ವಾರಣಾಸಿಯಲ್ಲಿ ದೇವ್ ದೀಪಾವಳಿ; ಮೋದಿ ಶೇರ್ ಮಾಡಿದ ಅದ್ಭುತ ದೃಶ್ಯಾವಳಿ

First Published Nov 8, 2022, 10:32 AM IST

ದೇವ್ ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಗಂಗಾ ನದಿಯ ತಟದ ಕಾಶಿಯಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ದೇವತೆಗಳು ಪವಿತ್ರ ಭೂಮಿ ಕಾಶಿಗೆ ಇಳಿದು ದೀಪಾವಳಿ ಆಚರಿಸುತ್ತಾರೆ ಎಂಬ ನಂಬಿಕೆ ಇದೆ. ಈ ವರ್ಷ ಈ ಹಬ್ಬದ ಆಚರಣೆಯ ಅದ್ಭುತ ಫೋಟೋಗಳನ್ನು ಪ್ರಧಾನಿ ಮೋದಿ ಶೇರ್ ಮಾಡಿದ್ದಾರೆ.

ದೇವ್ ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಬೆಳಕಿನ ಹಬ್ಬ ಎಂದೂ ಕರೆಯುತ್ತಾರೆ. ಈ ದೇವ್ ದೀಪಾವಳಿ ಹಬ್ಬವನ್ನು ದೀಪಾವಳಿಯಾಗಿ ನಿಖರವಾಗಿ 15 ದಿನಗಳ ನಂತರ ಮುಖ್ಯವಾಗಿ ಗಂಗಾ ನದಿಯ ತಟದ ಕಾಶಿಯಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ದೇವತೆಗಳು ಪವಿತ್ರ ಭೂಮಿ ಕಾಶಿಗೆ ಇಳಿದು ದೀಪಾವಳಿ ಆಚರಿಸುತ್ತಾರೆ ಎಂಬ ನಂಬಿಕೆ ಇದೆ. 

ಈ ದೇವರ ದೀಪಾವಳಿಯಂದು ವಾರಣಾಸಿಯ ಘಾಟ್‌ಗಳನ್ನು ಮಣ್ಣಿನ ದೀಪಗಳ ಬೆಳಗುವಿಕೆಯಿಂದ ಅಲಂಕರಿಸಲಾಗುತ್ತದೆ. ಈ ದಿನದಂದು ಕಾಶಿಯ ಗಂಗಾ ಘಾಟ್‌ನ ನೋಟವು ಮೋಡಿ ಮಾಡುತ್ತದೆ. ದೇವ್ ದೀಪಾವಳಿಯ ದಿನದಂದು ಗಂಗಾ ಸ್ನಾನ ಮಾಡುವುದರಿಂದ ವರ್ಷವಿಡೀ ಶುಭ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ ದೀಪವನ್ನು ಗಂಗೆ ದಡದಲ್ಲಿ ದಾನ ಮಾಡುವುದು ಶ್ರೇಯಸ್ಕರ. 

ದಂತಕಥೆಯ ಪ್ರಕಾರ, ಕಾರ್ತಿಕ ಪೂರ್ಣಿಮೆಯ ದಿನದಂದು ಶಿವನು ರಾಕ್ಷಸ ತ್ರಿಪುರಾಸುರನನ್ನು ಕೊಂದನು. ಈ ಸಂಭ್ರಮ ಆಛರಣೆಗೆ ಎಲ್ಲಾ ದೇವತೆಗಳು ಶಿವನೊಂದಿಗೆ ಭೂಮಿಗೆ ಬಂದು ದೀಪವನ್ನು ಬೆಳಗಿಸುವ ಮೂಲಕ ಸಂತೋಷವನ್ನು ಆಚರಿಸುತ್ತಾರೆ. ಈ ಕಾರಣಕ್ಕಾಗಿಯೇ ಕಾರ್ತಿಕ ಪೂರ್ಣಿಮೆಯಂದು ಕಾಶಿಯಲ್ಲಿ ದೇವ್ ದೀಪಾವಳಿಯನ್ನು ಆಚರಿಸುವ ಸಂಪ್ರದಾಯ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನವೆಂಬರ್ 6, 2022 ರ ಭಾನುವಾರದಂದು ವಾರಣಾಸಿಯಲ್ಲಿ 2022ರ ದೇವ್ ದೀಪಾವಳಿಯ ಸಿದ್ಧತೆಗಳನ್ನು ಪರಿಶೀಲಿಸಿದರು.

