ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಲಕ್ಷ್ಮೀ ದೇವಿ ಪ್ರಸನ್ನಳಾಗ್ತಾಳೆ

First Published | Nov 7, 2022, 4:28 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದ ತಕ್ಷಣ ಕೆಲವೊಂದು ಸಣ್ಣ ಕೆಲಸಗಳನ್ನು ಮಾಡುವ ಮೂಲಕ ತನ್ನ ಇಡೀ ದಿನವನ್ನು ಸುಂದರವಾಗಿಸಬಹುದು. ಈ ಕೆಲಸಗಳನ್ನು ಮಾಡುವುದರಿಂದ, ಮಾನಸಿಕ ಶಾಂತಿಯೊಂದಿಗೆ, ಸಕಾರಾತ್ಮಕ ಶಕ್ತಿಯನ್ನು ಪಡೆಯುತ್ತೀರಿ, ಇದರಿಂದ ವ್ಯಕ್ತಿಯೂ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಬಹುದು. ಹಾಗಿದ್ರೆ ನೀವು ಬೆಳಗ್ಗೆ ಎದ್ದ ತಕ್ಷಣ ಯಾವ ಕೆಲಸ ಮಾಡಬಹುದು ಅನ್ನೋದನ್ನು ನೋಡೋಣ. 

ಇಂದಿನ ಕಾಲದಲ್ಲಿ, ಪ್ರತಿಯೊಬ್ಬರೂ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು ಮತ್ತು ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು (happiness and prosperity) ಸಾಧಿಸಲು ಬಯಸುತ್ತಾರೆ. ಆದರೆ ಅನೇಕ ಬಾರಿ, ಕಷ್ಟಪಟ್ಟು ಕೆಲಸ ಮಾಡಿದರೂ, ನಾವು ಅಂದುಕೊಂಡಂತಹ ಯಶಸ್ಸನ್ನು ಪಡೆಯಲು ಸಾಧಿಸಲಾಗುವುದಿಲ್ಲ. ಜೊತೆ ತಿಂಗಳ ಕೊನೆಯಲ್ಲಿ, ಜೇಬಿನಲ್ಲಿ ಒಂದು ಪೈಸೆಯೂ ಉಳಿಯೋದಿಲ್ಲ ಎಂದು ಅನೇಕ ಬಾರಿ ತಲೆ ಚಚ್ಚಿಕೊಳ್ಳುತ್ತೇವೆ..

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಕಳಪೆ ಸ್ಥಾನದಿಂದಾಗಿ ಅನೇಕ ಬಾರಿ ಇದು ಸಂಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಬಯಸಿದರೆ, ನೀವು ಬೆಳಿಗ್ಗೆ ಆ ಸರಳ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳನ್ನು ಮಾಡೋದರಿಂದ, ನೀವು ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹ ಪಡೆಯುತ್ತೀರಿ ಮತ್ತು ಇದರಿಂದ ಮನೆಯಲ್ಲಿ ಸಂತೋಷ ಸದಾ ನೆಲೆಸುತ್ತೆ.

Tap to resize

ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಅನ್ನೋದನ್ನು ನೋಡೋಣ?
ಮುಖದ ಮೇಲೆ ಕೈಗಳು
ಧರ್ಮಗ್ರಂಥಗಳ ಪ್ರಕಾರ, ನೀವು ಬೆಳಿಗ್ಗೆ ಎದ್ದ ತಕ್ಷಣ, ಮೊದಲು, ದೇವರನ್ನು ನೆನಪಿಸಿಕೊಳ್ಳಿ. ಅದ್ಕಕಾಗಿ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಹೇಳುವಾಗ ನಿಮ್ಮ ಅಂಗೈಗಳನ್ನು ಮುಖದ ಮೇಲೆ ಇರಿಸಬೇಕು. ತಾಯಿ ಲಕ್ಷ್ಮಿಯೊಂದಿಗೆ ಬ್ರಹ್ಮ ಮತ್ತು ಸರಸ್ವತಿ ತಾಯಿ ಕೈಯಲ್ಲಿ ವಾಸಿಸುತ್ತಿದ್ದಾರೆ ಎಂದು ನಂಬಲಾಗಿದೆ. 
ಮಂತ್ರ - ‘ಕರಾಗ್ರೇ ವಸತೇ ಲಕ್ಷ್ಮಿ: ಕರಮಧ್ಯೆ ಸರಸ್ವತಿ,. ಕರ ಮೂಲೆ ಸ್ಥಿತೋ ಬ್ರಹ್ಮ ಪ್ರಭಾತೆ ಕರ್ದರ್ಶನಂ. '

