ಶನಿವಾರ ಈ ಕೆಲಸ ಮಾಡಿದ್ರೆ ಶನಿದೇವನ ಕೋಪಕ್ಕೆ ಗುರಿಯಾಗ್ತೀರಿ

Published : Aug 29, 2023, 05:28 PM IST

ಶನಿವಾರವನ್ನು ಶನಿ ದೇವರಿಗೆ ವಿಶೇಷವಾಗಿ ಅರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಪೂರ್ಣ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ.  ಆದರೆ ಶನಿವಾರ ಕೆಲವೊಂದು ಕೆಲಸಗಳನ್ನು ಮಾಡಲೇಬಾರದು ಎನ್ನಲಾಗುತ್ತೆ.  ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯಲು ಶನಿವಾರ ಯಾವ ಕೆಲಸ ಮಾಡಬಾರದು ಅನ್ನೋದನ್ನು ತಿಳಿಯೋಣ,  

PREV
17
ಶನಿವಾರ ಈ ಕೆಲಸ ಮಾಡಿದ್ರೆ ಶನಿದೇವನ ಕೋಪಕ್ಕೆ ಗುರಿಯಾಗ್ತೀರಿ

ಉಪ್ಪು  (Salt)
ಶನಿವಾರ ಉಪ್ಪು ಖರೀದಿಸುವುದು ಅಶುಭ. ಈ ದಿನ ಅಪ್ಪಿ ತಪ್ಪಿಯೂ ಉಪ್ಪು ಖರೀದಿಸಬೇಡಿ. ಇದನ್ನು ಮಾಡುವುದರಿಂದ, ನೀವು ಸಾಲಗಾರರಾಗೋ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಆ ದಿನ ಇನ್ನೊಬ್ಬರ ಮನೆಯಿಂದ ಉಪ್ಪು ತೆಗೆದುಕೊಳ್ಳೋದು ಸಹ ಒಳ್ಳೆಯದಲ್ಲ.

27

ಕಬ್ಬಿಣ (Iron)
ಶನಿವಾರ ತಪ್ಪಿಯೂ ಕಬ್ಬಿಣವನ್ನು ಖರೀದಿಸಬೇಡಿ. ಅದು ಕಬ್ಬಿಣದ ಪಾತ್ರೆ ಆಗಿರಲಿ, ರಾಡ್ ಆಗಿರಲು, ಕಬ್ಬಿಣದಿಂದ ಮಾಡಿದ ಯಾವುದೇ ವಸ್ತು ಆಗಿರಲಿ, ಈ ದಿನ ಕಬ್ಬಿಣವನ್ನು ಖರೀದಿಸುವುದು ಅಶುಭ. ಹೀಗೆ ಮಾಡುವುದರಿಂದ, ಶನಿ ದೇವರು ಕೋಪಗೊಳ್ಳುತ್ತಾನೆ. 

37

ಶೂ (Shoe)
ಶನಿವಾರ ಶೂಗಳನ್ನು ಖರೀದಿಸುವುದು ಸರಿಯಲ್ಲ. ನೀವು ಒಂದು ವೇಳೆ ಶನಿವಾರ ಶೂ, ಚಪ್ಪಲ್ ಏನಾದರು ಖರೀದಿಸಿದರೆ, ಈ ಕಾರಣದಿಂದಾಗಿ, ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ನೀವು ಮಾಡಲು ಅಂದುಕೊಂಡಿರುವ ಕೆಲಸ ಅರ್ಧದಲ್ಲಿ ಸ್ಥಗಿತವಾಗಬಹುದು.

47

ಬಟ್ಟೆಗಳು  (Dress)
ಶನಿವಾರ ಬಟ್ಟೆ ಖರೀದಿಸುವುದು ಒಳ್ಳೆಯದಲ್ಲ. ಈ ದಿನ ನೀವು ಬಟ್ಟೆಗಳನ್ನು ಖರೀದಿಸಿದರೆ ಅಥವಾ ಶಾಪಿಂಗ್ ಮಾಡಿದರೆ, ಇದರಿಂದ ನಿಮ್ಮ ಜೀವನದಲ್ಲಿ ಉತ್ತಮ ಫಲ ಸಿಗೋದಿಲ್ವಂತೆ. ಹಾಗಾಗಿ ಇನ್ನು ಮುಂದೆ ಶನಿವಾರ ಬಟ್ಟೆ ಖರೀದಿ ಮಾಡಬೇಡಿ.

57

ಈ ವಸ್ತುಗಳನ್ನು ದಾನ ಮಾಡಬೇಡಿ 
ಶನಿ ದೇವರ ಅನುಗ್ರಹವನ್ನು ನಿಮ್ಮ ಮೇಲೆ ಇರಿಸಿಕೊಳ್ಳಲು ಬಯಸೋದಾದ್ರೆ ನೀವು ಶನಿವಾರ ಉಪ್ಪು, ಪೊರಕೆ, ಕಪ್ಪು ಬಟ್ಟೆ ಅಥವಾ ಕಂಬಳಿಗಳನ್ನು ದಾನ ಮಾಡಬಹುದು. ಆದರೆ, ಇತರ ಬಣ್ಣಗಳ ಬಟ್ಟೆಗಳನ್ನು ದಾನ ಮಾಡಬೇಡಿ.
 

67

ಈ ವಿಷಯಗಳಿಂದ ದೂರವಿರಿ 
ಶನಿ ದೇವರ ಅನುಗ್ರಹವನ್ನು ಪಡೆಯಲು, ನೀವು ಶನಿವಾರ ಯಾರೊಂದಿಗೂ ವಿವಾದಕ್ಕೆ ಇಳಿಯುವುದನ್ನು ತಪ್ಪಿಸಬೇಕು. ಇದರೊಂದಿಗೆ, ನೀವು ಈ ದಿನ ಎಳ್ಳು, ಕಬ್ಬಿಣ ಮತ್ತು ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು.  ಇದರಿಂದ ಎಲ್ಲವೂ ಶುಭವಾಗುತ್ತೆ.
 

77

ಏನು ತಿನ್ನಬಾರದು ?
ಶನಿವಾರದಂದು ಆಹಾರವನ್ನು ಬುದ್ಧಿವಂತಿಕೆಯಿಂದ ತಿನ್ನಬೇಕು. ಈ ದಿನ ಕೆಂಪು ಬಣ್ಣದ ವಸ್ತುಗಳಿಂದ ದೂರವಿರಿ. ಇದಲ್ಲದೆ, ಬೇಳೆಕಾಳುಗಳ ಸೇವನೆಯನ್ನು ಸಹ ತಪ್ಪಿಸಬೇಕು. ಇದರಿಂದ ನೀವು ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತೆ. 

click me!

Recommended Stories