ಮದ್ವೆ ವರಮಾಲೆಯನ್ನು ಏಸೀಬೇಡಿ, ಮತ್ತೇನು ಮಾಡ್ಬೇಕು ಇಲ್ ಕೇಳಿ!

First Published | Jun 20, 2023, 3:19 PM IST

ಮದುವೆಯ ನಂತರ ವಧು ಮತ್ತು ವರರು ತಮ್ಮ ವರಮಾಲೆಯನ್ನು ಎಲ್ಲೆಂದರಲ್ಲಿ ಹಾಕುತ್ತಾರೆ. ಆದರೆ ಹೀಗೆ ಮಾಡೋದು ತಪ್ಪಂತೆ. ಹಾಗಿದ್ರೆ ಜ್ಯೋತಿಷ್ಯದ ಪ್ರಕಾರ ವರಮಾಲೆಯನ್ನು ಏನು ಮಾಡಬೇಕೆಂದು ಇಲ್ಲಿ ವಿವರವಾಗಿ ತಿಳಿಯಿರಿ. 
 

ವರಮಾಲೆ ಅಥವಾ ಮಾಲೆ ಬದಲಾಯಿಸೋದು ಹಿಂದೂ ವಿವಾಹದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇದು ಒಂದು ಆಚರಣೆಯಾಗಿದ್ದು, ಇದರಲ್ಲಿ ವಧು ಮತ್ತು ವರರು ಪರಸ್ಪರರ ಕುತ್ತಿಗೆಗೆ ಹೂವುಗಳಿಂದ ಮಾಡಿದ ಹಾರವನ್ನು ಹಾಕುತ್ತಾರೆ ಮತ್ತು ಒಬ್ಬರನ್ನೊಬ್ಬರು ಜೀವನ ಸಂಗಾತಿಗಳಾಗಿ (life partner) ಆಯ್ಕೆ ಮಾಡುತ್ತಾರೆ.
 

ವರಮಾಲೆಯ (Varmala or Jaimala) ಸಂಪ್ರದಾಯವು ಒಬ್ಬರನ್ನೊಬ್ಬರು ಗಂಡ ಮತ್ತು ಹೆಂಡತಿಯಾಗಿ ಸ್ವೀಕರಿಸುವುದನ್ನು ಮತ್ತು ಹೊಸ ಜೀವನಕ್ಕೆ ಅವರ ಬದ್ಧತೆಯನ್ನು ಸಂಕೇತಿಸುತ್ತದೆ. ವರಮಾಲೆಯ ಆಚರಣೆಯನ್ನು ಸಾಮಾನ್ಯವಾಗಿ ವಿವಾಹ ಸಮಾರಂಭದಲ್ಲಿ, ವಧು ಮತ್ತು ವರರು ಮದುವೆ ಮಂಟಪಕ್ಕೆ ಬಂದು ನಿಂತಾಗ ಮೊದಲಿಗೆ ನಡೆಸುವಂತಹ ಆಚರಣೆ. 
 

Tap to resize

ಹಾರ ಬದಲಾಯಿಸುವ ಈ ಶಾಸ್ತ್ರವು ವಧು ಮತ್ತು ವರ ಇಬ್ಬರಿಗೂ ಸಂತೋಷದ ಕ್ಷಣವಾಗಿದೆ. ಆದರೆ ಮದುವೆ (Indian wedding) ಮುಗಿದ ನಂತರ ಈ ಮಾಲೆಯನ್ನು ಏನು ಮಾಡಬೇಕು ಎಂಬ ದೊಡ್ಡ ಪ್ರಶ್ನೆ ಕಾಡುತ್ತೆ. ಇದರ ಬಗ್ಗೆ ತಜ್ಞ ಜ್ಯೋತಿಷ್ಯರು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ನೀವೂ ಸಹ ತಿಳಿದುಕೊಂಡರೆ ಉತ್ತಮ. 

ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಇರಿಸಿ
ಮದುವೆಯ ನಂತರ, ನೀವು ವರಮಾಲೆಯನ್ನು ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ (safe place) ಇರಿಸಬಹುದು. ಅದನ್ನು ಮನೆಯ ದೇವಾಲಯದ ಬಳಿ ಇರಿಸಿ ಅಥವಾ ಸಂಪೂರ್ಣ ಸ್ವಚ್ಚತೆ ಇರುವ ಸ್ಥಳದಲ್ಲಿ ಇರಿಸಿ. ನಿಮ್ಮ ಮದುವೆಯ ಸಂಕೇತವಾಗಿ ನೀವು ಅದನ್ನು ಸುರಕ್ಷಿತವಾಗಿಡಬಹುದು. ಹೊರಗಿನವರು ನೋಡದ ಸ್ಥಳದಲ್ಲಿ ಅದನ್ನು ನೇತುಹಾಕಬಹುದು ಮತ್ತು ಅದರ ಹೂವುಗಳು ಒಣಗಿದ್ದರೂ ಸಹ, ನೀವು ಅದನ್ನು ನಿಮ್ಮ ಮನೆಯಲ್ಲಿ ಅಥವಾ ಕಬೋರ್ಡ್ ಒಳಗೆ ಇಡಬಹುದು. 