ಭೂಮಿಯನ್ನು ಸ್ಪರ್ಶಿಸಿ 
ಪಾದಗಳನ್ನು ಹಾಸಿಗೆಯಿಂದ ಎದ್ದು ನೆಲದ ಮೇಲೆ ಇರಿಸುವ  ಮೊದಲು ಭೂಮಿಯನ್ನು ಕೈಗಳಿಂದ ಸ್ಪರ್ಶಿಸಬೇಕು. ಏಕೆಂದರೆ ಭೂಮಿಯನ್ನು ನಮ್ಮ ಭಾರವನ್ನು ಹೊರುವ ತಾಯಿಯಂತೆ ಪರಿಗಣಿಸಲಾಗುತ್ತದೆ. ಆದುದರಿಂದ ಭೂಮಿಯನ್ನು ಮೆಟ್ಟುವ ಮೊದಲು ನಮಸ್ಕರಿಸುವುದು ಉತ್ತಮ.

ಸೂರ್ಯನಿಗೆ ಅರ್ಘ್ಯ ಅರ್ಪಿಸಿ
ಧರ್ಮಗ್ರಂಥಗಳ ಪ್ರಕಾರ, ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಮತ್ತು ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಪ್ರತಿದಿನ ಸೂರ್ಯನನ್ನು ಪೂಜಿಸುವ ಮೂಲಕ, ಉದ್ಯೋಗ-ವ್ಯವಹಾರದಲ್ಲಿ ಲಾಭ ಸಿಗುತ್ತೆ, ಜೊತೆಗೆ ಆರ್ಥಿಕ ಪರಿಸ್ಥಿತಿ (economic condition) ಸುಧಾರಿಸುತ್ತೆ.

ತುಳಸಿ ಪೂಜೆ ಮಾಡಿ
ತುಳಸಿ ಪೂಜೆಯನ್ನು ಪ್ರತಿದಿನ ಬೆಳಿಗ್ಗೆ ಪೂಜೆಯೊಂದಿಗೆ ಮಾಡಬೇಕು. ಇದನ್ನು ಮಾಡುವುದರಿಂದ, ಭಗವಾನ್ ವಿಷ್ಣುವಿನ ಅನುಗ್ರಹವನ್ನು ತಾಯಿ ಲಕ್ಷ್ಮಿಯಿಂದ ಪಡೆಯಲಾಗುತ್ತದೆ. ಇದರೊಂದಿಗೆ, ತುಳಸಿ ಸಸ್ಯದಿಂದ (tulsi plant) ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅದನ್ನು ಹಣೆಗೆ ತಿಲಕದ ರೂಪದಲ್ಲಿ ಹಚ್ಚಿ.

ಈ ಸ್ತೋತ್ರಗಳನ್ನು ಪಠಣ ಮಾಡಿ
ಪ್ರತಿದಿನ ಲಕ್ಷ್ಮಿ ದೇವಿಯನ್ನು (Goddess Lakshmi) ಸರಿಯಾದ ರೀತಿಯಲ್ಲಿ ಪೂಜಿಸಿ. ಇದರೊಂದಿಗೆ, ಲಕ್ಷ್ಮಿ ಸ್ತೋತ್ರ ಮತ್ತು ಕನಕಧಾರಾ ಸ್ತೋತ್ರವನ್ನು ಪಠಿಸಿ. ಇದನ್ನು ಮಾಡುವ ಮೂಲಕ, ಮಹಾಲಕ್ಷ್ಮಿ ತುಂಬಾನೆ ಸಂತೋಷಗೊಳ್ಳುತ್ತಾಳೆ. ನಿಮ್ಮ ಮೇಲೆ ಲಕ್ಷ್ಮೀ ಮಾತೆಯ ಅನುಗ್ರಹ ಯಾವಾಗಲೂ ಇರುತ್ತದೆ.

Latest Videos

click me!