ವಾರಣಾಸಿಯಲ್ಲಿ ಕಾರ್ತಿಕ ಪೂರ್ಣಿಮೆಯ ಸಂದರ್ಭದಲ್ಲಿ 'ದೇವ ದೀಪಾವಳಿ' ಸಂದರ್ಭದಲ್ಲಿ 'ಪವಿತ್ರ ಸ್ನಾನ'ಕ್ಕಾಗಿ ಗಂಗಾ ನದಿಯ ದಡದಲ್ಲಿ ಭಕ್ತರು ಸೇರುತ್ತಾರೆ. ಈ ವರ್ಷದ ದೇವ್ ದೀಪಾವಳಿ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಶೇರ್ ಮಾಡಿದ್ದಾರೆ. 

ನವೆಂಬರ್ 7, 2022, ಸೋಮವಾರ, ವಾರಣಾಸಿಯಲ್ಲಿ ದೇವ್ ದೀಪಾವಳಿಯ ಸಂದರ್ಭದಲ್ಲಿ ದೀಪಗಳಿಂದ ಬೆಳಗಿದ ಗಂಗಾ ಘಾಟ್‌ನ ಸೊಬಗಿದು..

ವಾರಣಾಸಿಯಲ್ಲಿ ದೇವ್ ದೀಪಾವಳಿಯ ಸಂದರ್ಭದಲ್ಲಿ ಲಕ್ಷಾಂತರ ಮಣ್ಣಿನ ದೀಪಗಳನ್ನು ಬೆಳಗಿಸಲಾಗಿದ್ದು, ಇದೊಂದು ಭೂಕೈಲಾಸವೇ ಆಗಿದೆ. 

ನವೆಂಬರ್ 7, 2022 ಸೋಮವಾರದಂದು ವಾರಾಣಸಿಯಲ್ಲಿ ದೇವ್ ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಕಣ್ ಕೋರೈಸುತ್ತಿರುವ ಪಟಾಕಿಗಳು..
 

ವಾರಣಾಸಿಯಲ್ಲಿ ದೇವ್ ದೀಪಾವಳಿಯ ಸಂದರ್ಭದಲ್ಲಿ ಗಂಗಾ ಘಾಟ್‌ಗಳು ದೀಪಗಳಿಂದ ಬೆಳಗುತ್ತವೆ. ಬೆಳಕಿನ ವೈಭೋಗವು ದೇವಲೋಕವನ್ನೇ ಭೂಮಿಯ ಮೇಲೆ ಸೃಷ್ಟಿಸುತ್ತವೆ.

ಕೋಲ್ಕತ್ತಾದಲ್ಲಿ 'ದೇವ ದೀಪಾವಳಿ' ಹಬ್ಬದ ಸಂದರ್ಭದಲ್ಲಿ ಭಕ್ತರು ಹೂಗ್ಲಿ ನದಿಯ ದಡದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಿದರು. 

ಮುಂಬೈನಲ್ಲಿ ದೇವ್ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಭಕ್ತರು ಬಂಗಂಗಾ ನೀರಿನ ತೊಟ್ಟಿಯಲ್ಲಿ 'ದೀಪದಾನ' ಆಚರಣೆಯನ್ನು ಮಾಡಿದರು. ದೇವ್ ದೀಪಾವಳಿಯನ್ನು ಹಿಂದೂಗಳು ದೀಪಗಳನ್ನು ಬೆಳಗಿಸುವ ಮೂಲಕ 'ಅಸುರರ' ಮೇಲೆ ಶಿವನ ವಿಜಯವನ್ನು ಸ್ಮರಿಸುತ್ತಾರೆ.

click me!