ಅಕ್ಟೋಬರ್ 30 ರಂದು ಗುರು-ಚಾಂಡಾಲ ಯೋಗ ಅಂತ್ಯ, ಈ ರಾಶಿಯವರಿಗೆ ಒಳ್ಳೆಯ ಕಾಲ ಆರಂಭ

First Published | Oct 5, 2023, 10:58 AM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಚಂಡಾಲ ಯೋಗವನ್ನು ಅಶುಭ ಯೋಗವೆಂದು ಪರಿಗಣಿಸಲಾಗಿದೆ. ಇದರಿಂದ ಅನೇಕ ರಾಶಿಯವರ ಮೇಲೆ  ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಗುರು ಚಂಡಾಲ ಯೋಗವು ಅಕ್ಟೋಬರ್ 30 ರಂದು  ಅಂತ್ಯವಾಗುತ್ತಿದೆ. ಇದರಿಂದ ಕೆಲವು ರಾಶಿಚಕ್ರದವರು ಪ್ರಯೋಜನವನ್ನು ಪಡೆಯುತ್ತಾರೆ.
 

ಈ ಯೋಗದ ಪರಿಣಾಮವು ರಾಶಿಗಳ ಮೇಲೆ ನಕಾರಾತ್ಮಕವಾಗಿರುತ್ತದೆ. ಆದರೆ ಈಗ ಮೇಷ ರಾಶಿಯಲ್ಲಿ ಗುರು ಚಂಡಾಲ ಯೋಗ ಕೊನೆಗೊಳ್ಳಲಿದೆ.

ಗುರು- ರಾಹುವಿನ ಜೊತೆ ಸಂಯೋಗವಾದರೆ ಗುರು ಚಂಡಾಲ ಯೋಗ ರೂಪುಗೊಳ್ಳುತ್ತದೆ.ಅಕ್ಟೋಬರ್ 30 ರಂದು ರಾಹು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಗುರುವು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

Tap to resize

ಕರ್ಕಾಟಕ ರಾಶಿಯವರಿಗೆ  ಗುರು ಚಂಡಾಲ ಯೋಗ ಕೊನೆಗೊಳ್ಳುತ್ತಿದ್ದಂತೆ ಅದೃಷ್ಟ ಬರಬಹುದು. ಜೀವನದಲ್ಲಿ ವೃತ್ತಿ ಸಂಬಂಧಿತ ಯಶಸ್ಸು ಮತ್ತು ಆರ್ಥಿಕ ಸಮೃದ್ದಿಯನ್ನು ಪಡೆಯುತ್ತಾರೆ.ವೃತ್ತಿಪರ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತದೆ.ಉದ್ಯಮಿಗಳು ಲಾಭವನ್ನು ಗಳಿಸುವ ಬಲವಾದ ಸಾಧ್ಯತೆ ಇದೆ.

ಸಿಂಹ ರಾಶಿಯವರಿಗೆ ಈ ಸಮಯವು ಜೀವನದಲ್ಲಿ ಸಂತೋಷವನ್ನು ತರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯವ ಸಾಧ್ಯತೆಯೂ ಇದೆ ಅಶುಭ ಯೋಗದ ಅಂತ್ಯದೊಂದಿಗೆ ,ಈ ರಾಶಿಯ ಜನರ ಆರೋಗ್ಯವೂ ಸುಧಾರಿಸುತ್ತದೆ.
 

ಗುರು ಚಂಡಾಲ ಯೋಗ ಮುಗಿದ ತಕ್ಷಣ ತುಲಾ ರಾಶಿಯವರಿಗೆ ಜೀವನದಲ್ಲಿ ಯಶಸ್ಸು ಹೆಚ್ಚಾಗುವ ಸಾಧ್ಯತೆ ಇದೆ.ಮದುವೆ ಸಂಬಂಧಿತ ಸಮಸ್ಯೆಗಳು ಅಥವಾ ಸಂಬಂಧದ ಚಿಂತೆಗಳಿಂದ ಪರಿಹಾರವನ್ನು ಪಡೆಯುತ್ತೀರಿ.ಹಣಕಾಸಿನ ಸ್ಥಿತಿ ಉತ್ತಮವಾಗಿದೆ.ವೃತ್ತಿಪರ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಕಂಡು ಬರುತ್ತವೆ. ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ.

Latest Videos

click me!