ಪಾಕಿಸ್ತಾನದಲ್ಲಿರುವ ಖ್ಯಾತ ಹಿಂದೂ ದೇವಾಲಯಗಳು
First Published | Aug 8, 2020, 4:57 PM ISTಪಾಕಿಸ್ತಾನವೆಂದರೆ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಅಲ್ಲಿನ ಜನಸಂಖ್ಯೆಯ ಶೇ.1.85ರಷ್ಟು ಮಾತ್ರ ಹಿಂದೂಗಳಿರುವುದು. ಮುಸ್ಲಿಂ ಬಾಹುಳ್ಯದ ಈ ದೇಶದಲ್ಲಿ ಹೊಸ ಹಿಂದೂ ದೇವಾಲಯ ನಿರ್ಮಾಣವೆಂದರೆ ಸ್ವಲ್ಪ ಕಟ್ಟುತ್ತಿದ್ದಂತೆ ಎಲ್ಲವನ್ನೂ ಪುಡಿಪುಡಿಗಟ್ಟಲಾಗುತ್ತದೆ. ಆದರೆ, ಪುರಾತನವಾದ ಕೆಲವೊಂದು ದೇವಾಲಯಗಳು ಇನ್ನೂ ಹಾಗೇ ನಿಂತಿವೆ. ಅವುಗಳಲ್ಲಿ ಕೆಲವು ಭಗ್ನಗೊಂಡಿವೆಯಾದರೂ ಮತ್ತೆ ಕೆಲವುಗಳಲ್ಲಿ ಈಗಲೂ ಪೂಜೆ ನಡೆಯುತ್ತದೆ. ಇಲ್ಲಿದ್ದ ಹತ್ತಿರತ್ತಿರ 1300 ದೇವಾಲಯಗಳಲ್ಲಿ ಈಗ ಕೇವಲ 30 ಮಾತ್ರ ಪೂಜೆಗೆ ಭಾಜನವಾಗುತ್ತಿವೆ.