ಹನುಮಂತನು ಭಗವಾನ್ ಶ್ರೀರಾಮನ ಕಟ್ಟಾ ಭಕ್ತ, ಖಾಸಾ ಸ್ನೇಹಿತ. ಅಂಜನಾಪುತ್ರ, ಆಂಜನೇಯ, ಹನುಮಂತ, ಹನುಮ, ಭಜರಂಗಬಲಿ ಮುಂತಾದ ಹೆಸರುಗಳಿಂದ ಹನುಮನನ್ನು ಕರೆಯಲಾಗುತ್ತದೆ. ಭಗವಾನ್ ಶಿವನ ಅವತಾರ ಎಂದೇ ನಂಬಿರುವ ಆಂಜನೇಯನ ಜನ್ಮೋತ್ಸವವು ದೇಶಾದ್ಯಂತ ಹಿಂದೂಗಳಿಗೆ ವಿಶೇಷ ಸಂದರ್ಭವಾಗಿದೆ. ಈ ಮಂಗಳಕರ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ವಿಶ್ ಮಾಡಲು, ಫೋಟೋ ಸಂದೇಶ ಕಲುಹಿಸಲು ಇಲ್ಲಿವೆ ಶುಭಾಶಯಗಳು.