ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ 5 ಕೆಲಸ ಮಾಡ್ಬೇಡಿ..

First Published Oct 25, 2022, 12:35 PM IST

ಹಿಂದೂ ಧರ್ಮದಲ್ಲಿ ವಾರದ ಒಂದೊಂದು ದಿನವೂ ಕೆಲ ಕೆಲಸ ಮಾಡಲು ಶ್ರೇಷ್ಠವಾಗಿದ್ದರೆ, ಮತ್ತೆ ಕೆಲ ಕೆಲಸ ಮಾಡಲು ಅಮಂಗಳದ ದಿನವೆನಿಸಿದೆ. ಅಂತೆಯೇ ಮಂಗಳವಾರದ ದಿನ ನೀವು ಮಾಡಬಾರದ ಕೆಲಸಗಳು ಇಲ್ಲಿವೆ..

ಧರ್ಮಗ್ರಂಥಗಳ ಪ್ರಕಾರ, ವಾರದ ಪ್ರತಿ ದಿನವೂ ವಿಭಿನ್ನ ದೇವತೆಗಳಿಗೆ ಸಮರ್ಪಿತವಾಗಿದೆ. ಸೋಮವಾರ ಶಿವನ ದಿನ, ಮಂಗಳವಾರ ಹನುಮಂತನ ದಿನ, ಬುಧವಾರ ಗಣಪತಿಯ ದಿನ, ಗುರುವಾರ ವಿಷ್ಣುವಿನ ದಿನ, ಶುಕ್ರವಾರ ಲಕ್ಷ್ಮಿಯ ದಿನ, ಶನಿವಾರ ಶನಿ ದೇವರ ದಿನ. ಅಂತೆಯೇ ವಾರದ ಪ್ರತಿ ದಿನವೂ ಒಂದೊಂದು ಗ್ರಹಗಳಿಗೆ ಸಂಬಂಧಿಸಿದೆ. ಧರ್ಮಗ್ರಂಥದ ಪ್ರಕಾರ ಮಂಗಳವಾರ(Tuesday) ಮಂಗಳ ಗ್ರಹಕ್ಕೆ ಮೀಸಲಾದ ದಿನ. ಆದ್ದರಿಂದ ಯೋಗಕ್ಷೇಮ ದುರ್ಬಲವಾಗಿರುವವರು ಮಂಗಳವಾರದ ವಿಶೇಷ ಸಲಹೆಯನ್ನು ಅನುಸರಿಸಬೇಕು. ಇದಲ್ಲದೆ, ಮಂಗಳವಾರ ಈ ಐದು ವಿಷಯಗಳನ್ನು ಮರೆಯಬೇಡಿ- ಮರೆತರೆ ಇದು ಆರ್ಥಿಕ ನಷ್ಟ ಮತ್ತು ಆರೋಗ್ಯ ಹಾನಿಗೆ ಕಾರಣವಾಗಬಹುದು.

ಕೂದಲು ಕತ್ತರಿಸಬಾರದು
ಮಂಗಳವಾರ ಕೂದಲು ಅಥವಾ ಉಗುರುಗಳನ್ನು ಕತ್ತರಿಸದಿರುವುದು(Haircut or nailcut) ಉತ್ತಮ. ಮಂಗಳನ ಬಣ್ಣ ಕೆಂಪು. ಇದು ರಕ್ತಕ್ಕೆ ಸಂಬಂಧಿಸಿದೆ. ಮತ್ತೊಂದೆಡೆ, ಇಂದು ಇತರ ದಿನಗಳಿಗಿಂತ ಹೆಚ್ಚು ಕೋಪದ ದಿನವಾಗಿದೆ. ಅದಕ್ಕಾಗಿಯೇ ಮಂಗಳವಾರ ಕೂದಲು ಅಥವಾ ಉಗುರುಗಳನ್ನು ಕತ್ತರಿಸದರೆ ಗಾಯವಾಗುವ ಸಂಭವ ಹೆಚ್ಚು ಎಂಬ ನಂಬಿಕೆ ಇದೆ. ಇದಕ್ಕಾಗಿ ಇಂದು ಕೂದಲು ಮತ್ತು ಉಗುರನ್ನು ಕತ್ತರಿಸದಂತೆ ಸಲಹೆ ನೀಡಲಾಗುತ್ತದೆ.

