ಗ್ರಂಥಗಳಲ್ಲಿ ಗೃಹಸ್ಥ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಲಾಗಿದೆ. ಇದರಲ್ಲಿ ಪತಿ ಮತ್ತು ಪತ್ನಿ (husband and wife) ಯಾವ ದಿನದಂದು ಜೊತೆಯಾಗಿರಬಾರದು ಅಂದರೆ ಸಂಬಂಧ ಬೆಳೆಸಬಾರದು ಅನ್ನೋದನ್ನು ತಿಳಿಸಿದ್ದಾರೆ. ಅದರ ಬಗ್ಗೆ ನಿಮಗೂ ತಿಳಿದಿರಲಿ.
ಅಮವಾಸ್ಯೆ: ಧರ್ಮ ಗ್ರಂಥದ ಅನುಸಾರ ಅಮವಾಸ್ಯೆಯ ತಿಥಿಯಂದು ಗಂಡ ಮತ್ತು ಹೆಂಡತಿ ಜೊತೆಯಾಗಿರಬಾರದು ಎಂದು ತಿಳಿಸಲಾಗಿದೆ. ಅವರಿಬ್ಬರು ಬೇರೆ ಬೇರೆಯಾಗಿರಬೇಕು. ಈ ತಿಥಿಯ ದೇವರು ಪಿತೃ ದೇವತೆ. ಹಾಗಾಗಿ ಈ ದಿನಕ್ಕೆ ವಿಶೇಷ ಮಹತ್ವ ಇದೆ.
ಹುಣ್ಣಿಮೆ: ಗ್ರಂಥಗಳಲ್ಲಿ ಹುಣ್ಣಿಮೆ (full moon day) ತಿಥಿಯ ಬಗ್ಗೆ ಸಹ ತಿಳಿಸಲಾಗಿದೆ. ಈ ತಿಥಿಯ ದೇವತೆ ಚಂದ್ರ. ಈ ದಿನ ಪೂಜೆ ಮಾಡಲು ಅತ್ಯುತ್ತಮ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ಗಂಡ ಹೆಂಡತಿ ಒಟ್ಟಿಗೆ ಸೇರಬಾರದು.
ಏಕಾದಶಿ: ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಯನ್ನು ತುಂಬಾನೆ ಪವಿತ್ರವೆಂದು ಹೇಳಲಾಗುತ್ತದೆ. ಈ ದಿನ ವೃತ ಮಾಡಬೇಕೆಂದು ಹೇಳಲಾಗುತ್ತದೆ. ಒಂದು ವೇಳೆ ವೃತ ಮಾಡಲು ಸಾಧ್ಯವಾಗದಿದ್ದರೆ, ಬ್ರಹ್ಮಚರ್ಯವನ್ನು ಪಾಲಿಸಬೇಕೆಂದು ತಿಳಿಸಿದೆ.
ಗ್ರಹಣ: ಯಾವಾಗಲಾದರೂ ಚಂದ್ರ ಅಥವಾ ಸೂರ್ಯ ಗ್ರಹಣ (eclpis) ಇದ್ದ ಸಂದರ್ಭದಲ್ಲೂ ಸಹ ಪತಿ ಮತ್ತು ಪತ್ನಿ ಸಂಬಂಧ ಬೆಳೆಸುವುದನ್ನು ಮಹಾಪಾಪ ಎನ್ನಲಾಗುತ್ತದೆ. ಹೀಗೆ ಮಾಡೋದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.
ಸಂಕ್ರಾಂತಿ: ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ಸಂದರ್ಭವನ್ನು ಸಂಕ್ರಾಂತಿ ಎಂದು ಹೇಳಲಾಗುತ್ತದೆ. ವರ್ಷದಲ್ಲಿ 12 ಸಂಕ್ರಾಂತಿ ಬರುತ್ತದೆ. ಈ ದಿನಗಳಂದು ಸ್ನಾನ -ದಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ದಿನ ಬ್ರಹ್ಮಚರ್ಯ ಪಾಲಿಸೋದು ಉತ್ತಮ.
ವೃತ ಮಾಡೋ ಸಂದರ್ಭ: ಪತಿ ಅಥವಾ ಪತ್ನಿ ಯಾವುದೇ ವೃತ ಮಾಡಿದರೆ ಆ ದಿನ ಒಬ್ಬರು ಜೊತೆಯಾಗಿರಬಾರದು. ವೃತದ ಸಂದರ್ಭದಲ್ಲಿ ಬ್ರಹ್ಮಚರ್ಯ ಪಾಲಿಸಬೇಕೆಂದು ಹೇಳಲಾಗುತ್ತದೆ.