Maha Shivratri 2022: ಶಿವನಿಗಾಗಿಯೇ ಮೀಸಲಾಗಿವೆ ಈ ಏಳು ಚಿತ್ರ ಗೀತೆಗಳು.. ನೀವು ಕೇಳಿ

First Published | Mar 1, 2022, 1:54 PM IST

ಇಂದು ಮಹಾ ಶಿವರಾತ್ರಿಯ (maha shivratri) ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಮಹಾ ಶಿವರಾತ್ರಿಯಂದು ಶಿವನ ಭಕ್ತರು ತಮ್ಮ ಭಗವಂತನಿಗಾಗಿ ಉಪವಾಸವನ್ನು ಮಾಡಿ ಆಶೀರ್ವಾದವನ್ನು ಪಡೆಯುತ್ತಾರೆ. ಈ ಶುಭ ಹಬ್ಬದಂದು ಇಡೀ ವಾತಾವರಣ ಭಕ್ತಿಯಿಂದ ಕೂಡಿರುತ್ತದೆ. ಚಿತ್ರೋದ್ಯಮದಲ್ಲಿ ಶಿವನ ಅನೇಕ ಭಕ್ತರಿದ್ದಾರೆ. ಮತ್ತು ನೀವು ಚಲನಚಿತ್ರಗಳನ್ನು ನೋಡಿದರೆ, ಶಿವನಿಗೆ ಮೀಸಲಾದ ಹಲವಾರು ಹಾಡುಗಳಿವೆ. 

ಇತ್ತೀಚಿನ ದಿನಗಳಲ್ಲಿ 'ನಮೋ ನಮೋ' ನಿಂದ ಹಿಡಿದು 'ಜೈ ಜೈ ಶಂಕರ್' ವರೆಗೆ, ಶಿವನನ್ನು ಗಮನದಲ್ಲಿಟ್ಟುಕೊಂಡು ಅನೇಕ ಹಾಡುಗಳನ್ನು ಬರೆದು ಸಂಯೋಜಿಸಲಾಗಿದೆ. ಈ ಕೆಲವು ಹಾಡುಗಳನ್ನು ನೋಡಿ, ಅದು ನಿಮ್ಮನ್ನು ಶಿವಭಕ್ತಿಯಲ್ಲಿ ಮುಳುಗಿಸುತ್ತದೆ, ಇದು ಕೇವಲ ಮಹಾ ಶಿವರಾತ್ರಿಯಂದು ಮಾತ್ರವಲ್ಲ, ಪ್ರತಿದಿನವೂ ನಿಮ್ಮನ್ನು ದೇವರಿಗೆ ಹತ್ತಿರದಲ್ಲಿರಿಸುತ್ತದೆ.

Image: Still from the song

ನಮೋ ನಮೋ:  ಬಿ. ಅಮಿತ್ ತ್ರಿವೇದಿ (Amit Trivedi) ಸಂಯೋಜನೆ ಮಾಡಿ ಹಾಡಿರುವ, 'ಕೇದಾರನಾಥ' ದ ಈ ಹಾಡು ಶಿವನಿಗೆ ಮೀಸಲಾದ ಅತ್ಯುತ್ತಮ ಹಾಡುಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿ ಖಾನ್ ನಟಿಸಿದ್ದಾರೆ ಮತ್ತು 2013 ರ ಉತ್ತರಖಂಡ್ ಪ್ರವಾಹ ಕತೆಯನ್ನು ಚಿತ್ರ ಆಧರಿಸಿದೆ.

Tap to resize

ಬೋಲೋ ಹರ್ ಹರ್ ಹರ್ ಹರ್: ಅಜಯ್ ದೇವ್ ಗನ್ ಅಭಿನಯದ ಮತ್ತು ನಿರ್ದೇಶನದ ಚಿತ್ರ ಶಿವಾಯ್ (shivay) ಅವರ ಶೀರ್ಷಿಕೆ ಟ್ರ್ಯಾಕ್ 'ಬೋಲೋ ಹರ್ ಹರ್ ಹರ್ ಹರ್' ಭಗವಾನ್ ಶಿವನನ್ನು ಆಧರಿಸಿದ ಆಧುನಿಕ ದಿನದ ಹಾಡು. ಬೀಟ್ಸ್ ಮತ್ತು ಸಾಹಿತ್ಯವು ಅತ್ಯುತ್ತಮವಾಗಿದ್ದು, ಯುವ ಜನಾಂಗಕ್ಕೆ ಹತ್ತಿರವಾಗಿದೆ. 

