Maha shivratri 2022: ಶಿವರಾತ್ರಿ ಆಚರಣೆ ಸಂಭ್ರಮ ಎಲ್ಲೆಲ್ಲಿ ಹೇಗೆಲ್ಲ ನಡೆಯುತ್ತೆ ಕಣ್ತುಂಬಿಕೊಳ್ಳೋಣ ಬನ್ನಿ..

Contributor Asianet   | Asianet News
Published : Feb 28, 2022, 11:56 PM ISTUpdated : Mar 01, 2022, 09:44 AM IST

ಈ ವರ್ಷ, ಮಾರ್ಚ್ 1 ರಂದು ಮಹಾ ಶಿವರಾತ್ರಿ (maha shivaratri) ಆಚರಿಸಲಾಗುವುದು. ಮಹಾ ಶಿವರಾತ್ರಿ ದಿನದಂದು ಹಿಂದೂ(Hindu) ಭಕ್ತಾಭಿಮಾನಿಗಳು, ಭಗವಾನ್ ಶಿವನನ್ನು ಪೂಜಿಸುತ್ತಾರೆ. ಶಿವನ ಪೂಜೆಯನ್ನು ಭಕ್ತಿಯಿಂದ ಮಾಡಿದರೆ, ಎಲ್ಲಾ ಕಷ್ಟಗಳು ದೂರವಾಗಿ ಎಲ್ಲ ಅಭಿಲಾಷೆಗಳು ಈಡೇರುತ್ತದೆ. ಶಿವರಾತ್ರಿಯ ವಿಶೇಷತೆಯ ಬಗ್ಗೆ ಇಲ್ಲಿದೆ ಮಾಹಿತಿ. 

PREV
18
Maha shivratri 2022: ಶಿವರಾತ್ರಿ ಆಚರಣೆ ಸಂಭ್ರಮ ಎಲ್ಲೆಲ್ಲಿ ಹೇಗೆಲ್ಲ ನಡೆಯುತ್ತೆ ಕಣ್ತುಂಬಿಕೊಳ್ಳೋಣ ಬನ್ನಿ..

ಚಾಂದ್ರಮಾನ ತಿಂಗಳ 14 ನೇ ದಿನದಂದು  ಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಶಿವ ಭಕ್ತರು ದಿನವಿಡೀ ಉಪವಾಸಗಳನ್ನು ನಡೆಸುತ್ತವೆ ಮತ್ತು ಶಿವನಿಗಾಗಿ ಪ್ರಾರ್ಥಿಸಿ ಪೂಜಾ ಕಾರ್ಯ ಕೂಡ ನಡೆಯುತ್ತದೆ. ಫಾಲ್ಗುಣ್ ಕೃಷ್ಣ ಚತುರ್ದಶಿಯಂದು ಮಹಾ ಶಿವರಾತ್ರಿ ಹಬ್ಬವು ಆಚರಿಸಲ್ಪಡುವುವು.

28

ಭಗವಾನ್ ಶಿವ ಎಂದ ಕೂಡಲೇ ಕಣ್ಣ ಮುಂದೆ ಬರೋದು ಸುಟ್ಟ ಹೆಣದ ಭಸ್ಮವನ್ನು (ashes) ಮೈತುಂಬಾ ಬಳಿಸ ಶಿವ. ಈತನ ಕುತ್ತಿಗೆ ನೀಲಿಯಾಗಿರುತ್ತದೆ. ಯಾಕೆಂದರೆ ಶಿವ ವಿಷವನ್ನು ತನ್ನ ಕಂಠದಲ್ಲಿ ಕೂಡಿಟ್ಟುರುತ್ತಾನೆ. ಶಿವ ತನ್ನ ತಲೆಯಲ್ಲಿ ಗಂಗೆಯನ್ನು ಹೊತ್ತಿದ್ದಾನೆ, ತಲೆಯಲ್ಲಿ ಚಂದ್ರನನ್ನು ಸಹ ಹೊಂದಿರುತ್ತಾನೆ. ಕುತ್ತಿಗೆಯಲ್ಲಿ ನಾಗರಹಾವನ್ನೆ ಹಾರವನ್ನಾಗಿ ಹಾಕಲಾಗಿರುತ್ತದೆ. ಅಷ್ಟೇ ಅಲ್ಲ ಶಿವ ಮೂರು ಕಣ್ಣುಗಳನ್ನು ಸಹ ಹೊಂದಿದ್ದಾರೆ. ಇಲ್ಲಿದೆ ಶಿವರಾತ್ರಿಯ ಸುಂದರ ಚಿತ್ರಗಳು. 

