ಮಹಾ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಈ 6 ಕೆಲಸಗಳನ್ನು ತಪ್ಪದೆ ಮಾಡಿ

Suvarna News   | Asianet News
Published : Jan 27, 2021, 10:08 AM ISTUpdated : Jan 27, 2021, 10:15 AM IST

ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸುಖ- ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ. ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ ಆದ್ದರಿಂದ ಮಹಿಳೆಯರು ಮನೆಯಲ್ಲಿ ಪ್ರತಿದಿನ ಕೆಲವು ಕೆಲಸಗಳನ್ನು ಮಾಡಿದರೆ, ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನೆಲೆಸಿರುತ್ತಾಳೆ.

PREV
17
ಮಹಾ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಈ 6 ಕೆಲಸಗಳನ್ನು ತಪ್ಪದೆ ಮಾಡಿ

ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸುಖ- ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ. ತಾಯಿ ನೆಲೆಸಿರುವ ವಾತಾವರಣವೂ ಧನಾತ್ಮಕವಾಗಿರುತ್ತದೆ. ಮನೆಗೆ ಲಕ್ಷ್ಮಿಯ ಆಗಮನವಾಗಬೇಕು ಎಂದಾದರೆ ಪ್ರತಿದಿನ ಮನೆಯಲ್ಲಿ ಕೆಲವೊಂದು ನಿಯಮಗಳನ್ನು, ಆಚರಣೆಗಳನ್ನು ಪಾಲಿಸಬೇಕು. ಹಾಗಿದ್ದರೆ ಬೇಗನೆ ಲಕ್ಷ್ಮಿ ಆಗಮನವಾಗುತ್ತದೆ. 

27

1.ಮಹಿಳೆಯರು ರಾತ್ರಿ ವೇಳೆ ಮನೆಯ ದೇವರ ಕೋಣೆಯಲ್ಲಿ ದೀಪಗಳನ್ನು ಉರಿಸಬೇಕು. ಪ್ರತಿ ರಾತ್ರಿ ದೀಪವನ್ನು ಉರಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಅಲ್ಲದೆ, ಹಣದ ಕೊರತೆಯೂ ಇರುವುದಿಲ್ಲ.

37

2. ರಾತ್ರಿ ಮಲಗುವಾಗ, ಕರ್ಪೂರವನ್ನು ಮನೆಯ ಹೊರಗೆ ಮತ್ತು ಇಡೀ ಮನೆಯ ಒಳಗೆ ಹಚ್ಚಬೇಕು. ಇದು ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕಿ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಇದು ತಾಯಿ ಲಕ್ಷ್ಮಿಯನ್ನು ಸಂತೋಷವಾಗಿಸುತ್ತದೆ. ಇದೇ ವೇಳೆ, ಕುಟುಂಬದ ಜನರ ನಡುವಿನ ಸಂಬಂಧವೂ ಉತ್ತಮವಾಗಿರುತ್ತದೆ.

47

3. ಮಹಿಳೆಯರು ರಾತ್ರಿ ಮಲಗುವ ಮುನ್ನ ತಮ್ಮ ಮನೆಯ ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಇದು ಮನೆಯ ವಾತಾವರಣವನ್ನು ಕೂಡ ಮಧುರವಾಗಿಡುತ್ತದೆ ಮತ್ತು ತಾಯಿ ಲಕ್ಷ್ಮಿಕೂಡ ಸಂತೋಷ ಪಡುತ್ತಾಳೆ. 

57

4. ರಾತ್ರಿಯಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಮಹಿಳೆ ತನ್ನ ಮನೆಯ ದಕ್ಷಿಣ ಭಾಗದಲ್ಲಿ ಹಚ್ಚಬೇಕು. ಈ ದಿಕ್ಕು ಪಿತೃಗಳದ್ದು ಮತ್ತು ಪರಲೋಕದಲ್ಲಿರುವ ಪಿತೃಗಳು ಭೂಮಿಯ ಮೇಲೆ ಸುಖ ಮತ್ತು ಸಮೃದ್ಧಿಯನ್ನು ಹೊಂದಲು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಬಲ್ಬ್ ಗಳನ್ನು ಕೂಡ ಇಲ್ಲಿ ಹಚ್ಚಬಹುದು.

67

5. ಮಲಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದು ತುಂಬಾ ಮುಖ್ಯ. ಚೆಲ್ಲಾಪಿಲ್ಲಿಯಾದ ಮನೆಗಳಲ್ಲಿ ಮಲಗಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

77

6. ಕೆಲವೊಮ್ಮೆ ಮನೆಯ ಮುಖ್ಯದ್ವಾರದಲ್ಲಿ ಪಾದರಕ್ಷೆಗಳನ್ನು ಕುಟುಂಬದ ಜನರು ಬಿಟ್ಟು ಹೋಗುತ್ತಾರೆ. ಇದರಿಂದ ತಾಯಿ ಲಕ್ಷ್ಮಿ ನಿಮ್ಮ ಮನೆ ಪ್ರವೇಶಿಸಲು ಇಷ್ಟ ಪಡುವುದಿಲ್ಲ.  ನಿಮಗೂ ಇದೇ ಅಭ್ಯಾಸವಿದ್ದರೆ, ಮಲಗುವ ಮುನ್ನ ಪಾದರಕ್ಷೆಯ ಒಂದು ಮೂಲೆಗೆ ಸರಿಸಿ ಮಲಗಿ.  

click me!

Recommended Stories