ಮತ್ತೊಂದೆಡೆ, ಕೂದಲು ಮತ್ತು ಉಗುರುಗಳನ್ನು ಶನಿಯು ಆಳುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಕತ್ತರಿ ಮತ್ತು ನೇಲ್ ಕಟ್ಟರ್‌ನಂತ ಚೂಪಾದ ಆಯುಧಗಳನ್ನು ಮಂಗಳ ಆಳುತ್ತಾನೆ.  ಮಂಗಳನಿಗೂ ಶನಿಗೂ ವೈರತ್ವ ಇದೆ. ಆದ್ದರಿಂದ ಇಬ್ಬರ ನಡುವಿನ ಸಂಪರ್ಕವು ಸಂಘರ್ಷಕ್ಕೆ ಕಾರಣವಾಗಬಹುದು. ಇದು ರಕ್ತಸ್ರಾವಕ್ಕೆ ಕಾರಣವಾಗಬಹುದು. ಹಾಗಾಗಿ, ಇಂದು ಕೂದಲು ಮತ್ತು ಉಗುರನ್ನು ಕತ್ತರಿಸದಂತೆ ಸಲಹೆ ನೀಡಲಾಗುತ್ತದೆ. 

ಕಬ್ಬಿಣ ಖರೀದಿ ಬೇಡ
ಮಂಗಳನು ಯುದ್ಧಕಾರಕ. ಯುದ್ಧದ ಅಧಿಪತಿ. ಆತ ಜಗಳ ತಂದಿಡುವವನು. ಮಂಗಳವಾರದಂದು ಕಬ್ಬಿಣ(iron) ಖರೀದಿಸಬಾರದು. ಚಾಕು, ಕಟರ್, ನೇಲ್ ಕಟರ್, ಕಬ್ಬಿಣದ ಆಯುಧ ಅಥವಾ ಕಬ್ಬಿಣದಿಂದ ಮಾಡಿದ ಯಾವುದನ್ನೂ ಖರೀದಿಸದಿರುವುದು ಉತ್ತಮ.

ಯಜ್ಞ ಬೇಡ
ಮಂಗಳವಾರದಂದು ಯಜ್ಞ ಕಾರ್ಯವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿಯೇ ನೀವು ಮಂಗಳವಾರ ಯಜ್ಞ ಆಚರಿಸಬಾರದು.

ಕಪ್ಪು ಬಟ್ಟೆ ಧರಿಸಬೇಡಿ
ಮಂಗಳವಾರದಂದು ಕೆಲಸಕ್ಕೆ ಹೋಗುವಾಗ ಕೆಂಪು ಬಟ್ಟೆ ಧರಿಸಿ. ಮಂಗಳವು ಕೆಂಪು ಬಣ್ಣದ್ದಾಗಿದೆ. ಅದಕ್ಕಾಗಿಯೇ ಕೆಂಪು ಬಣ್ಣವು ಮಂಗಳದೊಂದಿಗೆ ಸಂಬಂಧವನ್ನು ಹೊಂದಿದೆ. ಹಾಗಾಗಿ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ ಎಂದು ಭಾವಿಸಲಾಗಿದೆ. ಅಂತೆಯೇ, ಮಂಗಳವಾರದಂದು ಕಪ್ಪು ಧರಿಸಬೇಡಿ. ಕಪ್ಪು ಶನಿಯ ಬಣ್ಣ. ಮೊದಲೇ ಹೇಳಿದಂತೆ ಶನಿಗೂ ಮಂಗಳನಿಗೂ ಶತ್ರುತ್ವ ಇದೆ. ಹಾಗಾಗಿ, ಮಂಗಳವಾರ ಕಪ್ಪು ಬಟ್ಟೆ ಧರಿಸಿದರೆ ಅಶುಭ ಎನ್ನಲಾಗುತ್ತದೆ. 

ಮೇಕಪ್ ವಸ್ತುಗಳ ಖರೀದಿ ಬೇಡ
ಮಂಗಳವಾರದಂದು ಮೇಕಪ್ ಉಪಕರಣಗಳನ್ನು ಖರೀದಿಸಬೇಡಿ. ಮೇಕಪ್ ವಸ್ತುಗಳನ್ನು ಖರೀದಿಸಲು ದಿನವು ಶುಭವಲ್ಲ. ಇದರಿಂದ ದಾಂಪತ್ಯದಲ್ಲಿ ಅಶಾಂತಿ ಉಂಟಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.

click me!