ಪೂಜೆ ಮಾಡುವಾಗ ದೀಪ ಆರಿದರೆ, ಅಪಶಕುನವೇ?

First Published Jan 10, 2023, 4:56 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ, ಪೂಜೆ ಮಾಡುವಾಗ ಕೆಲವು ವಿಷಯ ಸಂಭವಿಸೋದು ಅಹಿತಕರವಾದದ್ದನ್ನು ಸೂಚಿಸುತ್ತೆ ಎಂದು ನಂಬಲಾಗಿದೆ. ಪೂಜೆ ಮಾಡುವಾಗ ಯಾವ ವಸ್ತು ಬಿದ್ದರೆ  ಅಶುಭವೆಂದು ಪರಿಗಣಿಸಲಾಗುತ್ತೆ ಎಂಬುದನ್ನೂ ಇಲ್ಲಿ ತಿಳಿಯಿರಿ-

ಸನಾತನ ಧರ್ಮದಲ್ಲಿ ಪೂಜೆ(Worship) ಬಹಳ ಮುಖ್ಯ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಪೂಜಿಸೋದು ಕಡ್ಡಾಯ. ಆದರೆ ಪೂಜೆ ಮಾಡುವಾಗ, ಮುಂಬರುವ ಸಮಯದಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಮನಸ್ಸಿನಲ್ಲಿ ಪ್ರಶ್ನೆಯನ್ನು ಎತ್ತುವ ಏನಾದರೂ ಸಂಭವಿಸುತ್ತೆ. ಹಾಗೇನಾದರೂ ಆದರೆ, ನಮ್ಮಲ್ಲೂ ಇದರ ಅರ್ಥ ಏನಿರಬಹುದು ಎನ್ನುವ ಆತಂಕ ಮೂಡುತ್ತದೆ. ಹಾಗಿದ್ದರೆ ಯಾವ ವಿಷಯ ಏನು ಅರ್ಥವನ್ನು ತಿಳಿಸುತ್ತೆ ನೋಡೋಣ. 

ಅನೇಕ ಬಾರಿ ಪೂಜೆ ಮಾಡುವಾಗ ಅವಸರದಲ್ಲಿ ಕೆಲ ವಸ್ತುಗಳು ಕೈತಪ್ಪಿ ಬೀಳುತ್ತವೆ (Fall down). ಜ್ಯೋತಿಷ್ಯ ಶಾಸ್ತ್ರದಲ್ಲಿ, ಆರಾಧನೆಗೆ ಸಂಬಂಧಿಸಿದ ಕೆಲವು ವಿಷಯಗಳು ಕೈಯಿಂದ ಬೀಳೋದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ಯಾವ ವಸ್ತು ಬಿದ್ದರೆ ಅಶುಭವೆಂದು ಪರಿಗಣಿಸಲಾಗುತ್ತದೆಯೋ ಆ ವಸ್ತುಗಳು ಯಾವುವು ಎಂದು ತಿಳಿಯಿರಿ

ದೀಪ (Deepam)

ಪೂಜಿಸುವಾಗ ದೀಪ ಇದ್ದಕ್ಕಿದ್ದಂತೆ ಬಿದ್ದರೆ, ಅದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೈಗಳಿಂದ ದೀಪ ಬೀಳೋದು ಅಹಿತಕರವಾದದ್ದನ್ನು ಸೂಚಿಸುತ್ತೆ ಎಂದು ನಂಬಲಾಗಿದೆ. ಆದ್ದರಿಂದ, ತಪ್ಪಿಗೆ ದೇವರಲ್ಲಿ  ಕ್ಷಮೆಯಾಚಿಸಿ, ದೀಪವನ್ನು ಮತ್ತೆ ಬೆಳಗಿಸಬೇಕು.

ಪ್ರಸಾದ(Prasada) ಬೀಳೋದು

ಅನೇಕ ಬಾರಿ ಪ್ರಸಾದ ಇದ್ದಕ್ಕಿದ್ದಂತೆ ಕೈಯಿಂದ ಬೀಳುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ಕೆಲಸ, ಕಾರ್ಯಗಳಲ್ಲಿ ಏನಾದರೂ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತದೆ. ಪ್ರಸಾದ ಬಿದ್ದಾಗ, ಅದನ್ನು ಎತ್ತಿ ಹಣೆಗೆ ಮುಟ್ಟಿಸಿ. ಇದರ ನಂತರ, ಅದನ್ನು ತಿನ್ನಿ ಅಥವಾ ಪಾತ್ರೆಯಲ್ಲಿ ಹಾಕಿ.

ಸಿಂಧೂರ (sindhoor)

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಸಿಂಧೂರವು ಶುಭ ಅಥವಾ ಅಶುಭ ಚಿಹ್ನೆಗಳನ್ನು ನೀಡುತ್ತೆ. ಪೂಜೆಯನ್ನು ಮಾಡುವಾಗ ಕುಂಕುಮದ ಬಾಕ್ಸ್ ಕೈಯಿಂದ ಬಿದ್ದರೆ, ಮುಂಬರುವ ಸಮಯದಲ್ಲಿ ಕುಟುಂಬ ಅಥವಾ ಪತಿಗೆ ಬಿಕ್ಕಟ್ಟು ಉಂಟಾಗಲಿದೆ ಎಂದು ಅರ್ಥಮಾಡಿಕೊಳ್ಳಿ. 

ಕುಂಕುಮ (Kumkum) ಕೈಯಿಂದ ಬಿದ್ದರೆ ಅದರ ಮೇಲೆ ಎಂದಿಗೂ ಕಾಲನ್ನಿಡಬೇಡಿ ಅಥವಾ ಪೊರಕೆಯನ್ನು ಹಾಕಬೇಡಿ. ಸ್ವಚ್ಛವಾದ ಬಟ್ಟೆಯಿಂದ ಅದನ್ನು ಮೇಲೆತ್ತಿ ಮತ್ತು ಅದನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಅಥವಾ ಕುಂಕುಮವನ್ನು ನೀರಿನಲ್ಲಿ ಹರಿಯಲು ಬಿಡಿ.ಹೀಗೆ ಮಾಡೋದ್ರಿಂದ ಯಾವ ಆಪತ್ತು ಬರೋದಿಲ್ಲ. 
 

ಪ್ರತಿಮೆ(Idol) ಅಥವಾ ಚಿತ್ರ ಬೀಳೋದು

ಅನೇಕ ಬಾರಿ ಹಠಾತ್ ಕೈಯಿಂದ ಪ್ರತಿಮೆ ಅಥವಾ ಫೋಟೋ ಬಿದ್ದು ಮುರಿಯುತ್ತೆ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ಹೀಗೆ ಸಂಭವಿಸಿದ್ರೆ, ದೇವರಲ್ಲಿ  ಕ್ಷಮೆಯಾಚಿಸಿ ಮತ್ತು ಮುರಿದ ವಿಗ್ರಹ ಅಥವಾ ಚಿತ್ರವನ್ನು ನೀರಿಗೆ ಎಸೆದರೆ ಮುಂದೆ ಬರಲಿರೋ ಆಪತ್ತು ತಪ್ಪಲಿದೆ ಎನ್ನೋ ನಂಬಿಕೆ ಇದೆ.
 

click me!