ಹಿಂದೂ ಆಗಿರಲಿ, ಮುಸ್ಲಿಂ, ಕ್ರೈಸ್ತ ಯಾವುದೇ ಧರ್ಮದವರಾಗಿರಲಿ. ಎಲ್ಲರಿಗೂ ಈ ಕೆಟ್ಟ ಶಕ್ತಿ ಇದೆ , ಕೆಟ್ಟ ದೃಷ್ಟಿಯಾಗುತ್ತೆ ಎನ್ನುವ ನಂಬಿಕೆ ಅಂತೂ ಇದೆ. ವೈಜ್ಞಾನಿಕ ಆಧಾರವನ್ನು (Scientific Reason) ಹೊಂದಿರದ ಆದರೆ ಸೃಷ್ಟಿಯಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಅನೇಕ ವಿಷಯಗಳಿವೆ. ಅಂತಹ ಒಂದು ವಿಷಯವೆಂದರೆ ಕೆಟ್ಟ ದೃಷ್ಟಿ (evil eye). ಕೆಟ್ಟ ದೃಷ್ಟಿಗೆ ಜಾನಪದ ನಂಬಿಕೆಗಳಲ್ಲಿ ಹೆಚ್ಚಿನ ಮಹತ್ವವಿದೆ. ಜ್ಯೋತಿಷ್ಯದಲ್ಲಿ ಸಹ ಈ ಬಗ್ಗೆ ಮಾಹಿತಿ ನೀಡಲಾಗಿದೆ.