ದೀಪಾವಳಿಗೆ ಎಷ್ಟು ದೀಪ ಹಚ್ಚಬೇಕು?: ದೀಪಾವಳಿ ಹಬ್ಬದ ದಿನ ಲಕ್ಷ್ಮಿ-ಗಣೇಶ ಮುಂದೆ ಒಂದು ದೀಪ ಹಚ್ಚಬೇಕು. ನಂತರ ನಿಮ್ಮಿಷ್ಟ ದೇವರ ಮುಂದೆ ಒಂದು ದೀಪ ಹಚ್ಚಿ. ಅಡುಗೆ ಮನೆಯಲ್ಲಿ ಒಂದು ದೀಪ, ಬಾತ್ ರೂಮ್ ಹತ್ರ ಒಂದು ದೀಪ, ಮನೆ ಮುಖ್ಯ ದ್ವಾರದ ಹತ್ರ ಒಂದು ದೀಪ, ತುಳಸಿ ಗಿಡದ ಹತ್ರ ಒಂದು ದೀಪ, ಮನೆ ಛಾವಣಿಯ ಮೇಲೆ ಒಂದು ದೀಪ ಹಚ್ಚಬೇಕು.
ನೀವು ಹಚ್ಚೋ ದೀಪಗಳು ಸ್ವಚ್ಛವಾಗಿರಬೇಕು ಅಂತ ನೆನಪಿಡಿ. ಇದಲ್ಲದೆ, ಹಬ್ಬದ ದಿನ ಮನೆಯ ಬೇರೆ ಕಡೆಗಳಲ್ಲೂ ದೀಪ ಹಚ್ಚಬಹುದು. ದೀಪಾವಳಿಗೆ ಈ 7 ದೀಪ ಹಚ್ಚೋದು ಮುಖ್ಯ. ಇದು ಮನೆಯಲ್ಲಿ ಐಶ್ವರ್ಯ ತರುತ್ತೆ.