ಮಕ್ಕಳ ಮೆಮೊರಿ ಕಂಪ್ಯೂಟರ್ ಗಿಂತ ವೇಗವಾಗಬೇಕಾದ್ರೆ… ಬೇಗ ಈ ಕೆಲ್ಸ ಮಾಡಿ!

First Published | Mar 13, 2024, 5:00 PM IST

ನಿಮಗೆ ಗೊತ್ತಾ? ಹಿಂದೂ ಧರ್ಮದಲ್ಲಿರುವ ಈ ಆಚರಣೆಯ ಮೂಲಕ, ಮಕ್ಕಳ ಮನಸ್ಸನ್ನು ತೀಕ್ಷ್ಣಗೊಳಿಸಬಹುದು ಎಂದು ನಂಬಲಾಗಿದೆ. ಇದು ಮಾತ್ರವಲ್ಲ, ಈ ಆಚರಣೆಯ ಮೂಲಕ, ಮಕ್ಕಳ ಜೀವನದಲ್ಲಿನ ಎಲ್ಲಾ ಕಷ್ಟಗಳು ಮತ್ತು ರಾಹು-ಕೇತುವಿನ ಪರಿಣಾಮವನ್ನು ಸಹ ತೆಗೆದುಹಾಕಬಹುದು. ಆ ಆಚರಣೆ ಯಾವುದು ಗೊತ್ತ?  
 

ಪ್ರಾಚೀನ ಕಾಲದಿಂದಲೂ, ಮಕ್ಕಳ ಜನನದ ನಂತರ, ವಿವಿಧ ಆಚರಣೆಗಳನ್ನು ಮಾಡುತ್ತಾ ಬರುತ್ತಾರೆ. ಅದರಲ್ಲಿ ಮುಖ್ಯವಾದುದು, ಕಿವಿ ಚುಚ್ಚೋದು. ಇದನ್ನು ವಿವಿಧ ಆಚರಣೆಗಳ (celebration) ಭಾಗವಾಗಿ ಮಾಡಲಾಯಿತು. ಮಕ್ಕಳು ಹುಟ್ಟೋ ಮುನ್ನವೇ ಅವರ ಒಳಿತಿಗಾಗಿ ಹಲವು ಆಚರಣೆಗಳು ನಡೆಯುತ್ತವೆ. ಅದು ತಾಯಿಯ ಗರ್ಭಧಾರಣೆಯಿಂದಲೇ ಆರಂಭವಾಗುತ್ತದೆ.

ಮಾನವನ ಹದಿನಾರು ಆಚರಣೆಗಳಲ್ಲಿ ಅಥವಾ ಸಂಸ್ಕಾರಗಳಲ್ಲಿ ಒಂದಾದ ಕಿವಿ ಚುಚ್ಚೋದನ್ನು (ear priecing) ಮಕ್ಕಳ ಸ್ಮರಣೆಯನ್ನು ಹೆಚ್ಚಿಸಲು ಮಾಡಲಾಗುತ್ತದೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಈ ಆಚರಣೆಯ ಮೂಲಕ, ಮಕ್ಕಳ ಮನಸ್ಸನ್ನು ತೀಕ್ಷ್ಣಗೊಳಿಸಬಹುದು ಎಂದು ನಂಬಲಾಗಿದೆ. 

Tap to resize

ಇದು ಮಾತ್ರವಲ್ಲ, ಈ ಆಚರಣೆ ಅಂದರೆ ಕರ್ಣವೇದ ಸಂಸ್ಕಾರ ಅಥವಾ ಕಿವಿ ಚುಚ್ಚುವ ಮೂಲಕ, ಮಕ್ಕಳ ಜೀವನದಲ್ಲಿನ ಎಲ್ಲಾ ಕಷ್ಟಗಳು ಮತ್ತು ರಾಹು ಕೇತುವಿನ ಪರಿಣಾಮವನ್ನು ಸಹ ತೆಗೆದುಹಾಕಬಹುದು ಎನ್ನುವ ನಂಬಿಕೆ ಸಹ ಇದೆ. ಈ ಆಚರಣೆಯ ಬಗ್ಗೆ ನಿಮಗೆ ತಿಳಿದಿದೆಯೇ? ಇಂದು ನಾವು ಈ ಆಚರಣೆಯ ಬಗ್ಗೆ ನಿಮಗೆ ಹೇಳುತ್ತೇವೆ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಸರಿಯಾದ ವಯಸ್ಸು ಎಷ್ಟು ಎಂದು ಸಹ ನಿಮಗೆ ತಿಳಿಸುತ್ತೇವೆ.
 

