ಬಹಳ ಹಚ್ಚಿಕೊಂಡ ಆಪ್ತರು ಸಾವು ಕಂಡಾಗ ಅವರು ಕನಸಿನಲ್ಲಿ ಬರಬಹುದು. ಆದರೆ, ಕನಸಿನಲ್ಲಿ ಇಂಥ ವ್ಯಕ್ತಿಗಳು ಬಂದಾಗ ಅವರು ಅಳಬಾರದು ಎಂದು ಹೆಚ್ಚಾಗಿ ಹೇಳಲಾಗುತ್ತದೆ. ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದು ಅತ್ತರೆ ಏನರ್ಥ ಅನ್ನೋದರ ವಿವರ ಇಲ್ಲಿದೆ.
ಸಾಮಾನ್ಯವಾಗಿ ಸತ್ತವರು ಕನಸಿನಲ್ಲಿ ಬಂದು ನಗುವಿನಲ್ಲಿದ್ದರೆ ಒಂದು ಅರ್ಥ, ಬೇಸರದಲ್ಲಿದ್ದರೆ ಒಂದು ಅರ್ಥ. ಅನಾರೋಗ್ಯಕ್ಕೀಡಾಗಿರುವಂತೆ ಕಂಡರೆ ಒಂದೊಂದು ಅರ್ಥವಿದೆ. ಆದರೆ, ಯಾವುದೇ ಕಾರಣಕ್ಕೂ ಅವರು ಅಳುತ್ತಿರುವಂತೆ ಕನಸು ಬೀಳಬಾರದು ಎನ್ನುತ್ತಾರೆ.
ಮೃತ ವ್ಯಕ್ತಿಗಳು ಕನಸಿನಲ್ಲಿ ಬಂದು ಬೇಸರದಲ್ಲಿದ್ದರೆ ಅಥವಾ ಅವರು ಅಳುತ್ತಿರುವಂತೆ ಕಂಡು ಬಂದರೆ, ನಿಮ್ಮ ಕಡೆಯಿಂದಲೇ ಏನೂ ತಪ್ಪಾಗಿದೆ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಅವರ ಯಾವುದೋ ಒಂದು ಆಸೆಯನ್ನು ನೀವು ಈಡೇರಿಸುವ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಅರ್ಥವೂ ಇದಕ್ಕಿದೆ. ಈ ಆಸೆ ಈಡೇರುವವವರೆಗೂ ಅವರು ಕಾಲ ಕಾಲಕ್ಕೆ ಕನಸಿನಲ್ಲಿ ಬಂದು ಅಳುತ್ತಿರುತ್ತಾರಂತೆ. ಈ ಹಂತದಲ್ಲಿ ನಿಮ್ಮ ನಂಬಿಕೆಯ ಜ್ಯೋತಿಷಿಯಲ್ಲಿ ಇದರ ಬಗ್ಗೆ ವಿಚಾರಿಸಿ ಸೂಕ್ತ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು.
ಪದೇ ಪದೇ ಅವರು ಕನಸಿನಲ್ಲಿ ಬಂದು ಅಳುತ್ತಿದ್ದರೆ, ಅದು ನಿಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಅಗಲಿದ ವ್ಯಕ್ತಿಗಳು ಕನಸಿನಲ್ಲಿ ದುಃಖದಲ್ಲಿರುವ ರೀತಿಯಲ್ಲಿ ಕಂಡುಬಂದರೆ ಅವರಿಗೆ ಏನೂ ಅಸಂತೃಪ್ತಿಯಲ್ಲಿ ಇದ್ದಾರೆ ಎಂದರ್ಥ. ಪದೇ ಪದೇ ಅವರು ಅಳುತ್ತಿರುವಂತೆ ಕನಸು ಬೀಳುತ್ತಿದ್ದರೆ, ನಿಮ್ಮ ಜೀವನದಲ್ಲಿ ಮುಂದೆ ಕೆಲವು ಬಿಕ್ಕಟ್ಟುಗಳು ಎದುರಾಗುವ ಸೂಚನೆ ಎಂದೂ ಹೇಳಲಾಗುತ್ತದೆ.