ಮುತ್ತೈದೆ ಎಂದು ಸಾರಿ ಹೇಳುವ 5 ಮುತ್ತುಗಳಿವು..

First Published Nov 7, 2022, 2:37 PM IST

ಮುತ್ತೈದೆ ಎಂಬ ಪದ ಎಲ್ಲರೂ ಕೇಳಿಯೇ ಇರುತ್ತೇವೆ. ಪೂಜೆ, ಸಭೆ ಸಮಾರಂಭಗಳೆಂದರೆ ಮುತ್ತೈದೆ, ಕನ್ನಿಕಾ ಮುತ್ತೈದೆಯರನ್ನು ಕರೆದು ಬಾಗೀನ ಕೊಡುವ ಪದ್ಧತಿ ಇದೆ. ಇಷ್ಟಕ್ಕೂ ಈ ಮುತ್ತೈದೆ ಎಂದರೆ ಯಾರು? 

ಮುತ್ತೈದೆ ಎಂಬ ಪದ ಎಲ್ಲರೂ ಕೇಳಿಯೇ ಇರುತ್ತೇವೆ. ಪೂಜೆ, ಸಭೆ ಸಮಾರಂಭಗಳೆಂದರೆ ಮುತ್ತೈದೆ, ಕನ್ನಿಕಾ ಮುತ್ತೈದೆಯರನ್ನು ಕರೆದು ಬಾಗೀನ ಕೊಡುವ ಪದ್ಧತಿ ಇದೆ. ಇಷ್ಟಕ್ಕೂ ಈ ಮುತ್ತೈದೆ ಎಂದರೆ ಯಾರು? 
 

ತಾಳಿ, ಕುಂಕುಮ, ಬಳೆ, ಕಾಲುಂಗುರ, ಮೂಗುಬೊಟ್ಟು- ಈ ಐದು ಮುತ್ತನ್ನ ಹಾಕಿದವರು ಮುತ್ತೈದೆ. ಅಂದರೆ ವಿವಾಹಿತೆಯನ್ನು ಮುತ್ತೈದೆ ಎನ್ನಲಾಗುತ್ತದೆ. ಇನ್ನೊಂದು ವ್ಯಾಖ್ಯಾನದಂತೆ ನಯ, ವಿನಯ, ಅನುಕಂಪ, ತ್ಯಾಗ, ಲಜ್ಜೆಯನ್ನು ಹೊಂದಿದವಳೇ ಮುತ್ತೈದೆ ಎಂದೂ ಹೇಳಲಾಗುತ್ತದೆ. 

ಹೆಣ್ಣು ಚಂಚಲೆ. ಆ ಚಂಚಲತೆ ಕಡಿಮೆ ಮಾಡಲು ಕುಂಕುಮವಿಟ್ಟು ಅಗ್ನಿಬಂಧನ, ಮೂಗುತಿ ಹಾಕಿ ವಾಯುಬಂಧನ, ತಲೆಯಲ್ಲಿ ಬೈತಲೆ ತೆಗೆದು ಬಾಚಿ ಆಕಾಶ ತತ್ವ ಬಂಧನ, ಕಿವಿ ಚುಚ್ಚಿ ಜಲ ತತ್ವದ ಬಂಧನ,  ಕಾಲುಂಗುರ ಹಾಕಿ ಅಥವಾ ಅರಿಶಿನ ಹಚ್ಚಿ ಭೂಬಂಧನ ಮಾಡಲಾಗುತ್ತದೆ ಎಂಬ ವಿವರಣೆಯೂ ಇದೆ. ಅದಕ್ಕೇ ಏನೋ ಸಂಸಾರ ಬಂಧನವೆನ್ನುವುದು!

ಬಳೆ
ಹಿಂದೆಲ್ಲ ವಿವಾಹಿತ ಮಹಿಳೆಯು ಪ್ರತಿ ಕೈಗೂ 12 ಗಾಜಿನ ಬಳೆಗಳನ್ನು ಧರಿಸಬೇಕು ಎಂಬ ನಿಯಮವಿತ್ತು. ಇದರಿಂದ ಆಕೆ, ಹೆಚ್ಚು ಸದ್ದಾಗದಂತೆ ಕೆಲಸ ನಿರ್ವಹಿಸಲು ಗಮನ ಕೊಡುವುದರಿಂದ ನಯನಾಜೂಕು ಕಲಿಯುತ್ತಾಳೆ ಎಂಬ ಉದ್ದೇಶ ಒಂದಾದರೆ,  ಕೈನ ಮಣಿಕಟ್ಟಿನ ಸುತ್ತ ಬಳೆ ಧರಿಸುವುದರಿಂದ ಈ ಮಣಿಕಟ್ಟು ಪದೇ ಪದೇ ಬಳೆಯ ಸಂಪರ್ಕಕ್ಕೆ ಬಂದು ಪ್ರಚೋದನೆಗೆ ಒಳಗಾಗುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಇದರಿಂದ ಮಹಿಳೆ ಹೆಚ್ಚು ಆರೋಗ್ಯವಂತಳಾಗಿರುತ್ತಾಳೆ ಎಂಬ ಕಾರಣ ಮತ್ತೊಂದು. ವಿವಾಹಿತ ಮಹಿಳೆಯರು ಧರಿಸುವ ಬಳೆಗಳು ಪತಿಯ ದೀರ್ಘಾಯುಷ್ಯವನ್ನು ಸೂಚಿಸುತ್ತವೆ.

