ಈಗಾಗಲೇ ಸೂರ್ಯ ತಿಲಕ ಸಂಬಂಧಿಸಿದಂತೆ ನಡೆಸಿದ ಪರೀಕ್ಷೆಗಳು ಯಶಸ್ವಿಯಾಗಿದ್ದು, ರಾಮನಮವಿಯ ದಿನ ಮೂಡಲಿರುವ ಸೂರ್ಯತಿಲಕ ಸಾರ್ವಜನಿಕ ದರ್ಶನ ಇರಲಿದೆ.
ಬುಧವಾರ ಬೆಳಗ್ಗೆ ಶ್ರೀರಾಮ ಲಲ್ಲಾನ ಮೂರ್ತಿಗೆ ವಿವಿಧ ಅಭಿಷೇಕಗಳನ್ನು ಅರ್ಚಕರು ಮಾಡಿದ್ದಾರೆ. ರಾಮಲಲ್ಲಾ ಮೂರ್ತಿಯ ಹಾಲಿನ ಅಭಿಷೇಕದ ದೃಶ್ಯ.
ರಾಮ ನವಮಿಯ ಸಂಭ್ರಮಕ್ಕೆ ಶ್ರೀರಾಮ ಮಂದಿರಕ್ಕೆ ಮಾಡಲಾಗಿರುವ ಭವ್ಯ ಅಲಂಕಾರ. ಮಂದಿರ ಹೊರಗಡೆಯಿಂದಲೇ ಕಾಣುವ ರಾಮಲಲ್ಲಾ ಮೂರ್ತಿಯ ದೃಶ್ಯ.
ಶ್ರೀರಾಮ ಮಂದಿರದ ಆವರಣಕ್ಕೆ ಮಾಡಲಾಗಿರುವ ಭವ್ಯ ಬೆಳಕಿನ ಅಲಂಕಾರ. 500 ವರ್ಷಗಳ ಬಳಿಕ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿಯೇ ರಾಮನವಮಿ ನಡೆಯುವ ಸಂಭ್ರಮ ಇದು.
ಅಯೋಧ್ಯೆಯ ರಾಮ ಮಂದಿರ ಗರ್ಭಗೃಹದಲ್ಲಿರುವ ಶ್ರೀರಾಮಲಲ್ಲಾನ ಮೂರ್ತಿಗೆ ಇಂದು ಬೆಳಗ್ಗೆ ನಡೆದ ಹಾಲಿನ ಅಭಿಷೇಕದ ಅಪೂರ್ವ ದೃಶ್ಯ.
ರಾಮ ಮಂದಿರದ ರಾಮಲಲ್ಲಾನ ಮೂರ್ತಿಗೆ ಹಾಲಿನ ಅಭಿಷೇಕಕ್ಕೂ ಮನ್ನ ಚಂದನದ ಅಭಿಷೇಕವನ್ನೂ ಮಾಡಲಾಗಿತ್ತು. ಈ ವೇಳೆ ಕಂಡ ರಾಮಲಲ್ಲಾ ಮೂರ್ತಿಯ ದೃಶ್ಯ.
ಅಭಿಷೇಕದ ಬಳಿಕ ರಾಮಲಲ್ಲಾ ಮೂರ್ತಿಗೆ ಮಾಡಲಾಗಿರುವ ಅಲಂಕಾರದ ಚಿತ್ರಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಂಚಿಕೊಂಡಿದೆ.
ರಾಮನವಮಿಯ ಮಧ್ಯಾಹ್ನ ಶ್ರೀರಾಮನ ಜನ್ಮವಾಯಿತು ಎನ್ನುವ ಐತಿಹ್ಯವಿರುವ ಕಾರಣ, ಶ್ರೀರಾಮ ಮಂದಿರದಲ್ಲಿ ಇಂದು ಮಧ್ಯಾಹ್ನ ರಾಮಲಲ್ಲಾನ ಹಣೆಗೆ ಸೂರ್ಯತಿಲಕ ಇಡಲಾಗುತ್ತದೆ.
ರಾಮಲಲ್ಲಾನಿಗೆ ಇಂದು ಬೆಳಗ್ಗೆ 56 ವಿವಿಧ ಬಗೆಯ ಭೋಗ ಪ್ರಸಾದವನ್ನು ಅರ್ಪಿಸಲಾಗಿದೆ. ಪ್ರತಿ ವರ್ಷದ ಚೈತ್ರಮಾಸದ 9ನೇ ದಿನ ರಾಮನವಮಿ ಬರುತ್ತದೆ.