ಪೂಜೆ ಮಾಡೋವಾಗ ಈ ಸೂಚನೆ ಸಿಕ್ರೆ, ನಿಮ್ಮ ಪೂಜೆ ದೇವರಿಗೆ ತೃಪ್ತಿಯಾಗಿಲ್ಲವೆಂರ್ಥ!

First Published | Jul 17, 2024, 3:35 PM IST

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ, ಪ್ರತಿಯೊಬ್ಬರೂ ಬೆಳಿಗ್ಗೆ ಸ್ನಾನ ನಿತ್ಯಕರ್ಮಗಳನ್ನ ಮಾಡಿ ತಮ್ಮ ನೆಚ್ಚಿನ ದೇವರನ್ನು ಪೂಜಿಸುತ್ತಾರೆ. ಆದರೆ ಪೂಜೆ ಬಳಿಕ ನೀವು ಈ ಸೂಚನೆ ಪಡೆದರೆ, ದೇವರಿಗೆ ನಿಮ್ಮ ಪೂಜೆ ಇಷ್ಟವಾಗಿಲ್ಲ ಎಂದು ಅರ್ಥ. 
 

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರೂ ತಮ್ಮ ಆರಾಧ್ಯ ದೇವರನ್ನು ಹೃದಯದಿಂದ ಪೂಜಿಸುತ್ತಾರೆ ಮತ್ತು ಧ್ಯಾನಿಸುತ್ತಾರೆ. ದೇವರ ಪೂಜೆಯ ಸಮಯದಲ್ಲಿ ನೀವು ಕೆಲವೊಂದು ಸೂಚನೆಗಳನ್ನ ಪಡೆದರೆ, ನಿಮ್ಮ ಪೂಜೆ ಅಪೂರ್ಣವಾಗಿದೆ ಎಂದು ಅರ್ಥ. ಇದಲ್ಲದೆ, ದೇವರು ನಿಮ್ಮ ಪೂಜೆಯಿಂದ ಪ್ರಸನ್ನರಾದ್ರೆ ಅದಕ್ಕೂ ಕೆಲವೊಂದು ಚಿಹ್ನೆಗಳನ್ನು ನೀಡುತ್ತಾರೆ. ಬನ್ನಿ ಈ ಬಗ್ಗೆ ತಿಳಿಯೋಣ. 
 

puja 6.

ನಿಮ್ಮ ಆರಾಧನೆಯು ಅಪೂರ್ಣವಾಗಿದೆ ಎಂಬುದನ್ನು ಈ ಚಿಹ್ನೆತೋರಿಸುತ್ತವೆ
ದೀಪ ಆರುವುದು : ಪೂಜೆಯ ಸಮಯದಲ್ಲಿ ದೀಪ (lamp) ಪದೇ ಪದೇ ಆರಿ ಹೋದರೆ, ಅದು ಪೂಜೆಯಲ್ಲಿ ಏನೋ ಕೊರತೆಯಿದೆ ಎಂದು ಸೂಚಿಸುತ್ತದೆ.

Latest Videos


ಹೂವು ಉದುರುವುದು: ಪೂಜೆಯ ಸಮಯದಲ್ಲಿ ದೇವರಿಗೆ ಇಟ್ಟಂತಹ ತಾಜಾ ಹೂವುಗಳು (fresh flowers) ಹಠಾತ್ ಆಗಿ ಬೀಳುವುದು ಪೂಜೆ ಅಪೂರ್ಣವಾಗಿದೆ ಎಂಬುದರ ಸಂಕೇತ . ದೇವರಿಗೆ ನಿಮ್ಮ ಪೂಜೆ ಮೆಚ್ಚುಗೆಯಾಗಿಲ್ಲ ಅನ್ನೋದನ್ನ ಇದು ಸೂಚಿಸುತ್ತೆ. 
 

ಚಂಚಲ ಮನಸ್ಸು: ಪೂಜೆಯ ಸಮಯದಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡದೇ ಇರುವುದು, ಮನಸ್ಸು ಅಲೆದಾಡುವುದು ಅಥವಾ ಮನಸ್ಸಿನ ಚಡಪಡಿಕೆಯು ಆರಾಧನೆಯಲ್ಲಿ ಧ್ಯಾನದ ಕೊರತೆಯ ಸಂಕೇತವಾಗಿರಬಹುದು.
 

ನೀರು ಚೆಲ್ಲುವುದು: ಪೂಜೆಗೆ ಬಳಸುವ ನೀರಿನ ಪಾತ್ರೆಯಿಂದ ನೀರು ಪದೇ ಪದೇ ಚೆಲ್ಲಿದರೆ ಅಥವಾ ಆ ಪಾತ್ರೆ ಕೆಳಕ್ಕೆ ಬಿದ್ದರೆ, ಅದು ಅಪೂರ್ಣ ಪೂಜೆಯ ಸಂಕೇತವೂ ಆಗಿರಬಹುದು.
 

ಪ್ರಸಾದವನ್ನು ಸ್ವೀಕರಿಸದಿರುವುದು: ಪೂಜೆಯ ನಂತರ ಪ್ರಸಾದವನ್ನು ವಿತರಿಸುವಾಗ ಜನರು ಅದನ್ನು ಸ್ವೀಕರಿಸದಿದ್ದರೆ ಅಥವಾ ಪ್ರಸಾದದಲ್ಲಿ ಯಾವುದೇ ಕೊರತೆಯಿದ್ದರೆ, ಅದು ಪೂಜೆಯಲ್ಲಿನ ಯಾವುದೋ ಕೊರತೆಯ ಸಂಕೇತವಾಗಿರಬಹುದು.
 

ಪವಿತ್ರ ದಾರ ತುಂಡಾಗುವುದು : ಪೂಜೆಯ ಸಮಯದಲ್ಲಿ ಬಳಸುವ ರಕ್ಷಾ ಸೂತ್ರ ಅಥವಾ ಜಪಮಾಲೆಯಂತಹ ಪವಿತ್ರ ದಾರ ಇದ್ದಕ್ಕಿದ್ದಂತೆ ತುಂಡಾದರೆ, ಅದು ಸಹ ಪೂಜೆ ದೇವರಿಗೆ ಸ್ವೀಕಾರವಾಗಿಲ್ಲ ಎಂದರ್ಥ.
 

ಗಂಟೆ ಅಥವಾ ಶಂಖದ ಶಬ್ದ ಕಡಿಮೆಯಾಗೋದು : ಪೂಜೆಯ ಸಮಯದಲ್ಲಿ ಗಂಟೆ ಅಥವಾ ಶಂಖದ ಶಬ್ದದಲ್ಲಿ ಇಳಿಕೆಯಾದರೆ, ಅಥವಾ ಆ ಶಬ್ದವು ಸ್ಪಷ್ಟವಾಗಿಲ್ಲದಿದ್ದರೆ, ಅದು ಅಪೂರ್ಣ ಪೂಜೆಯ ಸಂಕೇತವಾಗಿರಬಹುದು.

ಅಶುಭ ಕನಸುಗಳು: ಪೂಜೆಯ ನಂತರ ರಾತ್ರಿ ಮಲಗಿದಾಗ ಮನಸ್ಸಿನಲ್ಲಿ ಅಶುಭ ಕನಸುಗಳು (bad dreams) ಅಥವಾ ಒಂದು ರೀತಿಯ ಅಡಚಣೆ ಇದ್ರೆ, ಅದು ಸಹ ಅಪೂರ್ಣ ಪೂಜೆಯ ಸಂಕೇತವೂ ಆಗಿರಬಹುದು.

click me!