ಮನೆಯ ತೋಟದಲ್ಲಿ ಅದನ್ನು ಹಾಕಿ
ಮನೆಯ ಒಳಗೆ ಅಥವಾ ಹೊರಗೆ ತೋಟದಲ್ಲಿ ಗುಂಡಿಯನ್ನು ತೆಗೆದು ಅದರಲ್ಲಿ ವರಮಾಲೆಯನ್ನು ಹಾಕಬಹುದು. ಇದು ಅದನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಅದರ ದುರುಪಯೋಗವಾಗೋದಿಲ್ಲ. ವರಮಾಲೆಯ ಹೂವುಗಳು ತೋಟದಲ್ಲಿ ಗೊಬ್ಬರವಾಗಿಯೂ ಕೆಲಸ ಮಾಡುತ್ತವೆ. ನೀವು ಅದರ ಹೂವುಗಳನ್ನು ತೋಟದಲ್ಲಿ ಹಾಕಬಹುದು ಮತ್ತು ಕೆಲವು ದಿನಗಳಲ್ಲಿ ಅದು ಸಂಪೂರ್ಣವಾಗಿ ಮಣ್ಣಿನಲ್ಲಿ ಬೆರೆತು ಮಿಶ್ರಗೊಬ್ಬರವಾಗುತ್ತದೆ. 

ಪವಿತ್ರ ನದಿಯಲ್ಲಿ ಬಿಡಬಹುದು 
ನೀವು ವರಮಾಲೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ವಿಲೇವಾರಿ ಮಾಡಬಹುದು. ಕೆಲವು ಹಿಂದೂ ಸಂಪ್ರದಾಯಗಳ ಪ್ರಕಾರ, ವರಮಾಲೆಯನ್ನು ಮದುವೆಯ ನಂತರ ಪವಿತ್ರ ನದಿಯಲ್ಲಿ ತೇಲಿ ಬಿಡಬಹುದು. ಇದು ವಿವಾಹಿತ ದಂಪತಿಗಳ (married couples)ಜೀವನದಲ್ಲಿ ಯಾವಾಗಲೂ ಸಂತೋಷವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ.  

ಕಸದ ಜೊತೆ ಎಸೆಯಬೇಡಿ
ಮರೆತು ಕೂಡ ನೀವು ವರಮಾಲೆಯನ್ನು ಕಸದಲ್ಲಿ ಹಾಕಬಾರದು, ಇದು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ವಾಸ್ತವವಾಗಿ, ಮದುವೆಯ ಸಮಯದಲ್ಲಿ, ವಧು ಮತ್ತು ವರನನ್ನು ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಸಂಕೇತಗಳಾಗಿ ಪರಿಗಣಿಸಲಾಗುತ್ತದೆ, ಆದ್ದರಿಂದ ಅವರಿಗೆ ಅರ್ಪಿಸುವ ಯಾವುದೇ ವಿಷಯವು ಪ್ರಸಾದದ ರೂಪವಾಗುತ್ತದೆ. ಆದ್ದರಿಂದ, ವರಮಾಲೆಯನ್ನು ಸುರಕ್ಷಿತವಾಗಿಡುವುದು ಮುಖ್ಯ ಮತ್ತು ಅದನ್ನು ಪೊರಕೆ ಅಥವಾ ಕಾಲಿನಿಂದ ಮುಟ್ಟಬಾರದು. 

ವರಮಾಲೆ ಪ್ರೀತಿಯ ಸಂಕೇತವಾಗಿದೆ. 
ವರಮಾಲೆಯು ವಿವಾಹಿತ ದಂಪತಿಗಳ ನಡುವಿನ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಪರಸ್ಪರ ಹತ್ತಿರ ತರುವ ವಸ್ತು ಎಂದು ಪರಿಗಣಿಸಲಾಗುತ್ತೆ. ಈ ಕಾರಣಕ್ಕಾಗಿ, ಮದುವೆಯ ಆಚರಣೆಗಳ (wedding tradition)ನಂತರ, ಈ ವರಮಾಲೆಯನ್ನು ಬಿಸಿಲಿನ ಸ್ಥಳದಲ್ಲಿ ನೇತುಹಾಕಿ, ಇದರಿಂದ ಅದರ ಹೂವುಗಳು ಒಣಗಿ ಉದುರಿ ಹೋಗುತ್ತವೆ ಮತ್ತು ಹಾಳಾಗುವ ಭಯವಿರೋದಿಲ್ಲ. ಇದು ಪರಸ್ಪರ ಪ್ರೀತಿಯನ್ನು ಹೆಚ್ಚಿಸುತ್ತೆ ಮತ್ತು ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. 

ಮದುವೆ ದಿನ ಪರಸ್ಪರ ಹಾರ ಬದಲಾಯಿಸುವುದು ವಧು ಮತ್ತು ವರರ ಮುಂಬರುವ ಜೀವನಕ್ಕೆ ಶುಭ ಸಂಕೇತವನ್ನು ನೀಡುವ ಆಚರಣೆಗಳಲ್ಲಿ ಒಂದಾಗಿರುವುದರಿಂದ, ಅದರ ಬಳಕೆಯ ನಂತರ ಅದನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಂದಿನ ಜೀವನಕ್ಕೆ ಶುಭವೆಂದು ಪರಿಗಣಿಸಲಾಗುತ್ತದೆ. 

Latest Videos

click me!