Diwali Celebration: ಭಾರತದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ದೀಪಾವಳಿಯ ಆಚರಣೆ ಹೀಗಿದೆ

Published : Oct 23, 2022, 11:24 AM IST

ದಕ್ಷಿಣ ಭಾರತದಲ್ಲಿ ದೀಪಾವಳಿ ಆಚರಣೆಗಳು ಉತ್ತರ ಭಾರತಕ್ಕಿಂತ ಸಾಕಷ್ಟು ಭಿನ್ನವಾಗಿವೆ ಎಂದು ನಿಮಗೆ ತಿಳಿದಿದೆಯೇ? ಭಾರತ ವೈವಿಧ್ಯಮಯ ದೇಶವಾಗಿದೆ, ಇಲ್ಲಿನ ಪ್ರತಿಯೊಂದು ಭಾಗಗಳಲ್ಲೂ ವಿಭಿನ್ನ ಆಚರಣೆ ಇದೆ. ನಮ್ಮ ದೇಶದಲ್ಲಿ ಆಚರಿಸುವ ಹಬ್ಬಗಳ ಒಂದೇ ರೀತಿಯಾಗಿದ್ದರೂ, ಆದನ್ನು ಆಚರಿಸುವ ವಿಧಾನ ಬೇರೆ ಬೇರೆಯಾಗಿರುತ್ತೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಹೇಗೆ ವಿಭಿನ್ನವಾಗಿ ಆಚರಿಸಲಾಗುತ್ತದೆ ಎಂದು ಇಲ್ಲಿ ನಾವು ನಿಮಗೆ ಹೇಳಲು ಪ್ರಯತ್ನಿಸುತ್ತೇವೆ.

PREV
19
Diwali Celebration: ಭಾರತದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ದೀಪಾವಳಿಯ ಆಚರಣೆ ಹೀಗಿದೆ

ದೀಪಾವಳಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ ಮತ್ತು ಪ್ರತಿಯೊಂದು ಭಾಗದಲ್ಲೂ ಜನರು ಅದನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ. ಅಂದಹಾಗೆ, ದೀಪಾವಳಿಯನ್ನು ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಹೆಚ್ಚು ಆಚರಿಸಲಾಗುತ್ತದೆ ಮತ್ತು ಭಾರತದ ಇತರ ಭಾಗಗಳಲ್ಲಿ ಜನರು ಅದನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ (south India) ದೀಪಾವಳಿ ಆಚರಣೆಗಳು ಉತ್ತರ ಭಾರತಕ್ಕಿಂತ ಸಾಕಷ್ಟು ಭಿನ್ನವಾಗಿವೆ ಎಂದು ನಿಮಗೆ ತಿಳಿದಿದೆಯೇ? ಭಾರತದ ಎರಡೂ ಭಾಗಗಳಲ್ಲಿ ದೀಪಾವಳಿಯನ್ನು ಒಂದೇ ದಿನ ಆಚರಿಸಲಾಗುತ್ತದೆಯಾದರೂ, ಆದರೆ ದಿನಾಂಕದಲ್ಲಿನ ಬದಲಾವಣೆ ಮತ್ತು ಕೆಲವು ಸಂದರ್ಭಗಳಿಂದಾಗಿ, ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಒಂದು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಹೇಗೆ ವಿಭಿನ್ನವಾಗಿ ಆಚರಿಸಲಾಗುತ್ತದೆ ನೋಡೋಣ.

29

ಉತ್ತರ ಭಾರತದಲ್ಲಿ ದೀಪಾವಳಿ ಆಚರಿಸುವುದು ಹೇಗೆ?
ಉತ್ತರ ಭಾರತದಲ್ಲಿ ಶ್ರೀರಾಮನ ಬರುವಿಕೆಯನ್ನು ದೀಪಾವಳಿಯನ್ನಾಗಿ ಆಚರಣೆ ಮಾಡಲಾಗುತ್ತೆ. 14 ವರ್ಷಗಳ ವನವಾಸದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದಾಗ, ಆ ಪ್ರದೇಶದ ನಿವಾಸಿಗಳು ಇಡೀ ಪ್ರದೇಶವನ್ನು ದೀಪಗಳಿಂದ ಅಲಂಕರಿಸಿದರು.

