ಜ್ಯೋತಿಷ್ಯದಲ್ಲಿ, ನಮ್ಮ ದೈನಂದಿನ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಪರಿಹಾರಗಳಿವೆ. ಈ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅಂತಹ ಒಂದು ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾನೆ. ಈ ಸಮಸ್ಯೆ ಪ್ರಮೋಷನ್(Promotion) ಸಿಗುತ್ತಿಲ್ಲ ಎಂದು. ಆದ್ದರಿಂದ ಜ್ಯೋತಿಷ್ಯದ ಪ್ರಕಾರ ಮುಂದುವರಿಯಲು ಮತ್ತು ಪ್ರಗತಿ ಪಡೆಯಲು ಕೆಲವು ಮಾರ್ಗಗಳನ್ನು ಇಲ್ಲಿ ಹೇಳಲಾಗಿದೆ. ಪ್ರಮೋಷನ್ ಪಡೆಯಲು ಇವು ಕೆಲವು ವಿಶೇಷ ಮಾರ್ಗಗಳಾಗಿವೆ. ಇದನ್ನು ಮಾಡುವ ಮೂಲಕ ನೀವು ಸಹ ಪ್ರಯೋಜನ ಪಡೆಯಬಹುದು.
1. ನಿಮ್ಮ ಜಾತಕದಲ್ಲಿ(Jataka) ಹತ್ತನೇ ಮನೆ ದುರ್ಬಲವಾಗಿದ್ದರೆ, ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಹಾಗಾಗಿ, ನಿಮ್ಮ ಜಾತಕದ ಹತ್ತನೇ ಮನೆಯ ಪ್ರಭುವನ್ನು ಪೂಜಿಸಿ ಮತ್ತು ಸರಿಯಾದ ಮಂತ್ರಗಳನ್ನು ಪಠಿಸುವ ಮೂಲಕ ಅವನನ್ನು ಮೆಚ್ಚಿಸಿ. ಇದು ನಿಮಗೆ ತ್ವರಿತ ಪ್ರಗತಿಯನ್ನು ನೀಡುತ್ತೆ.
2. ಒಬ್ಬ ವ್ಯಕ್ತಿ ವಿವಿಧ ಗ್ರಹಗಳ ಪ್ರಭಾವದಿಂದ ಬಳಲುತ್ತಿರುವಾಗ, ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗುತ್ತೆ. ಗ್ರಹಗಳ ಅಡ್ಡಪರಿಣಾಮಗಳನ್ನು ತೊಡೆದು ಹಾಕಲು ಅಥವಾ ಕಡಿಮೆ ಮಾಡಲು, ದೇವಾಲಯದಲ್ಲಿ ಅಭಿಷೇಕ (Abhishek) ಮಾಡಬೇಕು. ಇದಲ್ಲದೆ, ಮನೆಯಲ್ಲಿ ಒಂಬತ್ತು ಗ್ರಹಗಳನ್ನು ಪೂಜಿಸಬೇಕು. ಇದು ನಿಮಗೆ ಪ್ರಗತಿಯನ್ನು ನೀಡುತ್ತೆ ಮತ್ತು ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ಹರಡುತ್ತೆ.
3. ಸೂರ್ಯೋದಯದ ಸಮಯದಲ್ಲಿ ಸೂರ್ಯ (Sun) ದೇವರಿಗೆ ನೀರನ್ನು ಅರ್ಪಿಸಿ. ಇದರೊಂದಿಗೆ, ಗಾಯತ್ರಿ ಮತ್ತು ಸೂರ್ಯ ಮಂತ್ರವನ್ನು ಪಠಿಸಿ. ಇದನ್ನು ಮಾಡೋದರಿಂದ, ನೀವು ನೆನೆಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಸಾಧಿಸುವುದು ಖಂಡಿತಾ.
ಹಾಗೆ ಮಾಡೋದರಿಂದ ವ್ಯವಹಾರದಲ್ಲಿ ಲಾಭವಾಗಲಿದೆ. ಸೂರ್ಯನ ನಕಾರಾತ್ಮಕ (Negative energy) ಶಕ್ತಿಯು ಒಬ್ಬ ವ್ಯಕ್ತಿಗೆ ಹೋರಾಡಲು ಮತ್ತು ಬರುವ ಸಮಸ್ಯೆಗಳನ್ನು ಎದುರಿಸಲು ಧೈರ್ಯವನ್ನು ನೀಡುತ್ತೆ ಎಂದು ನಂಬಲಾಗಿದೆ. ಹಾಗಾಗಿ ಈ ಉಪಾಯವನ್ನು ಮಾಡಲು ಮರೆಯಬೇಡಿ.
4. ಜಾತಕದಲ್ಲಿ ಶನಿ ಪ್ರಬಲವಾಗಿಲ್ಲದಿದ್ದರೆ, ಶನಿವಾರ ಶನಿ ದೇವರ ಮುಂದೆ ಎಣ್ಣೆ ದೀಪವನ್ನು(Deepa) ಬೆಳಗಿಸಿ ಎಂದು ಹೇಳಲಾಗುತ್ತೆ. ಎಣ್ಣೆ ದೀಪವನ್ನು ಬೆಳಗಿಸುವ ಮೂಲಕ, ಜಾತಕದ ಎಲ್ಲಾ ದೋಷಗಳು ಮುಕ್ತವಾಗುತ್ತವೆ. ಇದನ್ನು ಮಾಡೋದರಿಂದ, ಶನಿ ದೇವರ ಸಕಾರಾತ್ಮಕ ಶಕ್ತಿ ನಿಮ್ಮನ್ನು ತಲುಪುತ್ತೆ ಮತ್ತು ಸಮಸ್ಯೆಗಳನ್ನು ಎದುರಿಸುವ ಧೈರ್ಯ ಪಡೆಯುತ್ತೀರಿ. ಅಲ್ಲದೆ, ಜೀವನವು ಯಶಸ್ವಿಯಾಗುತ್ತೆ.
5. ಉದ್ಯಮಿಗಳು ತಮ್ಮ ಆಫೀಸ್ ನ ದೇವರಿಡೋ ಜಾಗದಲ್ಲಿ ಸಣ್ಣ ಲಕ್ಷ್ಮಿ(Goddess lakshmi) ಯಂತ್ರವನ್ನು ಸ್ಥಾಪಿಸಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಇದು ಕಚೇರಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳುತ್ತೆ. ಇದರೊಂದಿಗೆ, ಹಣವನ್ನು ಸಹ ಉಳಿಸುಕೊಳ್ಳಲು ಇದು ಸಹಾಯ ಮಾಡುತ್ತೆ.