ಈ ರಾಶಿಯ ಜನರು ಬೇಕಾಬಿಟ್ಟಿ ಹಣ ಖರ್ಚು ಮಾಡ್ತಾರಂತೆ!

First Published Mar 19, 2023, 1:03 PM IST

ನಮ್ಮೆಲ್ಲರ ಸುತ್ತಲೂ ಎರಡು ರೀತಿಯ ಜನರು ಇರುತ್ತಾರೆ. ಒಬ್ಬರು, ಖರ್ಚು ಮಾಡಲಿಕ್ಕಾಗಿ ಪರ್ಸ್ ಓಪನ್ ಮಾಡುವಂತವರು ಮತ್ತು ಇನ್ನೊಬ್ಬರು ಎಂದಿಗೂ ಖರ್ಚು ಮಾಡದವರು. ಇಲ್ಲಿ ನಾವು ಹಣದ ಕೊರತೆಯಿರುವವರ ಬಗ್ಗೆ ಮಾತನಾಡುತ್ತಿದ್ದೇವೆ...

ನಮ್ಮೆಲ್ಲರ ಜೊತೆ ಎರಡು ರೀತಿಯ ಜನರು ಇರುತ್ತಾರೆ. ಮೊದಲನೆಯದಾಗಿ, ಮಾತು ಮಾತಿಗೆ ಖರ್ಚು ಮಾಡುವವರು. ಇನ್ನೊಬ್ಬರ ಬಿಲ್ ಪಾವತಿಸಲು ಸ್ವಲ್ಪವೂ ಹಿಂಜರಿಯದೇ ಇರುವವರು. ತನ್ನ ಹವ್ಯಾಸಗಳು ಮತ್ತು ಅಗತ್ಯಗಳನ್ನು ಪೂರೈಸಲು ಎಷ್ಟು ಹಣವನ್ನು ಖರ್ಚು ಮಾಡಿದರೂ ಪರವಾಗಿಲ್ಲ ಎಂದು ಯೋಚಿಸುವವರು. ಅಂತಹ ಜನರು ಹಣವನ್ನು ಉಳಿಸುವ ಅಗತ್ಯವಿದೆ ಎಂದು ಭಾವಿಸೋದಿಲ್ಲ. ಈ ಕಾರಣದಿಂದಾಗಿ ಅವರ ಪರ್ಸ್ ಯಾವಾಗಲೂ ಖಾಲಿಯಾಗಿರುತ್ತೆ. 

ನಿಮ್ಮ ಹವ್ಯಾಸ ಮತ್ತು ಅಗತ್ಯದ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸೋದು. ಹಣವನ್ನು ಉಳಿಸೋದು ಮತ್ತು ಹಣವನ್ನು ಖರ್ಚು (Spending Money) ಮಾಡೋದು ಹೇಗೆ ಎಂಬುದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಜನರಿರುತ್ತಾರೆ. ಅವರಲ್ಲಿ ನಿಮ್ಮವರು ಕೂಡ ಒಬ್ಬರಾಗಿರಬಹುದು. 

Latest Videos


ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳನ್ನು (12 zodiac sign) ಉಲ್ಲೇಖಿಸಲಾಗಿದೆ. ರಾಶಿಗಳ ಮೂಲಕ, ಯಾವುದೇ ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಬಹಿರಂಗಪಡಿಸಲಾಗುತ್ತೆ. ತಮ್ಮ ಖರ್ಚುಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಯದ ರಾಶಿಗಳ ಬಗ್ಗೆ ಇಲ್ಲಿ ತಿಳಿಯೋಣ.

ಮೇಷ ರಾಶಿಯ (Aries) ಜನರು ಆರ್ಥಿಕವಾಗಿ ತಮ್ಮ ಹತ್ತಿರದವರಿಗೆ ಸಹಾಯ ಮಾಡಲು ಹಿಂಜರಿಯೋದಿಲ್ಲ. ಅವರಿಗೆ ಎಷ್ಟೇ ಹಣದ ಕೊರತೆಯಿದ್ದರೂ, ಅವರು ತಮ್ಮ ಅಗತ್ಯಗಳನ್ನು ಬದಿಗಿಟ್ಟು ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಈ ಕಾರಣದಿಂದಾಗಿ ಅವರು ಆಗಾಗ್ಗೆ ಹಣದ ಕೊರತೆಯನ್ನು ಅನುಭವಿಸುತ್ತಾರೆ.

