Makar Sankranti 2023; ಮೋದಿ ಶೇರ್ ಮಾಡಿದ ಗಾಳಿಪಟ ಉತ್ಸವದ ವರ್ಣಮಯ ಫೋಟೋಗಳು

First Published | Jan 9, 2023, 12:11 PM IST

ಸಂಕ್ರಾಂತಿ ಎಂದರೆ ಗುಜರಾತಿಗಳಿಗೆ ಉತ್ತರಾಯಣ ಸಂಭ್ರಮ. ಅವರು ಈ ಸಂದರ್ಭವನ್ನು ಗಾಳಿಪಟ ಉತ್ಸವದ ಮೂಲಕ ಆಚರಿಸುತ್ತಾರೆ. ಇಲ್ಲಿ ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜಗದ್ವಿಖ್ಯಾತವಾಗಿದೆ. ಈ ಬಾರಿಯ ಗಾಳಿಪಟ ಉತ್ಸವ ಆರಂಭವಾಗಿದ್ದು, ಅದರ ಕಲರ್‌ಫುಲ್ ಫೋಟೋಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. 

ಸಂಕ್ರಾಂತಿ ಹಬ್ಬ ಎಂದರೆ ಗಾಳಿಪಟ ಹಾರಿಸುವುದೂ ಅದರ ಒಂದು ಭಾಗ. ಅದರಲ್ಲೂ ಗುಜರಾತ್‌ನಲ್ಲಿ ಗಾಳಿಪಟ ಹಾರಿಸುವುದೇ ಅತಿ ದೊಡ್ಡ ಸಂಕ್ರಾಂತಿ ಚಟುವಟಿಕೆ. 

1989ರಿಂದ, ಅಹಮದಾಬಾದ್ ನಗರವು ಉತ್ತರಾಯಣದ ಅಧಿಕೃತ ಆಚರಣೆಯ ಭಾಗವಾಗಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸುತ್ತಾ ಬಂದಿದೆ.

Tap to resize

ಪ್ರಪಂಚದಾದ್ಯಂತದ ಮಾಸ್ಟರ್ ಗಾಳಿಪಟ ತಯಾರಕರು ಮತ್ತು ಫ್ಲೈಯರ್‌ಗಳು ತಮ್ಮ ಅನನ್ಯ ರಚನೆಗಳನ್ನು ಪ್ರದರ್ಶಿಸಲು ಹೆಚ್ಚು ಅಸಾಮಾನ್ಯ ಗಾಳಿಪಟಗಳೊಂದಿಗೆ ಜನಸಂದಣಿಯನ್ನು ವಿಸ್ಮಯಗೊಳಿಸಲು ಇಲ್ಲಿ ನೆರೆಯುತ್ತಾರೆ. 

ಕಳೆದ ವರ್ಷಗಳಲ್ಲಿ, ಮಲೇಷ್ಯಾದಿಂದ ಮಾಸ್ಟರ್ ಗಾಳಿಪಟ ತಯಾರಕರು ತಮ್ಮ ವಾವು-ಬಲಂಗ್ ಗಾಳಿಪಟಗಳನ್ನು ತಂದಿದ್ದಾರೆ, ಇಂಡೋನೇಷ್ಯಾದಿಂದ ಲ್ಲಯಾಂಗ್-ಲಯಾಂಗವೇ ಬಂದಿದ್ದಾರೆ, ಯುಎಸ್ಎಯಿಂದ ಗಾಳಿಪಟ ನವೋದ್ಯಮಿಗಳು ದೈತ್ಯ ಬ್ಯಾನರ್ ಗಾಳಿಪಟಗಳೊಂದಿಗೆ ಆಗಮಿಸಿದ್ದಾರೆ ಮತ್ತು ಜಪಾನಿನ ರೊಕ್ಕಾಕು ಫೈಟಿಂಗ್ ಗಾಳಿಪಟಗಳು ಇಟಾಲಿಯನ್ ಶಿಲ್ಪಕಲಾ ಗಾಳಿಪಟಗಳೊಂದಿಗೆ ಆಕಾಶವನ್ನು ಹಂಚಿಕೊಂಡಿವೆ. ಚೈನೀಸ್ ಫ್ಲೈಯಿಂಗ್ ಡ್ರ್ಯಾಗನ್‌ಗಳು ಕೂಡಾ ಅಹಮದಾಬಾದ್ ಆಕಾಶವನ್ನು ಸುಂದರಗೊಳಿಸಿವೆ.