39

ದೀಪಾವಳಿಯ ದಿನದಂದು, ಜನರು ಗಣೇಶ ಮತ್ತು ಮಾತೆ ಲಕ್ಷ್ಮಿಯನ್ನು ಪೂಜಿಸುವ ಮೂಲಕ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ, ಇದರಿಂದ ತಾಯಿ ಲಕ್ಷ್ಮೀ ಮತ್ತು ಗಣೇಶನ ಅನುಗ್ರಹ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ನಂಬಲಾಗಿದೆ. ಲಕ್ಷ್ಮಿಯ ಅನುಗ್ರಹಕ್ಕಾಗಿಯೇ ಈ ಸಮಯದಲ್ಲಿ ಮನೆಯನ್ನು ಸ್ವಚ್ಚಗೊಳಿಸಿ, ಅಲಂಕರಿಸಲಾಗುತ್ತೆ (home decore).

49

ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ, ಜನರು ಮನೆಗಳನ್ನು ದೀಪಗಳು, ಲೈಟ್ ಗಳು ಮತ್ತು ಇತರ ವಸ್ತುಗಳಿಂದ ಅಲಂಕರಿಸುತ್ತಾರೆ. ಇದಲ್ಲದೆ, ರಂಗೋಲಿಯನ್ನು ಸಹ ಹಾಕಲಾಗುತ್ತದೆ. ರಂಗೋಲಿ ಹಾಕುವುದರಿಂದ ತಾಯಿ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಎಂದು ನಂಬಲಾಗಿದೆ. 

59

ಉತ್ತರ ಭಾರತದಲ್ಲಿ ದೀಪಾವಳಿಗೆ ಎರಡು ದಿನಗಳ ಮೊದಲು ಧಂತೇರಸ್ ಅನ್ನು ಆಚರಿಸಲಾಗುತ್ತದೆ. ಈ ದಿನದಂದು ಚಿನ್ನದ ಆಭರಣಗಳನ್ನು (gold jewellery) ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಈ ದಿನದಂದು ಕುಬೇರ ದೇವರನ್ನು ಪೂಜಿಸುವ ಆಚರಣೆ ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದೆ. ಇದರೊಂದಿಗೆ, ಹಿಂದೂ ಆರ್ಥಿಕ ವರ್ಷವೂ ದೀಪಾವಳಿಯಿಂದ ಪ್ರಾರಂಭವಾಗುತ್ತದೆ.

69

ಉತ್ತರ ಭಾರತದ (North India) ಅನೇಕ ಭಾಗಗಳಲ್ಲಿ, ದೀಪಾವಳಿಯನ್ನು ಉತ್ಸವಗಳು ಅಥವಾ ವಿಶೇಷ ಪ್ರದರ್ಶನಗಳ ಮೂಲಕವೂ ಆಚರಿಸಲಾಗುತ್ತದೆ. ಇನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎರಡೂ ಕಡೆಗಳಲ್ಲೂ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಜೊತೆಗೆ ಹೊಸ ಉಡುಪುಗಳನ್ನು ಧರಿಸುವ ಮೂಲಕ ಸಂಭ್ರಮಿಸುತ್ತಾರೆ.

79

ದಕ್ಷಿಣ ಭಾರತದಲ್ಲಿ ದೀಪಾವಳಿ ಆಚರಿಸುವುದು ಹೇಗೆ?
ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ, ಭಗವಾನ್ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಕೊಂದಾಗ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ನರಕ ಚತುರ್ದಶಿಯಂದು ಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಿ (ಅಭ್ಯಂಜನ ಸ್ನಾನ) ಹೊಸ ಬಟ್ಟೆ ತೊಟ್ಟು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ.

89
Image: Getty Images

ಈ ದಿನವು ದೀಪಾವಳಿಗೆ ಒಂದು ದಿನ ಮುಂಚಿತವಾಗಿ ಅಮಾವಾಸ್ಯೆಯಂದು ಬರುತ್ತದೆ. ದಕ್ಷಿಣ ಭಾರತದಲ್ಲಿ, ಇದನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಅಂದಹಾಗೆ, ದೀಪಾವಳಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಸ್ವಲ್ಪ ಕಡಿಮೆಯೇ ಆಚರಣೆ ಮಾಡಲಾಗುತ್ತೆ ಎಂದು ಹೇಳಬಹುದು. ಆದರೆ ಸಂಭ್ರಮಕ್ಕೇನೂ ಕಡಿಮೆ ಇರೋದಿಲ್ಲ.

99

ದೀಪಾವಳಿಯ ಸಂದರ್ಭದಲ್ಲಿ, ಇಲ್ಲಿನ ಜನರು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಲು ಹೋಗುತ್ತಾರೆ. ಇದಲ್ಲದೆ, ಸಂದೇಶಗಳನ್ನು ಕಳುಹಿಸುವ ಮತ್ತು ತಮ್ಮ ಪ್ರೀತಿಪಾತ್ರರಿಗೆ ಶುಭ ಕೋರುವ ಅಭ್ಯಾಸವನ್ನು ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತೆ.
 

Read more Photos on
click me!

Recommended Stories