ಸರ್ವರಿಗೂ ಗೌರಿ ಗಣೇಶ ಹಬ್ಬ 2022ರ ಹಾರ್ದಿಕ ಶುಭಾಶಯಗಳು

Published : Aug 30, 2022, 06:00 AM IST

ಗೌರಿ ಗಣೇಶ ಹಬ್ಬ ಆಚರಿಸುವುದರಿಂದ ಜೀವನದಲ್ಲಿ ನಿರಂತರ ಸಮೃದ್ಧಿ ಮತ್ತು ಸಂತೋಷ ಇರುತ್ತದೆ. ಯಶಸ್ಸಿಗಿರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಹಬ್ಬದ ಈ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ ವಾಟ್ಸಾಪ್, ಫೇಸ್‌ಬುಕ್, ಸಂದೇಶಗಳ ಮೂಲಕ ವಿಶ್ ಮಾಡಲು ಫೋಟೋಗಳು ಮತ್ತು ಸಂದೇಶಗಳು ಇಲ್ಲಿವೆ. 

PREV
111
ಸರ್ವರಿಗೂ ಗೌರಿ ಗಣೇಶ ಹಬ್ಬ 2022ರ ಹಾರ್ದಿಕ ಶುಭಾಶಯಗಳು

ಗೌರಮ್ಮ ತನ್ನ ತವರಿಗೆ ಬಂದಿದ್ದಾಳೆ. ಆಕೆಯನ್ನು ಕೈಲಾಸಕ್ಕೆ ಕರೆದೊಯ್ಯಲು ಪುತ್ರ ಗಣೇಶನೂ ಬರಲಿದ್ದಾನೆ. ಅಮ್ಮ ಮಗನ ಈ ಆಗಮನ ಸಂಭ್ರಮವನ್ನು ಮನೆಮನೆಯಲ್ಲೂ ಆಚರಿಸಲಾಗುತ್ತದೆ. ಹಬ್ಬದ ಈ ಸಂದರ್ಭದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಕನ್ನಡದಲ್ಲಿ ಸಂದೇಶಗಳು, ವಾಟ್ಸಾಪ್, ಫೇಸ್‌ಬುಕ್ ಸ್ಟೇಟಸ್‌ಗೆ ಹಾಕಲು ಫೋಟೋಗಳು ಇಲ್ಲಿವೆ. ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. 

211

ಸಂತೋಷದ ಕ್ಷಣಗಳು ನಿಮ್ಮ ಹೃದಯದಲ್ಲಿ ಪ್ರೀತಿ, ಸಂತೋಷ, ಅದೃಷ್ಟ ಮತ್ತು ನಿಮಗೆ ಬೇಕಾದ ಎಲ್ಲವನ್ನೂ ತುಂಬಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

311

ದೇವರ ದಿವ್ಯ ಬೆಳಕು ನಿಮ್ಮ ಜೀವನದಲ್ಲಿ ಹರಡಲಿ ಮತ್ತು ಶಾಂತಿ, ಸಮೃದ್ಧಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಗೌರಿ ಗಣೇಶ ಹಬ್ಬದ ಶುಭಾಶಯಗಳು.

411

ಶಿವ ಮತ್ತು ಪಾರ್ವತಿಯ ಆಶೀರ್ವಾದ ನಿಮ್ಮೊಂದಿಗೆ ಇರಲಿ. ಗಣಪನ ಕೃಪಾದೃಷ್ಟಿ ಸದಾ ಜೊತೆಗೂಡಲಿ. ಗೌರಿ ಗಣೇಶ ಹಬ್ಬದ ಶುಭಾಶಯಗಳು!
 

511

ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಿಮ್ಮ ಮುಂದೆ ಅದ್ಭುತ ಜೀವನವಿರಲಿ. ಗಣೇಶನ ಸ್ನೇಹ, ಗೌರಿಯ ಆಶೀರ್ವಾದ ನಿಮ್ಮ ಪಾಲಿಗೆ ಸದಾ ಇರಲಿ. 

