ಭುವಿಗಿಳಿದ ಭಗವಂತ; ಜಿ.ಡಿ. ಭಟ್ ಕೈಯ್ಯಲ್ಲಿ ಮೂಡುವ ಮನೋಹರ ಗಣಪನ ಮೂರ್ತಿಗಳು

First Published Aug 28, 2022, 5:01 PM IST

ಎಲ್ಲೆಡೆ ಮೌಲ್ಡ್ ಬಳಸಿ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್‌ನಿಂದ ಗಣೇಶ ವಿಗ್ರಹ ತಯಾರಿಸುತ್ತಿರುವ ಈ ಸಮಯದಲ್ಲಿ ಕುಮಟಾದ ಜಿ.ಡಿ. ಭಟ್ ಕೆಕ್ಕಾರು ಅವರು ಕೈಯ್ಯಲ್ಲೇ ಮಣ್ಣಿನ ಗಣಪ ತಯಾರಿಸುವ ಹುಟ್ಟು ಕಲಾವಿದ. 

ಫೋಟೋಗಳು- ಗಣೇಶ್ ಅಗ್ನಿಹೋತ್ರಿ.

ಗಣೇಶ ಚತುರ್ಥಿಯ ಹಬ್ಬ ಎಂದರೆ ಮಾರುಕಟ್ಟೆಯಲ್ಲಿ ಗಣಪತಿಯ ಮೂರ್ತಿಗಳು ತುಂಬಿ ತುಳುಕುತ್ತಿವೆ. ವಿಭಿನ್ನ ಶೈಲಿಗಳಿಂದ ಗಾತ್ರದವರೆಗೆ, ಕಲಾವಿದರು ಗಣಪತಿ ವಿಗ್ರಹಗಳನ್ನು ಅತ್ಯಂತ ಭಕ್ತಿ ಮತ್ತು ಸೃಜನಶೀಲತೆಯಿಂದ ವಿನ್ಯಾಸಗೊಳಿಸುತ್ತಾರೆ. ಅಂಥ ಅಪರೂಪದ ಕಲಾವಿದರಲ್ಲೊಬ್ಬರು ಕುಮಟಾದ ಜಿ.ಡಿ.ಭಟ್.

ಜಿ.ಡಿ. ಭಟ್ ಕೆಕ್ಕಾರು ಈ ಹೆಸರು ಕೇಳುತ್ತಿದ್ದಂತೆ  ಥಟ್ಟನೆ ನೆನಪಿಗೆ ಬರುವುದು ಅವರು ತಯಾರಿಸುವ ಗಣಪತಿಯ ವಿಗ್ರಹಗಳು. ಎಂತವರನ್ನೂ ಸೂಜಿಗಲ್ಲಿನಂತೆ ಸೆಳೆವ ಮಾಂತ್ರಿಕತೆ ಅವರ ಅದ್ಭುತ ಕಲಾಕಾರಿಕೆಯಲ್ಲಿ ಅಡಗಿದೆ.

Latest Videos


ಹೌದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಜಿ.ಡಿ. ಭಟ್ ಅವರು ಗಣಪತಿ ವಿಗ್ರಹಗಳು, ಚಿತ್ರಕಲೆ ಹಾಗೂ ನಾಟಕಗಳ ಮೂಲಕ ಜಿಲ್ಲೆಯಾದ್ಯಂತ  ಮನೆ ಮಾತಾಗಿರುವ ಕಲಾವಿದ.

ಗಣೇಶನ ವಿಗ್ರಹ ತಯಾರಿಕೆಯಲ್ಲಿ ಜಿ.ಡಿ. ಭಟ್ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಚೂಣಿಯ ಕಲಾವಿದರು. ಸಣ್ಣ ಸಣ್ಣ ವಿಗ್ರಹಗಳಿಂದ ಹಿಡಿದು ಆಳೆತ್ತರದ ವರೆಗಿನ ವಿಗ್ರಹ ತಯಾರಿಕೆಯಲ್ಲೂ ಸಿದ್ಧಿ ಪ್ರಸಿದ್ಧಿಯನ್ನು ಪಡೆದವರು.

ಗರುಡವಾಹನ ಗಣಪ, ಇಡಗುಂಜಿ ಮಾದರಿಯ ಗಣಪ, ಯಕ್ಷಗಾನ ಗಣಪ, ಕೊಳನೂದುವ ಕೃಷ್ಣನ ಮಾದರಿ ಗಣಪ, ನಾಟ್ಯ ಮಾಡುವ ಗಣಪ...ಹೀಗೆ ವಿಧ ವಿಧದ ಗಣಪನ ವಿಗ್ರಹಗಳು ಇವರ ಕೈಚಳಕದಿಂದ ಹಬ್ಬಕ್ಕೆ ಸಿದ್ಧಗೊಳ್ಳುತ್ತಿವೆ. 

ಈ ವರ್ಷ ಬಹಳಷ್ಟು ಗೌರಿ, ಗಣೇಶರ ವಿಗ್ರಹಗಳು ತಯಾರಾಗಿದ್ದು, ವಿಗ್ರಹಗಳಿಗೆ ಈಗ ಬಣ್ಣ ಹಚ್ಚುವ ಕಾಯಕ ಭರದಿಂದ ಸಾಗುತ್ತಿದೆ. 

ಕಳೆದ ಐವತ್ತಕ್ಕೂ ಅಧಿಕ ವರ್ಷಗಳಿಂದ ಈ ಕಾಯಕ ಮಾಡುತ್ತಿರುವ ಅವರು ಕುಮಟಾ ಮತ್ತು ಹೊನ್ನಾವರದ ಬಹುತೇಕ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಗ್ರಹಗಳನ್ನು ರಚಿಸಿಕೊಡುತ್ತಿದ್ದಾರೆ.

ಈ ವರ್ಷ 18 ಸಾರ್ವಜನಿಕ ಗಣಪತಿ ಮತ್ತು ನೂರಕ್ಕೂ ಅಧಿಕ ಸಣ್ಣ ವಿಗ್ರಹಗಳನ್ನು ಮಾಡಿದ್ದಾರೆ. ತನ್ನ 16ನೇ ವಯಸ್ಸಿನಿಂದಲೇ ಗಣಪತಿ ವಿಗ್ರಹಗಳನ್ನು ಮಾಡುತ್ತಿರುವ ಅವರಿಗೆ ಈಗ 71 ವರ್ಷ ವಯಸ್ಸು.
 

click me!