ಈ ವಿಶೇಷ ಆಚರಣೆಯನ್ನು ಏಕೆ ಮಾಡಲಾಯಿತು? 
16 ಆಚರಣೆಗಳಲ್ಲಿ ಒಂದು ಕರ್ಣವೇದ ಸಂಸ್ಕಾರ (ear piercing), ಇದರಲ್ಲಿ ಮಕ್ಕಳ ಕಿವಿಗಳನ್ನು ಚುಚ್ಚಲಾಗುತ್ತದೆ. ಇದನ್ನು ಮಾಡುವುದರ ಹಿಂದೆ ದೊಡ್ಡ ಕಾರಣವಿದೆ ಎಂಬುದು ಪೌರಾಣಿಕ ನಂಬಿಕೆ (Mythological Belief). ಕರ್ಣವೇದ ಸಂಸ್ಕಾರವನ್ನು ಮಾಡುವ ಮೂಲಕ ಮಕ್ಕಳ ಜ್ಞಾಪಕ ಶಕ್ತಿಯನ್ನು (memory power) ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರಾಚೀನ ಕಾಲದಲ್ಲಿ ಮಕ್ಕಳ ಸ್ಮರಣೆಯನ್ನು ಹೆಚ್ಚಿಸಲು ಕಿವಿಯನ್ನು ಚುಚ್ಚಲಾಗುತ್ತಿತ್ತಂತೆ.  

ಕಿವಿ ಚುಚ್ಚುವುದರಿಂದ ಮಕ್ಕಳ ಮೇಲೆ ರಾಹು ಮತ್ತು ಕೇತುವಿನ ಪರಿಣಾಮ ಬೀರುವುದಿಲ್ಲ. ದುಷ್ಟಶಕ್ತಿಗಳು (Negative Energy) ಸಹ ಅವರಿಂದ ದೂರವಿರುತ್ತವೆ. ಇತ್ತೀಚಿಗೆ ಜನರು ಫ್ಯಾಷನ್ (Fashion) ಹೆಸರಿನಲ್ಲಿ ಕಿವಿಗಳನ್ನು ಚುಚ್ಚುತ್ತಾರೆ. ಆದರೆ, ಹಿಂದಿನ ಕಾಲದಲ್ಲಿ ಮಕ್ಕಳ ಕಿವಿಗಳನ್ನು ಚುಚ್ಚುವುದು ಸಂಪ್ರದಾಯಿಕವಾಗಿಯೂ, ವೈಜ್ಞಾನಿಕವಾಗಿಯೂ ಮುಖ್ಯವಾಗಿತ್ತು.

ಕಿವಿ ಚುಚ್ಚಲು ಸರಿಯಾದ ವಯಸ್ಸು ಮತ್ತು ವೈಜ್ಞಾನಿಕ ಕಾರಣ
ಕಿವಿ ಚುಚ್ಚುವುದರ ಹಿಂದೆ ವೈಜ್ಞಾನಿಕ ಕಾರಣವೂ ಅಡಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಕಿವಿಗಳನ್ನು ಚುಚ್ಚುವುದು ಮಕ್ಕಳ ಮೆದುಳನ್ನು ತೀಕ್ಷ್ಣಗೊಳಿಸುತ್ತದೆ. ಜೊತೆಗೆ ಇದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಲು ಉತ್ತಮ ಸಮಯ ಅಥವಾ ವಯಸ್ಸು ಎಂದರೆ ಹೆರಿಗೆಯ ಬಳಿಕ 10, 12, 16 ನೇ ದಿನ ಅಥವಾ 6, 7 ಅಥವಾ 8 ನೇ ತಿಂಗಳಲ್ಲಿ ಮಾಡಬಹುದು.
 

Latest Videos

click me!