ಕೌನ್ ಹೇ  ವೋ: 'ಬಾಹುಬಲಿ: ದಿ ಬಿಗಿನಿಂಗ್' (Bahubali : The begining) ಚಲನಚಿತ್ರದ 'ಕೌನ್ ಹೈ' ಹಾಡು ಭಗವಾನ್ ಶಿವನಿಗೆ ಸಮರ್ಪಣೆಯಾಗಿ ಸಂಯೋಜಿಸಲಾದ ಈ ಹಾಡು ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಗಿದೆ. ಕೈಲಾಶ್ ಖೇರ್ ಹಾಡಿರುವ ಈ ಹಾಡಿನಲ್ಲಿ ಶಿವ ತಾಂಡವ ಸ್ತೋತ್ರಂ ಕೂಡ ಇದೆ.

ಶಿವ್ ತಾಂಡವ್: ಶಂಕರ್ ಎಹ್ಸಾನ್ ಲಾಯ್ ಅವರ ಸಂಯೋಜನೆ ಮಾಡಿರುವ, ಶಿವ್ ತಾಂಡವ್ 'ಮಣಿಕರ್ಣಿಕಾ' ಚಿತ್ರದಲ್ಲಿ ಇರುವಂತಹ ಸುಂದರವಾದ ಗೀತೆಯಾಗಿದೆ. ಈ ಚಿತ್ರದಲ್ಲಿ ಶಿವ ತಾಂಡವ ಸ್ತ್ರೋತ್ರವನ್ನು (Shiv Tandav Strotam.)ವಿಭಿನ್ನವಾಗಿ ಬಿಂಬಿಸಲಾಗಿದೆ.

ಮನ್ ಮೇ ಶಿವ: ಅರ್ಜುನ್ ಕಪೂರ್ ಮತ್ತು ಕೃತಿ ಸನೋನ್ ಅವರು ನಟಿಸಿರುವ 'ಪಾಣಿಪತ್' ಚಿತ್ರದ ಸುಂದರವಾದ ಹಾಡು ಮನ್ ಮೇ ಶಿವ. ಅಜಯ್-ಅತುಲ್ ಸಂಯೋಜನೆ ಮಾಡಿರುವ ಕುನಾಲ್ ಗಂಜಾವಾಲಾ, ದೀಪನ್ಶಿ ನಗರ್ ಮತ್ತು ಪದ್ಮನಾಭ ಗಾಯಕ್ವಾಡ್ ಈ ಹಾಡನ್ನು ಹಾಡಿದ್ದಾರೆ.

ಜೈ ಜೈ ಶಿವ ಶಂಕರ್: ರಾಜೇಶ್ ಖನ್ನಾ ಅಭಿನಯದ 'ಜೈ ಜೈ ಶಂಕರ್' ಹಾಡು 'ವಾರ್' ಚಿತ್ರಕ್ಕೆ ವಿಶಾಲ್-ಶೇಖರ್ ಅವರ ಸಂಯೋಜನೆಯೊಂದಿಗೆ ಆಧುನಿಕ ತಿರುವು ಪಡೆಯಿತು. ಈ ಹಾಡನ್ನು ನಟರಾದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ (Tiger Shroff) ಅವರ ಮೇಲೆ ಚಿತ್ರಿಸಲಾಗಿದೆ.

ಜೈ ಜೈ ಶಿವ ಶಂಕರ್: 'ಅಪಕೀ ಕಸಮ್' ಚಿತ್ರದ ಈ ಹಾಡು ಮಹಾ ಶಿವರಾತ್ರಿ ಸಂದರ್ಭದಲ್ಲಿನ ಶಿವ ಭಕ್ತರ ನೆಚ್ಚಿನ ಹಾಡು ಎಂದು ಹೇಳಲಾಗಿದೆ.  ರಾಜೇಶ್ ಖನ್ನಾ-ಮುಮ್ತಾಜ್ ಈ ಹಾಡಿನಲ್ಲಿ ನಟಿಸಿದ್ದಾರೆ. ಈ ಹಾಡಿನಲ್ಲಿ ಶಿವನ ನಾಮ ಸ್ಮರಣೆ ಮಾಡಲಾಗಿದೆ. 

Latest Videos

click me!