নকশাকার এবং প্রধান স্থপতি
ಇಲ್ಲಿ ಬಂದ ಭಕ್ತರ ಬಾಯಲ್ಲಿ 'ಓಂ ನಮೋ ಶ್ರೀ ಲಕ್ಷ್ಮೀನರಸಿಂಹಾಯ ನಮಃ' ಎಂಬ ಘೋಷ ಸತತವಾಗಿ ಮೊಳಗಿ ಭಕ್ತಿಯ ತರಂಗಗಳನ್ನು ಎಬ್ಬಿಸುತ್ತಿತ್ತು.
ಈ ಸೋಮವಾರವಷ್ಟೇ ಆರು ವರ್ಷಗಳಲ್ಲಿ ಮೊದಲ ಬಾರಿಗೆ ದೇವಾಲಯಕ್ಕೆ ಭಕ್ತರಿಗೆ ಪ್ರವೇಶವಿತ್ತು. ಸಾಮಾನ್ಯ ಸ್ಥಳವೊಂದರಲ್ಲಿ ಬೃಹತ್ತಾದ ಕಪ್ಪು ಕಲ್ಲಿನ ದೇವಾಲಯ ಎದ್ದಿರುವುದನ್ನು ನೋಡಿ ಭಕ್ತರು ಆಶ್ಚರ್ಯಚಕಿತರಾಗಿದ್ದರು. ಈ ಕಪ್ಪು ಕಲ್ಲಿನ ದೇವಾಲಯವು 500 ವರ್ಷಗಳ ಕಾಲ ಯಾವುದೇ ಹಾನಿ ಇಲ್ಲದೆ ನಿಲ್ಲಲಿದೆ ಎಂಬ ಸಂಶೋಧನೆಯ ನಂತರ ಸಿಮೆಂಟ್ ಬದಲು ಕಪ್ಪು ಕಲ್ಲನ್ನು ಆರಿಸಲಾಗಿದೆ.
yadadri
ಯದಾದ್ರಿ ದೇವಾಲಯ ಪ್ರಾಂಗಣವು(Yadadri temple complex) 14 ಎಕರೆ ಪ್ರದೇಶದಲ್ಲಿ 1800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಯದಾದ್ರಿ ಪಟ್ಟಣವನ್ನು ಕೂಡಾ 850 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಸೋಮವಾರ ಬೆಳಗ್ಗೆ 9.30ರ ಹೊತ್ತಿಗೆ ದೇವಾಲಯ ಉದ್ಘಾಟನೆಯಲ್ಲಿ ಭಾಗವಹಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹಾಗೂ ಕುಟುಂಬಸ್ಥರು, ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಬಾಲಾಲಯದಿಂದ ದೇವರ ಮೂರ್ತಿಗಳನ್ನು ಗರ್ಭಗುಡಿ(sanctum sanctorum)ಗೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸುವ ಕಾರ್ಯ ನೆರವೇರಿತು.
ದೇವಾಲಯದ ಅರ್ಚಕರು ಪ್ರತಿಷ್ಠಾಪನೆಗೊಂಡ ಲಕ್ಷ್ಮೀ ನರಸಿಂಹ ಸ್ವಾಮಿಗೆ ಮಹಾರಾಜ ಭೋಗಂ ನೈವೇದ್ಯ ಮಾಡಿದರು. ಇದರಲ್ಲಿ ಚಿತ್ರಾನ್ನ. ಲಡ್ಡು, ವಡೆ, ಬಜ್ಜಿ, ತುಳಸಿದಳ ತೀರ್ಥ ಒಳಗೊಂಡಿತ್ತು.
ಸಿಎಂ ಕೆಸಿಆರ್ ಕೂಡಾ ಹೆಗಲ ಮೇಲೆ ಪಲ್ಲಕ್ಕಿ ಹೊತ್ತು ಮಹಾಕುಂಭ ಸಂಪ್ರೋಕ್ಷಣ ಕಾರ್ಯಕ್ರಮದಲ್ಲಿ ಭಾಗಿಯಾದರು. ದೇವಾಲಯದ ಗೋಪುರಗಳಿಗೆ ಕಲಶ ಪೂಜೆ ನಡೆಯಿತು.
ಆಂಧ್ರಪ್ರದೇಶದ ತಿರುಪತಿಯಂತೆಯೇ ಬೃಹತ್ತಾದ ದೇವಾಲಯ ನಿರ್ಮಿಸಬೇಕೆಂದು ಕನಸು ಕಂಡ ಕೆಸಿಆರ್ ಯದಾದ್ರಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದರು. ಅಂತೂ ಅವರ ಕನಸು ಈಡೇರಿದೆ. ದ್ರಾವಿಡ, ಪಲ್ಲವ ಹಾಗೂ ಕಾಕತೀಯ ಶೈಲಿಯನ್ನು ವಾಸ್ತುಶಿಲ್ಪಕ್ಕೆ ಅಳವಡಿಸಲಾಗಿದೆ.
ಯದಾದ್ರಿ ದೇವಾಲಯ ಕೂಡಾ ತಿರುಪತಿ ದೇವಾಲಯದ ರೂಪದಲ್ಲೇ ಇದೆ. ತಿರುಪತಿಯು ಏಳು ಬೆಟ್ಟಗಳನ್ನು ಒಳಗೊಂಡಿದ್ದರೆ, ಯದಾದ್ರಿಯು 9 ಬೆಟ್ಟಗಳನ್ನು ಒಳಗೊಂಡಿದೆ.
ಈ ಮುಂಚೆ ಯಡಗಿರಿಗುತ್ತ ಎಂದಿದ್ದ ಹೆಸರನ್ನು ಯದಾದ್ರಿ ಎಂದು ಬದಲಿಸಲಾಗಿದ್ದು, ತಿರುಮಲದ ಶೇಷಾದ್ರಿ ಹೆಸರಿನಂತೆ ಕೇಳುವಂತೆ ಇಡಲಾಗಿದೆ.