Ugadi 2022 Wishes: ಹಬ್ಬದ ಶುಭಾಶಯಗಳನ್ನು ಹೀಗೆ ಹೇಳಿ..
First Published | Apr 2, 2022, 9:57 AM ISTಹಿಂದೂ ಹೊಸ ವರ್ಷವೆಂದರೆ, ಪುರಾಣ ಕತೆಗಳ ಪ್ರಕಾರ ಬ್ರಹ್ಮ ಈ ವಿಶ್ವವನ್ನು ಸೃಷ್ಟಿಸಿದ ದಿನ. ವಿಜ್ಞಾನಿಗಳು ಕೂಡಾ ಭೂಮಿಯು ಯುಗಾದಿಯಿಂದ ಯುಗಾದಿಗೆ ಒಂದು ಸುತ್ತು ಮುಗಿಸುವುದನ್ನು ಒಪ್ಪಿಕೊಂಡಿದ್ದಾರೆ. ಬ್ರಹ್ಮನಿಗೆ ಹೊಸ ಬೆಳಗೊಂದು ಆರಂಭವಾಗುವ ಈ ದಿನ ನಮಗೆ ಹೊಸ ವರ್ಷವೇ ಆಗಿದೆ. ಯುಗಾದಿ ಎಂದರೆ ಬೇವು ಬೆಲ್ಲ ಸವಿಯುತ್ತಾ ವರ್ಷದ ಸಿಹಿ ಕಹಿಗಳೆರಡನ್ನೂ ಸಮಚಿತ್ತದಿಂದ ನೋಡುವ ಧನಾತ್ಮಕ ಮನಸ್ಥಿತಿಯೊಂದಿಗೆ ಹಬ್ಬವನ್ನು ಸ್ವಾಗತಿಸುತ್ತೇವೆ. ಈ ದಿನ ಆಪ್ತರಿಗೆ ಬೇವು ಬೆಲ್ಲ ಹಂಚಿ, ಹಬ್ಬದ ಶುಭಾಶಯ ಹೇಳಲಾಗುತ್ತದೆ. ವಾಟ್ಸಾಪ್, ಫೇಸ್‌ಬುಕ್ ಎಲ್ಲೆಡೆ ಯುಗಾದಿ ಶುಭಾಶಯಗಳ ಹೊಳೆಯೇ ಹರಿಯುತ್ತದೆ.
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೀಗೆ ಎಲ್ಲರೂ ವಿಶ್ ಮಾಡುತ್ತಾರೆ. ಸ್ವಲ್ಪ ವಿಭಿನ್ನವಾಗಿ ಆದರೆ ಅಚ್ಚಕನ್ನಡದಲ್ಲಿ ಹಬ್ಬದ ಅಭಿನಂದನೆ ಹೇಳಲು ಐಡಿಯಾಗಳು ಇಲ್ಲಿವೆ.