ಶನಿ ದೇವನನ್ನು ಕನಸಿನಲ್ಲಿ ಕಾಣೋದು ಶುಭ ಸಂಕೇತವೇ?

First Published Sep 17, 2022, 3:57 PM IST

ಶನಿದೇವನನ್ನು ಕರ್ಮಫಲವನ್ನು ನೀಡುವವನು ಎಂದು ಕರೆಯಲಾಗುತ್ತೆ. ಶನಿದೇವನು ಒಬ್ಬ ವ್ಯಕ್ತಿಗೆ ಅವನ ಕರ್ಮಗಳಿಗನುಸಾರವಾಗಿ ಫಲಗಳನ್ನು ನೀಡುತ್ತಾನೆ. ಹಾಗಾಗಿ, ನೀವು ಸ್ವಪ್ನದಲ್ಲಿ ಶನಿದೇವನನ್ನು ನೋಡಿದ್ರೆ, ಅದರ ಅರ್ಥವೇನು ಎಂಬ ಪ್ರಶ್ನೆ ಉದ್ಭವಿಸುತ್ತೆ. ಹೆಚ್ಚಿನ ಜನರಿಗೆ ಶನಿದೇವನ ಬಗ್ಗೆ ಭಯವಿದೆ. ಹಾಗಾಗಿ, ಕನಸಿನಲ್ಲಿ ಶನಿದೇವನ ಆಗಮನವು ಕೆಲವೊಮ್ಮೆ ವ್ಯಕ್ತಿಯನ್ನು ವಿಚಲಿತಗೊಳಿಸುತ್ತೆ. ಆದರೆ ನೀವು ಆತನಿಗೆ ಹೆದರಬೇಕಾಗಿಲ್ಲ. ಏಕೆಂದರೆ, ಅನೇಕ ಸಂದರ್ಭಗಳಲ್ಲಿ, ಶನಿದೇವನು ಕನಸಿನಲ್ಲಿ ಬರುವುದು ಶುಭ ಸಂಕೇತವಾಗಿದೆ. ಆದ್ದರಿಂದ ಕನಸಿನಲ್ಲಿ, ಶುಭ ಅಥವಾ ಅಶುಭ ರಾಶಿಯಲ್ಲಿ ಶನಿದೇವನ ಆಗಮನ ಏನನ್ನು ಸೂಚಿಸುತ್ತದೆ ತಿಳಿದುಕೊಳ್ಳೋಣ.

ಕನಸಿನಲ್ಲಿ ಶನಿದೇವನನ್ನು(Shani dev) ನೋಡುವುದು
ಶನಿಯ ಸಾಡೇ ಸಾತ್  ಧೈಯಾ ದಶ ಒಬ್ಬ ವ್ಯಕ್ತಿಯ ಮೇಲೆ ನಡೆಯುತ್ತಿದ್ದರೆ, ಆ ಸಮಯದಲ್ಲಿ ಶನಿದೇವನು ನಿಮಗೆ ಸ್ವಪ್ನದಲ್ಲಿ ದರ್ಶನವನ್ನು ನೀಡಿದರೆ, ನೀವು ಖಂಡಿತವಾಗಿಯೂ ಹೆದರಬೇಕಾಗಿಲ್ಲ. ಯಾಕೆಂದರೆ ಸ್ವಪ್ನ ವಿಜ್ಞಾನದ ಪ್ರಕಾರ, ಅದು ಶುಭ ಸಂಕೇತವೆಂದು ಪರಿಗಣಿಸಲಾಗುತ್ತೆ.

ಶನಿದೇವನು ಕಾಗೆಯ(Crow) ಮೇಲೆ ಸವಾರಿ ಮಾಡೋದನ್ನು ನೋಡಿದರೆ 
ಶನಿದೇವನು ಕನಸಿನಲ್ಲಿ ಕಾಗೆಯ ಮೇಲೆ ಸವಾರಿ ಮಾಡೋದನ್ನು ಒಬ್ಬ ವ್ಯಕ್ತಿ ನೋಡಿದರೆ, ಅಂತಹ ಕನಸನ್ನು ಹೊಂದುವುದು ಒಳ್ಳೆಯದು ಎಂದು ಪರಿಗಣಿಸಲಾಗೋದಿಲ್ಲ. ಕಾಗೆಯು ಶನಿದೇವನ ವಾಹನ. ಅಂತಹ ಕನಸು ಬಂದಾಗ, ವ್ಯಕ್ತಿಯು ಅಶುಭ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ.  ಒಬ್ಬ ವ್ಯಕ್ತಿಯು ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗುತ್ತೆ. ಅಂತಹ ಕನಸನ್ನು ಹೊಂದುವುದು ನಿಮ್ಮ ಖ್ಯಾತಿಯನ್ನು ಸಹ ಹಾನಿಗೊಳಿಸುತ್ತೆ.

