ಗಣೇಶ ಚತುರ್ಥಿಯ ವಿಶೇಷ ದಿನದಂದು, ಗಣಪತಿಯನ್ನು ತನ್ನ ತಾಯಿ ಪಾರ್ವತಿಯೊಂದಿಗೆ ಕೈಲಾಸ ಪರ್ವತದಿಂದ ಭೂಮಿಗೆ ಸ್ವಾಗತಿಸಲಾಗುತ್ತದೆ. ಈ ದಿನದಂದು ಭಕ್ತರು ಬೇಗನೆ ಎದ್ದು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಅವರೂ ಉಪವಾಸವಿದ್ದು ಗಣೇಶನ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಗಣೇಶ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ, ಇದನ್ನು ದೇಶದಾದ್ಯಂತ ವಿಜೃಂಭಣೆಯಿಂದ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಜನರು ಮಂತ್ರ, ಪೂಜೆ, ಭಕ್ತಿಗೀತೆಗಳು, ಸಿಹಿತಿಂಡಿಗಳ ತಯಾರಿಯಲ್ಲಿ ತೊಡಗುತ್ತಾರೆ. ಗಣೇಶನಿಗಾಗಿ ಬಗೆಬಗೆಯ ತಿಂಡಿ ನೀಡಿ ಪ್ರೀತಿ ತೋರುತ್ತಾರೆ. ಮನೆಗೆ ಅತಿಥಿಗಳನ್ನು ಕರೆದು ಉಪಚರಿಸುತ್ತಾರೆ.
ಇದೆಲ್ಲಕ್ಕಿಂತ ಮುನ್ನ ಗಣೇಶ ಚತುರ್ಥಿಯಂದು, ಜನರು ತಮ್ಮ ಮನೆಗಳಿಗೆ ಗಣೇಶನನ್ನು ಸ್ವಾಗತಿಸಲು ತಮ್ಮ ಮನೆಗಳನ್ನು ವಿಧವಿಧವಾಗಿ ಅಲಂಕರಿಸುತ್ತಾರೆ. ನಿಮ್ಮ ಮನೆಗೆ ಹಬ್ಬದ ಕಳೆ ತರಲು ನೀವು ಮನೆಯನ್ನು ಹೇಗೆಲ್ಲ ಅಲಂಕರಿಸಬಹುದು ಎಂಬುದಕ್ಕೆ ಕೆಲ ಐಡಿಯಾಗಳನ್ನಿಲ್ಲಿ ಕೊಡಲಾಗಿದೆ.