38

 ಪೂರ್ವ ಭಾರತದ ರಾಜ್ಯವಾದ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಲಿಂಗರಾಜ್ ದೇವಾಲಯದಲ್ಲಿ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದು ಸಂತೃಪ್ತರಾಗುತ್ತಿದ್ದಾರೆ. ಈ ದೇಗುಲದಲ್ಲಿ ಶಿವನಿಗೆ ಪೂಜೆ ಪುರಸ್ಕಾರಗಳು ನಡೆಯುತ್ತವೆ. 
 

48

ನಿರಂಜನಿ ಅಖ್ರಾದ ನಾಗಾ ಸಾಧುಗಳು ಹರಿದ್ವಾರದಲ್ಲಿ ಮಹಾ ಕುಂಭ ಉತ್ಸವದ ಸಮಯದಲ್ಲಿ ಶಿವರಾತ್ರಿ ಉತ್ಸವದ ಮೊದಲ ರಾತ್ರಿ ಗಂಗಾನದಿಯಲ್ಲಿ ಪವಿತ್ರ ಸ್ನಾನ (holy bath)ಮಾಡಿ ಬಳಿಕ ಶಿವನ ಪೂಜೆ ಸಲ್ಲಿಸುತ್ತಾರೆ. ಹರಿದ್ವಾರದಲ್ಲಿ ಪ್ರತಿವರ್ಷ ಸಂಭ್ರಮದಿಂದ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. 
 

58

ಕೋಲ್ಕತ್ತಾದ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಹಿಂದೂ ಮಹಿಳೆಯರು ಶಿವನ ವಿಗ್ರಹದ ಮೇಲೆ ಹಾಲು ಮತ್ತು ನೀರಿನೊಂದಿಗೆ ಅಭಿಷೇಕ ಮಾಡುತ್ತಾರೆ. ಶಿವನಿಗೆ ಅಭಿಷೇಕ ಮಾಡುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. 

68

 ಒಬ್ಬ ವ್ಯಕ್ತಿಯು ಕವೇರಿಪಟ್ಟಾದಲ್ಲಿ ನ ದೇವಾಲಯ ಒಂದಕ್ಕೆ ಮಹಾ ಶಿವರಾತ್ರಿಯ ದಿನ ತನ್ನ ದೇಹದ ತುಂಬೆಲ್ಲಾ ಲಿಂಬೆ ಹಣ್ಣನ್ನು ಸೂಜಿಯ ಮೂಲಕ ಚುಚ್ಚಿಕೊಂಡು ದೇವರಿಗೆ ಹರಕೆ ಸಲ್ಲಿಸುತ್ತಿರುವ ದೃಶ್ಯ ಕಾಣಬಹುದು. ಕೆಲವೆಡೆ ಭಕ್ತರು ಈ ರೀತಿಯೂ ದೇವರ ಪೂಜೆ ಸಲ್ಲಿಸುತ್ತಾರೆ.
 

78

ನೇಪಾಳ ಮತ್ತು ಭಾರತದ ಹಿಂದೂ ಭಕ್ತರು ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈ ಹಬ್ಬಕ್ಕೆ ವಿಶ್ವದಾದ್ಯಂತ ಎಲ್ಲಾ ಹಿಂದೂಗಳು ಕೂಡಿ ಪೂಜೆ ಸಲ್ಲಿಸುತ್ತಾರೆ. ಹಬ್ಬವನ್ನು ಭಕ್ತರು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. 

88

 ಖಜ್ಪುರದ ದೇವಾಲಯದಲ್ಲಿ ಮಹಾ ಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಾಲಯದಲ್ಲಿ ಭಕ್ತರು ತಮ್ಮ ಭಕ್ತಿ ಪ್ರದರ್ಶಿಸುತ್ತಾರೆ. ಮಹಾ ಶಿವರಾತ್ರಿ ಸಾಹಿತ್ಯಕವಾಗಿ ಶಿವನ ಮಹಾ ರಾತ್ರಿ ಎಂದು ಆರಾಧಿಸಲಾಗುತ್ತದೆ. ಈ ರಾತ್ರಿಯೇ ಭಗವಾನ್ ಶಿವನು ತನ್ನ ನೃತ್ಯ ಮತ್ತು ತಾಂಡವ್ ಅನ್ನು ಪ್ರದರ್ಶಿಸುತ್ತಾನೆ ಎಂದು ಹೇಳಲಾಗುತ್ತದೆ. 

Read more Photos on
click me!

Recommended Stories