ಆನೆಯ(Elephant) ಮೇಲೆ ಶನಿದೇವ ಕಾಣಿಸಿಕೊಂಡರೆ  
ವ್ಯಕ್ತಿಯು ಕನಸಿನಲ್ಲಿ ಆನೆಯ ಮೇಲೆ ಶನಿದೇವನನ್ನು ಕಂಡರೆ, ಅದನ್ನು ಬಹಳ ಶುಭ ಶಕುನವೆಂದು ಪರಿಗಣಿಸಲಾಗುತ್ತೆ. ಅಂತಹ ಕನಸು ವ್ಯಕ್ತಿಗೆ ಶುಭ ಫಲಿತಾಂಶಗಳನ್ನು ನೀಡುತ್ತೆ. ಈ ರೀತಿಯ ಕನಸು ಸಂತೋಷವನ್ನು ತರುತ್ತೆ. ಒಬ್ಬ ವ್ಯಕ್ತಿಯು ಶನಿಯ ಸಾಡೇ ಸಾತ್ ಹೊಂದಿದ್ದರೆ, ಅಂತಹ ಕನಸು ಅವನಿಗೆ ಶಾಂತಿಯನ್ನು ತರುತ್ತೆ, ಜೊತೆಗೆ ವ್ಯಕ್ತಿಯು ಹಣದ ಪ್ರಯೋಜನಗಳು ಮತ್ತು ಗೌರವ ಪಡೆಯೋದನ್ನು ಸಹ ಸೂಚಿಸುತ್ತೆ.
 

ಶನಿದೇವ ನವಿಲಿನ(Peacock) ಮೇಲೆ ಕುಳಿತಿರೋದನ್ನು ಕಂಡರೆ 
ಶನಿದೇವನು ಕನಸಿನಲ್ಲಿ ನವಿಲಿನ ಮೇಲೆ ಕುಳಿತಿರೋದು ಕಂಡುಬಂದರೆ, ಅಂತಹ ಕನಸುಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಅಲ್ಲದೆ, ಅಂತಹ ಕನಸುಗಳು ತುಂಬಾ ಆನಂದದಾಯಕವೆಂದು ತೋರುತ್ತೆ. ಶನಿದೇವನು ನವಿಲಿನ ಮೇಲೆ ಕುಳಿತಿರೋದನ್ನು ನೋಡುವ ಯಾವುದೇ ವ್ಯಕ್ತಿಯು, ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ. ಅಂತಹ ಕನಸುಗಳು ಪ್ರಯೋಜನಕಾರಿ.
 

ಶನಿದೇವ ರಣಹದ್ದುಗಳ(Vulture) ಮೇಲೆ ಕುಳಿತಿರೋದನ್ನು ನೋಡಿದರೆ 
ಶನಿದೇವ ರಣಹದ್ದುಗಳ ಮೇಲೆ ಕುಳಿತಿರೋದನ್ನು ನೋಡಿದರೆ ಅಂತಹ ಕನಸನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ಈ ಕನಸು ಬಂದಾಗ, ವ್ಯಕ್ತಿಯು ಅಶುಭ ಫಲಿತಾಂಶಗಳನ್ನು ಪಡೆಯುತ್ತಾನೆ. ಅಂದರೆ ನೀವು ಕೆಲವು ಅಶುಭ ಸುದ್ದಿಗಳನ್ನು ಪಡೆಯುತ್ತೀರಿ ಎಂದರ್ಥ. ಆದ್ದರಿಂದ, ಅಂತಹ ಕನಸು ಬಂದಾಗಲೆಲ್ಲಾ, ತಕ್ಷಣವೇ ಶನಿಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸ್ವಪ್ನದಲ್ಲಿ ಶನಿದೇವನನ್ನು ಪೂಜಿಸೋದು
ಒಬ್ಬ ವ್ಯಕ್ತಿಯು ಕನಸಿನಲ್ಲಿ(Dreams) ಶನಿದೇವನನ್ನು ಪೂಜಿಸೋದನ್ನು ನೋಡಿದರೆ, ಅಂತಹ ಕನಸು ಮಿಶ್ರ ಫಲಿತಾಂಶಗಳನ್ನು ನೀಡುತ್ತೆ. ಆದ್ದರಿಂದ, ಅಂತಹ ಕನಸು ಬಂದರೆ, ವ್ಯಕ್ತಿಯು ಶನಿಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದೇ ಸಮಯದಲ್ಲಿ, ನೀವು ಈಗಾಗಲೇ ಶನಿದೇವನನ್ನು ಪೂಜಿಸಿದರೆ ಮತ್ತು ನಂತರ ನೀವು ಈ ಕನಸನ್ನು ಕಂಡರೆ, ಶನಿದೇವನು ನಿಮ್ಮ ಆರಾಧನೆಯಿಂದ ಸಂತೋಷವಾಗಿದ್ದಾನೆ ಎಂದು ಅರ್ಥಮಾಡಿಕೊಳ್ಳಿ.
 

click me!