ಮಿಥುನ ರಾಶಿಯವರು (Gemini) ತುಂಬಾ ಸಾಮಾಜಿಕವಾಗಿರುತ್ತಾರೆ. ಜನರಲ್ಲಿ ತಮ್ಮ ವಿಶಿಷ್ಟ ಗುರುತನ್ನು ಕಾಪಾಡಿಕೊಳ್ಳಲು, ಅವರು ಯಾವಾಗಲೂ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಆ ಸಾಹಸ ಮುಗಿದ ನಂತರ, ಅವರು ತಮ್ಮ ಪರಿಸ್ಥಿತಿಗೆ ತುಂಬಾ ದುಃಖಿಸುತ್ತಾರೆ.

ತುಲಾ ರಾಶಿಯ (Libra) ಜನರು ತುಂಬಾ ಬೇಜವಾಬ್ದಾರಿಯಿಂದ ಖರೀದಿ ಮಾಡುತ್ತಾರೆ ಮತ್ತು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸೋದಿಲ್ಲ. ಅವರು ತುಂಬಾ ಸೋಮಾರಿ ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಅಜಾಗರೂಕರಾಗಿರುತ್ತಾರೆ.

ವೃಶ್ಚಿಕ ರಾಶಿಯವರು (scorpio) ತಮ್ಮ ಅಹಂನಿಂದಾಗಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಇವರು ತನ್ನ ಸಂಗಾತಿಯ ವೆಚ್ಚಗಳನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಎಂದಿಗೂ ಹೇಳೋದಿಲ್ಲ. ಅವರ ಸಂಗಾತಿಯು ಎಷ್ಟೇ ದುಬಾರಿಯಾಗಿದ್ದರೂ ಪರವಾಗಿಲ್ಲ, ಅವರ ಎಲ್ಲಾ ಅಗತ್ಯಗಳನ್ನು ಇವರು ಹೇಗಾದರೂ ಪೂರೈಸುತ್ತಾರೆ.

ಧನು ರಾಶಿಯವರು (Sagittarius) ಭವಿಷ್ಯದ ಬಗ್ಗೆ ಚಿಂತಿಸೋದನ್ನು ಹೊರತುಪಡಿಸಿ ಪ್ರತಿ ಕ್ಷಣವೂ ಬದುಕೋದನ್ನು ನಂಬುತ್ತಾರೆ. ಉಳಿತಾಯವನ್ನು ಲೆಕ್ಕಿಸದೆ ಹೆಚ್ಚು ಹೆಚ್ಚು ಭೌತಿಕ ವಸ್ತುಗಳನ್ನು ಖರೀದಿಸೋದನ್ನು ಇವರು ನಂಬುತ್ತಾರೆ. ಜಗತ್ತಿನಲ್ಲಿ ವಿವಿಧ ರೀತಿಯ ಅನುಭವಗಳನ್ನು ಸೃಷ್ಟಿಸಲು ಇವರು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ.

ವೃಷಭ, ಕರ್ಕ, ಸಿಂಹ, ಕನ್ಯಾ, ಮಕರ, ಕುಂಭ, ಮೀನ ರಾಶಿಯವರು ಚಿಂತನಶೀಲವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಹಣವನ್ನು ಹೇಗೆ ಖರ್ಚು ಮಾಡಬೇಕು ಮತ್ತು ಅವುಗಳನ್ನು ಹೇಗೆ ಉಳಿಸಬೇಕು ಎಂದು ಅವರಿಗೆ ತಿಳಿದಿದೆ. ಈ ಕಾರಣದಿಂದಾಗಿ ಅವರಿಗೆ ಎಂದಿಗೂ ಹಣದ ಕೊರತೆಯಿರೋದಿಲ್ಲ.

click me!