611

ಗೌರಿ ಗಣೇಶನ ಹಬ್ಬವು ನಿಮ್ಮ ಜೀವನವನ್ನು ಭಾವಪರವಶತೆಯಿಂದ ತುಂಬಲಿ, ನಿಮ್ಮ ಸಂಗಾತಿಯ ಮತ್ತು ಮಕ್ಕಳ ಯೋಗಕ್ಷೇಮವನ್ನು ಖಚಿತಪಡಿಸಲಿ ಮತ್ತು ನಿಮ್ಮ ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಲಿ. ಗೌರಿ ಗಣೇಶ ಹಬ್ಬ 2022ರ ಶುಭಾಶಯಗಳು!
 

711

ಗಣೇಶ ಯಾವಾಗಲೂ ನಿಮ್ಮ ಮಾರ್ಗದರ್ಶಕ ಮತ್ತು ರಕ್ಷಕನಾಗಿ ಉಳಿಯಲಿ ಮತ್ತು ನಿಮ್ಮ ಜೀವನದಿಂದ ಅಡೆತಡೆಗಳನ್ನು ನಿವಾರಿಸಲಿ. ಗೌರಿಯು ನಿಮ್ಮ ಪ್ರೇಮ ಜೀವನಕ್ಕೆ ಧೀರ್ಘಾಯುಷ್ಯ ನೀಡಲು. ನಿಮಗೆ ಮತ್ತು ಕುಟುಂಬಕ್ಕೆ ಸ್ವರ್ಣ ಗೌರಿ ವ್ರತ ಮತ್ತು ಗಣೇಶ ಚತುರ್ಥಿಯ ಶುಭಾಶಯಗಳು!

811

ಓಂ ಗಂ ಗಣಪತಯೇ ನಮೋ ನಮಃ! ಶ್ರೀ ಸಿದ್ಧಿವಿನಾಯಕ ನಮೋ ನಮಃ! ಅಷ್ಟ ವಿನಾಯಕ ನಮೋ ನಮಃ! ಗಣಪತಿ ಬಪ್ಪಾ ಮೋರಯ! ಗೌರಿ ಗಣೇಶ ಹಬ್ಬದ ಶುಭಕಾಮನೆಗಳು.
 

911

ಭಗವಾನ್ ಗಣೇಶ ನಿಮಗೆ ಶಕ್ತಿಯನ್ನು ದಯಪಾಲಿಸಲಿ, ನಿಮ್ಮ ದುಃಖಗಳನ್ನು ನಾಶಪಡಿಸಲಿ ಮತ್ತು ನಿಮ್ಮ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸಲಿ. ಗಣೇಶ ಚತುರ್ಥಿಯ ಶುಭಾಶಯಗಳು!!
 

1011

ಭಗವಾನ್ ಗಣೇಶನು ಈ ಭೂಮಿಗೆ ಇಳಿಯಲಿ ಮತ್ತು ನಾವು ಎದುರಿಸುತ್ತಿರುವ ಎಲ್ಲಾ ದುಃಖಗಳು, ಹೋರಾಟಗಳು, ಸಂಕಟಗಳು ಮತ್ತು ಸಮಸ್ಯೆಗಳನ್ನು ಕೊನೆಗೊಳಿಸಲಿ. ನಮ್ಮ ಪ್ರತಿಯೊಂದು ಮನೆಗೆ ಅವನ ಆಗಮನವು ನಮ್ಮ ಜೀವನದಲ್ಲಿ ಹೊಸ ಆರಂಭವನ್ನು ತರಲಿ. ಸಂತೋಷ, ಭರವಸೆ, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಿ ಯಶಸ್ವಿಯಾಗಿ ಮುನ್ನಡೆಸಲಿ.

1111

ಗೌರಿ ಹಬ್ಬ, ಗಣೇಶ ಚತುರ್ಥಿಯ ಈ ಸಂದರ್ಭದಲ್ಲಿ, ಸ್ವರ್ಣ ಗೌರಿ ಮತ್ತು ಗಣಪತಿಯು ನಿಮ್ಮ ಮನೆಗೆ ಭೇಟಿ ನೀಡಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯಿಂದ ತುಂಬಲಿ ಎಂದು ನಾನು ಬಯಸುತ್ತೇನೆ.

click me!

Recommended Stories