ಏಕಾದಶಿಯಂದು ಅಪ್ಪುಗೆ ವಿಶೇಷ ಪೂಜೆ ಸಲ್ಲಿಸಿದ ಪುಟಾಣಿ ಅಭಿಮಾನಿ

First Published Jul 18, 2024, 10:32 AM IST

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ 3 ವರ್ಷಗಳೇ ಕಳೆದರೂ ಅಭಿಮಾನಿಗಳು ಇನ್ನೂ ಅಪ್ಪುವನ್ನ ಮರೆಯಲಾಗುತ್ತಿಲ್ಲ. ಪ್ರತಿದಿನ ನೆನಪಿಸಿಕೊಳ್ಳುತ್ತಾರೆ. ಏಕದಶಿ ಹಬ್ಬದ ಹಿನ್ನೆಲೆ ಅಪ್ಪು ಫೋಟ ಮುಂದೆ ಎಡೆಯಿಟ್ಟು ಸದ್ಗತಿ ಸಿಗಲೆಂದು ದೇವರನ್ನ ಪ್ರಾರ್ಥಿಸಿದ ಅಭಿಮಾನಿ!

ಕನ್ನಡನಾಡಿನ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ಇಂದಿಗೆ ನಿಧನರಾಗಿ ಮೂರು ವರ್ಷಗಳೇ ಕಳೆದರೂ ನಾಡಿನ ಜನರು ಇಂದಿಗೂ ಅಪ್ಪುವಿನ ಸಾವು ಅರಗಿಸಿಕೊಳ್ಳಲಾಗುತ್ತಿಲ್ಲ. ಪ್ರತಿಮನೆಯಲ್ಲೂ ಅಪ್ಪುವಿನ ಅಭಿಮಾನಿಗಳಿದ್ದಾರೆ, ಅಪ್ಪು ಭೌತಿಕವಾಗಿ ನಿಧನರಾಗಿದ್ದಾಗಿ ಕೋಟ್ಯಂತರ ಅಭಿಮಾನಿಗಳ ಮನಸಿಲ್ಲಿ ಜೀವಂತವಾಗಿದ್ದಾರೆ.

ದಿನನಿತ್ಯವೂ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಮನೆ, ಅಂಗಡಿಗಳಲ್ಲಿ ದೇವರ ಜಗುಲಿಯ ಮೇಲಿಟ್ಟು ಪೂಜಿಸುತ್ತಾರೆ. ಹಬ್ಬ ಹರಿದಿನಗಳಂದು ಪುನೀತ್‌ ರಾಜ್‌ಕುಮಾರ್‌ಗಾಗಿ ವಿಶೇಷವಾಗಿ ಪ್ರಾರ್ಥಿಸಲಾಗುತ್ತದೆ. ಪ್ರತಿವರ್ಷ ಅಪ್ಪು ಪುಣ್ಯಸ್ಮರಣೆಯ ದಿನದಂದು ದೂರದೂರಿನಿಂದ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ಬರುತ್ತಾರೆ. 

Latest Videos


ಇಡೀ ದಿನ ಅಪ್ಪುವನ್ನ ನೆನೆದು ದುಃಖಿಸುತ್ತಾರೆ. ಪೂಜಿಸುವುದಷ್ಟೇ ಅಲ್ಲ ಅಪ್ಪು ಅಭಿಮಾನಿಗಳು ರಕ್ತದಾನ ಶಿಬಿರ, ಅನ್ನದಾನ, ನೇತ್ರ ತಪಾಸಣೆಯಂತಹ ಸಮಾಜಮುಖಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇದೀಗ ಏಕಾದಶಿ ಹಬ್ಬ ಹಿನ್ನೆಲೆ ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ಗೆ ಸದ್ಗತಿ ಸಿಗಲೆಂದು ಪೂಜೆ ಸಲ್ಲಿಸುತ್ತಿದ್ದಾರೆ.
 

ಅದೇ ರೀತಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಅಪ್ಪು ಅಭಿಮಾನಿಯೊಬ್ಬ ದೇವರೊಂದಿಗೆ ಅಪ್ಪು ಫೋಟೊ ಮುಂದೆ ಎಡೆಯಿಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು ಅಭಿಮಾನಿಯಾಗಿರುವ ವ್ಯಕ್ತಿ. ಬೆಳಗ್ಗೆಯೇ ವಿಶೇಷ ತಿಂಡಿ ತಯಾರಿಸಿ ಮನೆದೇವರಿಗೆ ಪೂಜೆ ಸಲ್ಲಿಸಿ ಅಪ್ಪು ಫೋಟೊಕ್ಕೂ ಪೂಜೆ ಮಾಡಿ ಎಡೆ ಇಟ್ಟು ಪೂಜಿಸಿದ್ದಾರೆ.

ಏಕಾದಶಿಯಂದು ಅಗಲಿದ ಪ್ರೀತಿಪಾತ್ರರಿಗೆ ಸದ್ಗತಿ ಸಿಗಲೆಂದು ಏಕಾದಶಿಯಂದು ಪೂಜಿಸುವ ಪದ್ಧತಿಯಿದೆ. ಹೀಗಾಗಿ ದಿವಂಗತ ನಟ ಪುನೀತ್ ರಾಜ್‌ಕುಮಾರ ಫೋಟೊಗೆ ಪೂಜೆ ಸಲ್ಲಿಸಲಾಗಿದೆ. ಅಪ್ಪು ನಿಧನರಾಗಿ ಮೂರು ವರ್ಷ ಕಳೆದರು ಅಭಿಮಾನ ಕಡಿಮೆಯಾಗುತ್ತಿಲ್ಲ. ಅಪ್ಪು ಎಂದರೆ ದೇವರಂತೆ ಭಾವಿಸಿದ್ದಾರೆ. 

click me!