವರ ಪಾದಗಳಿಂದ ಕುಂಕುಮವನ್ನು ತೆಗೆದುಕೊಂಡು ಯಾವ ವ್ಯಕ್ತಿಗೆ ದೃಷ್ಟಿಯಾಗಿದೆ, ಅವರ ಹಣೆಗೆ ಹಚ್ಚಿ, ದುಷ್ಟ ಕಣ್ಣಿನ ಪರಿಣಾಮ ನಿವಾರಣೆಯಾಗುತ್ತೆ. 

ಮಗು ಅಥವಾ ಯಾವುದೇ ವ್ಯಕ್ತಿ ಅಥವಾ ವ್ಯವಹಾರ ಸ್ಥಳ, ಕಟ್ಟಡ ಇತ್ಯಾದಿಗಳ ದೃಷ್ಟಿ ನಿವಾರಿಸಲು ಫಿಟ್ಕಾರಿ, ಸಾಸಿವೆ, ಮೆಣಸಿನಕಾಯಿ ಇತ್ಯಾದಿಗಳನ್ನು ತಲೆಗೆ ಸುತ್ತಿ ಸುಡಬೇಕು.

ಸಣ್ಣ ಮಕ್ಕಳಿಗೆ ಕಣ್ಣುಗಳಲ್ಲಿ ಮಸ್ಕರಾ ಹಚ್ಚುವ ಮತ್ತು ಹಣೆಗೆ ಕಾಜಲ್ ಹಚ್ಚುವ ಅಭ್ಯಾಸವು ಬಹಳ ಪ್ರಾಚೀನವಾಗಿದೆ, ಇದು ಮಗುವಿಗೆ ಕೆಟ್ಟ ದೃಷ್ಟಿ ಬೀಳದಂತೆ ರಕ್ಷಿಸುತ್ತದೆ. 

ದೃಷ್ಟಿ ದೋಷಗಳಿಂದ ವ್ಯಾಪಾರದ ಸ್ಥಳವನ್ನು ರಕ್ಷಿಸಲು ನಿಂಬೆ ಮೆಣಸನ್ನು (lemon and Mirchi)ನೇತುಹಾಕಬೇಕು. ಕಟ್ಟಡಗಳನ್ನು ದೃಷ್ಟಿಯಿಂದ ರಕ್ಷಿಸಲು, ಕಪ್ಪು ಹಂಡಿ, ರಾಕ್ಷಸನ ಮುಖವಾಡ ಇತ್ಯಾದಿಗಳನ್ನು ಅದರ ಮೇಲೆ ಹಾಕಲಾಗುತ್ತದೆ.

ಮಹಾಮೃತ್ಯುಂಜಯ ಮಂತ್ರ ಪಠಣ, ಹನುಮಾನ್ ಕವಚ, ರಾಮರಕ್ಷಾ ಸ್ತೋತ್ರ ಇತ್ಯಾದಿಗಳ ಪಠಣವು ಕೆಟ್ಟ ದೃಷ್ಟಿ ಮತ್ತು ಇತರ ದೋಷಗಳಿಂದ ರಕ್ಷಿಸಲು ರಾಮಬಾಣವಾಗಿದೆ.
 

Latest Videos

click me!