ನಾಯಿ ಎಂದ್ರೆ ನಂಬಿಕೆ ಮಾತ್ರ ಅಲ್ಲ, ಅದು ಆಪತ್ಭಾಂದವ; ಮುದ್ದಿನ ಶ್ವಾನದಿಂದ ಈ ಸಮಸ್ಯೆಗಳೇ ಇರಲ್ಲ..!

First Published | Sep 1, 2023, 9:56 AM IST

ಮನೆಯನ್ನು ಪ್ರೀತಿ ಮತ್ತು ಸಂತೋಷದಿಂದ ತುಂಬುವ ಅತ್ಯಂತ ಕಾಳಜಿಯುಳ್ಳ ಪ್ರೀತಿಯ ಪ್ರಾಣಿ ನಾಯಿ. ಮನೆಯಲ್ಲಿ ನಾಯಿ ಸಾಕುವುದು ವಾಸ್ತು ಶಾಸ್ತ್ರದ ಪ್ರಕಾರ ತುಂಬಾ ಒಳ್ಳೆಯದು. ಇದರಿಂದ ಏನು ಆಗುತ್ತೆ ಅನ್ನೋದನ್ನು ನೋಡಿ.

ಪ್ರತಿಯೊಂದು ಮನೆಗೂ ಕೂಡ ವಾಸ್ತು ತುಂಬಾನೇ ಮುಖ್ಯ.  ವಾಸ್ತು ನಾವು ಸಾಕುವ ಪ್ರಾಣಿಗಳಿಗೂ ಸಹ ಸಂಬಂಧಿಸಿದೆ. ಮನೆಯಲ್ಲಿ ನಾಯಿ ಸಾಕುವುದು ಮಂಗಳಕರ. ಇದರಿಂದ ಅನೇಕ ಸಮಸ್ಯೆಗೆ ಪರಿಹಾರ ಸಿಗಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ನಾಯಿಗೆ ಪ್ರತಿನಿತ್ಯ ಆಹಾರ ನೀಡುವುದರಿಂದ ಶನಿದೇವನ ಆಶೀರ್ವಾದ ಸಿಗಲಿದೆ. ಇದರಿಂದ ಶನಿದೋಷ ನಿವಾರಣೆ ಆಗುತ್ತದೆ.
 

Tap to resize

ಮದುವೆ ಆದರೂ ಮಕ್ಕಳು ಬೇಗ ಆಗದಿದ್ದರೆ, ಅಂತಹ ದಂಪತಿ ತಮ್ಮ ಮನೆಯಲ್ಲಿ ನಾಯಿ ಸಾಕಬೇಕು. ಇದರಿಂದ ಶೀಘ್ರದಲ್ಲೇ ಅವರಿಗೆ ಮಗುವಾಗುತ್ತದೆ ಎಂದು ನಂಬಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನಾಯಿಯನ್ನು ನೋಡುವುದು ಮಂಗಳಕರ. ಅಂತಹ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಲಕ್ಷಿ ಕೃಪೆ ಇರಲಿದೆ.
 

ವಾಸ್ತು ಪ್ರಕಾರ, ನೀವು ಕಪ್ಪು ನಾಯಿಯನ್ನು ಹಾಕಿದರೆ ಅದು ರಾಹು, ಕೇತು ಮತ್ತು ಶನಿ ಗ್ರಹಗಳ ನಕಾರಾತ್ಮಕ ಪ್ರಭಾವಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Latest Videos

click me!