ಇದೀಗ ಈ ಉತ್ತರಾಯಣ ಆರಂಭದ ಈ ಹೊಸ್ತಿಲಲ್ಲಿ ಅಹಮದಾಬಾದ್‌ನಲ್ಲಿ ಮತ್ತೆ ಗಾಳಿಪಟ ಉತ್ಸವ ಆರಂಭವಾಗಿದೆ. ಜನ ಸಂಭ್ರಮದಿಂದ ಬಿಸಿಲನ್ನು ಆಸ್ವಾದಿಸುತ್ತಿದ್ದಾರೆ.

ಈ ವರ್ಣಮಯ ಗಾಳಿಪಟ ಉತ್ಸವದ ಈ ಬಾರಿಯ ಕೆಲ ಫೋಟೋಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಮ್ಮೆಯಿಂದ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ Colourful kite festival in Ahmedabad. Great fervour! ಎಂದು ಹೇಳಿದ್ದಾರೆ. 

ಮೋದಿಯವರು ಹಂಚಿಕೊಂಡ ಫೋಟೋಗಳಲ್ಲಿ ಭಾರತದ ತ್ರಿವರ್ಣ ಗಾಳಿಪಟ, ಬೃಹತ್ ಫುಟ್ಬಾಲ್ ಗಾಳಿಪಟ, ಪುಟ್ಟ ಪುಟ್ಟ ಗಾಳಿಪಟಗಳ ದೊಡ್ಡ ಸಾಲು ಸೇರಿದಂತೆ ಹಲವು ರೀತಿಯ ವೈವಿಧ್ಯತೆಯನ್ನು ಕಾಣಬಹುದು. 

ಪ್ರಧಾನಿ ಶೇರ್ ಮಾಡಿದ ಈ ಗ್ಯಾಲರಿಗೆ ಜನರು ಮನ ಮೆಚ್ಚಿ ಅದ್ಭುತ, ಅತ್ಯದ್ಭುತ, ಸುಂದರ ಇತ್ಯಾದಿ ಉಪಮೆಗಳನ್ನು ನೀಡಿ ಹಾಡಿ ಹೊಗಳುತ್ತಿದ್ದಾರೆ. 

ಒಬ್ಬರು ಇದೊಂದು ಅನನ್ಯ ಗಾಳಿಪಟ ಉತ್ಸವವಾಗಿದ್ದು, ಜನರು ಎಷ್ಟೊಂದು ಪ್ರತಿಭಾಶಾಲಿಗಳು ಎಂಬುದನ್ನು ತೋರಿಸುತ್ತಿದೆ. ಭಾರತದ ಬಗ್ಗೆ ಹೆಮ್ಮೆ ಎನಿಸುತ್ತದೆ. ವಂದೇ ಮಾತರಂ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬ ಫೇಸ್ಬುಕ್ ಬಳಕೆದಾರರು 'ಸುಂದರವಾದ ಗಾಳಿಪಟಗಳ ಆಕರ್ಷಕ ಪ್ರದರ್ಶನ ಮತ್ತು ಪ್ರದರ್ಶನದಲ್ಲಿ ಉತ್ತಮ ಹಬ್ಬದ ಉತ್ಸಾಹ! ಒಗ್ಗಟ್ಟಿನಿಂದ ಆಚರಿಸುವುದು ಹೇಗೆ ಎಂದು ಗುಜರಾತಿಗಳಿಗೆ ನಿಜವಾಗಿಯೂ ತಿಳಿದಿದೆ!' ಎಂದಿದ್ದಾರೆ. 

ಈ ಸಂದರ್ಭದಲ್ಲಿ ಅಹಮದಾಬಾದ್‌ನ ಪ್ರತಿ ಮನೆಮನೆಯಲ್ಲಿಯೂ ಜನ ಟೆರೇಸ್, ಬಯಲು, ಬೆಟ್ಟಗಳಲ್ಲಿ ಸೇರಿಕೊಂಡು ಗಾಳಿಪಟ ಹಾರಿಸುತ್ತಾ, ಒಬ್ಬರು ಮತ್ತೊಬ್ಬರ ಗಾಳಿಪಟ ಕೆಡವಲು ಪ್ರಯತ್ನಿಸುತ್ತಾ ಸಂಭ್ರಮಿಸುತ್ತಾರೆ.

Latest Videos

click me!