ಮೂಗುಬೊಟ್ಟು
ಮೂಗುತಿ ಧರಿಸುವುದರಿಂದ ಮಹಿಳೆಯರ ಚಂದ್ರನಾಡಿ ಜಾಗೃತವಾಗಿ ಆಕೆಯ ಚಂಚಲ ಮನಸ್ಸನ್ನು ಎಳೆದು ಕಟ್ಟುತ್ತದೆ ಎಂಬ ನಂಬಿಕೆ ಇದೆ. ಮೂಗುತಿ ಹಾಕುವುದರಿಂದ ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳೂ ಕಡಿಮೆಯಾಗುತ್ತವೆ. 

ಕುಂಕುಮ
ಸುಮಂಗಲಿ ಎನಸಿಕೊಂಡಾಗೆ ಹಣೆಯಲ್ಲಿ ತಿಲಕವಿಡಬೇಕು. ಈ ಜಾಗದಲ್ಲಿ ಲಕ್ಷ್ಮೀನಾರಾಯಣ ನೆಲೆಸಿರುತ್ತಾನೆ ಎನ್ನಲಾಗುತ್ತದೆ. ಅಲ್ಲದೆ, ಈ ಕುಂಕುಮವು ಏಕಾಗ್ರತೆ ಹೆಚ್ಚಿಸುವ ಜೊತೆಗೆ, ಆಕೆಯ ಸೌಭಾಗ್ಯವನ್ನೂ ಹೆಚ್ಚಿಸುತ್ತದೆ ಎನ್ನಲಾಗುತ್ತದೆ. 

ಕಾಲುಂಗುರ
ಬೆಳ್ಳಿಯ ಕಾಲುಂಗುರವನ್ನು ವಿವಾಹದಲ್ಲಿ ಪತಿಯು ಪತ್ನಿಯ ಕಾಲ್ಬೆರಳುಗಳಿಗೆ ತೊಡಿಸುತ್ತಾನೆ. ಇದು ಮಹಿಳೆಯ ಗರ್ಭಕೋಶವನ್ನು ಆರೋಗ್ಯವಾಗಿಡುತ್ತದೆ ಎಂಬ ನಂಬಿಕೆ ಇದೆ. ಏಕೆಂದರೆ ಕಾಲಿನ ಎರಡನೇ ಬೆರಳಲ್ಲಿರುವ ಪ್ರೆಶರ್ ಪಾಯಿಂಟ್ ಗರ್ಭಕೋಶಕ್ಕೆ ಸಂಬಂಧಿಸಿದೆ. ನಡೆಯುತ್ತಿದ್ದರೆ ಎರಡನೇ ಬೆರಳಿಗೆ ಪ್ರೆಷರ್ ಬೀಳುತ್ತದೆ. ಅವಾಗ ಬೆರಳಿನಲ್ಲಿರುವ ನರ ಗರ್ಭಕೋಶದ ಮೂಲಕ ಹೃದಯದಕ್ಕೆ ಕನೆಕ್ಟ್ ಆಗುತ್ತದೆ. ಇದರಿಂದ ಉತ್ಪಾದಕ ಅಂಗಗಳ ಅರೋಗ್ಯ ಹೆಚ್ಚುತ್ತದೆ ಎನ್ನಲಾಗುತ್ತದೆ. 

ತಾಳಿ
ಗಂಡು ಹೆಣ್ಣಿಗೆ ತಾಳಿ ಕಟ್ಟುವ ಸಂದರ್ಭದಲ್ಲಿ ಮುಕ್ಕೋಟಿ ದೇವರು ಆಶೀರ್ವಾದದ ಮಳೆ ಸುರಿಸುತ್ತಿರುತ್ತಾರೆ ಎಂಬ ಮಾತಲ್ಲೇ ತಾಳಿಯ ಪಾವಿತ್ರ್ಯತೆ ಇದೆ. ವಿವಾಹದಲ್ಲಿ ತಾಳಿ ಕಟ್ಟುವ ಮುನ್ನ ಅದನ್ನು ಎಲ್ಲ ಹಿರಿಯರ ಮುಂದೆ ಹಿಡಿದು ಆಶೀರ್ವಾದ ಬೇಡಲಾಗುತ್ತದೆ. ನಂತರ ಕಟ್ಟಿದ ತಾಳಿಯು ಪತಿಪತ್ನಿ ಇಬ್ಬರಿಗೂ ಸದಾ ರಕ್ಷಾದಾರವಾಗಿ, ಅದರಲ್ಲಿರುವ ಕರಿಮಣಿ ದೃಷ್ಟಿಯಾಗದಂತೆ ಕಾಯುತ್ತದೆ. ಅದರ ಹೆಸರೇ ಮಂಗಲಸೂತ್ರವಾಗಿದ್ದು, ಅದು ದಂಪತಿಯ ಬದುಕಲ್ಲಿ ಸನ್ಮಂಗಳವನ್ನು ತರುತ್ತದೆ. 

click me!